janadhvani

Kannada Online News Paper

ಉದ್ಯೋಗವಿಲ್ಲವೇ….! ಇದನ್ನು ಓದಿ

ಪ್ರಾಣಿಗಳಿಗೆ ಬುದ್ಧಿಶಕ್ತಿ ಇಲ್ಲ ಆದರೆ ಮನುಷ್ಯನಿಗೆ ಬುದ್ಧಿ ಇದೆ, ಚಿಂತಿಸುವ ಶಕ್ತಿ ಇದೆ. ಇದುವೇ ಮನುಷ್ಯನಾಗಿ ಜನ್ಮ ತಾಳಿದ ನಮಗೆ ಸಿಕ್ಕಿರುವ ದೊಡ್ಡ ಅನುಗ್ರಹ. ಪ್ರಕ್ರತಿ ಮತ್ತು ಪ್ರಾಣಿ ಪಕ್ಷಿಗಳು ನೀಡುವಷ್ಟು ಸ್ಪೂರ್ತಿ ಜಗತ್ತಿನಲ್ಲಿ ಯಾವ ವ್ಯಕ್ತಿಯಿಂದಲೂ ನೀಡಲು ಸಾಧ್ಯವಿಲ್ಲ ಎಂದು ನನ್ನ ಭಾವನೆ. ಪ್ರಾಣಿ ಪಕ್ಷಿಗಳು ಆತ್ಮಹತ್ಯೆ ಮಾಡಿರುವುದಾಗಿ ಯಾವತ್ತಾದರೂ ಕೇಳಿದ್ದೀರ..? ಕೇಳಿರಲು ಸಾಧ್ಯವೇ ಇಲ್ಲ ಯಾಕೆಂದರೆ ಪ್ರಾಣಿ ಪಕ್ಷಿಗಳಲ್ಲಿ ಪ್ರತ್ಯೇಕವಾದ ಒಂದು ಸ್ವಭಾವವಿದೆ. ತನಗೆ ಅಗತ್ಯವಿರುವುದನ್ನು ಹುಡುಕುತ್ತೆ, ಬೇಟೆಯಾಡುತ್ತೆ. Birds & Animals Focus on Goals ಪ್ರಕ್ರತಿ ಮತ್ತು ಪ್ರಾಣಿಗಳಿಂದ ಮನುಷ್ಯ ಕಲಿಯಬೇಕಾದ ವಿಚಾರಗಳನ್ನು ಬರೆಯಲು ಇಲ್ಲಿ ಇಚ್ಛಿಸುವುದಿಲ್ಲ ಯಾಕೆಂದರೆ ಒಂದೋ ಎರಡೋ ಪುಟಗಳಲ್ಲಿ ಅಲ್ಲ, ಇಡೀ ಪುಸ್ತಕದಲ್ಲಿ ಮುಗಿಸುವಷ್ಟು ವಿಚಾರಗಳಿವೆ.

ಗುರಿ ಇಲ್ಲದ ವ್ಯಕ್ತಿಗೆ ದಾರಿ ಯಾವುದು…?
ಹಲವಾರು ಯುವಕರು ತಮ್ಮ ವಿಧ್ಯಾಭ್ಯಾಸ ಪೂರ್ತಿಗೊಳಿಸಿ ಯಾವ ಉದ್ಯೋಗಕ್ಕೆ ಹೋಗಬೇಕೆನ್ನುವುದೇ ತಿಳಿಯದೆ ಗೊಂದಲದಲ್ಲಿರುತ್ತಾರೆ ಯಾಕೆಂದರೆ ಶಾಲಾ ಕಾಲೇಜುಗಳಲ್ಲಿ ಕಳಿಸುವ Subject ಮತ್ತು Job Title’ಗೆ ಸಮಾನತೆ ಇರುವುದಿಲ್ಲ. ಉದಾಹರಣೆಗೆ Engineering ಮುಗಿಸಿದ ವ್ಯಕ್ತಿ Engr ಉದ್ಯೋಗವನ್ನೇ ಹುಡಕಬೇಕೆಂದಿಲ್ಲ. Site Engr, Junior Engr, Site Supervisor, Junior Quality Engr, Planner, 3d Designer, Draughtsman, Sales Engr ಹೀಗೇ ಹಲವಾರು ರೀತಿಯ ಉದ್ಯೋಗಾವಕಾಶಗಳಿರುತ್ತೆ. ಹಾಗೆಯೇ BBM ಮತ್ತು ಇನ್ನಿತರ ಪದವೀಧರರಿಗೆ Accounting ಉದ್ಯೋಗವಲ್ಲದೆ ಇನ್ನಿತರ ಹಲವಾರು ರೀತಿಯ ಉದ್ಯೋಗಾವಕಾಶಗಳಿವೆ. ಅನುಭವೀ ವ್ಯಕ್ತಿಗಳೊಂದಿಗೆ ಮಾತನಾಡಿ ತನ್ನ Education ಮತ್ತು Skill ಬಗ್ಗೆ ತಿಳಿಸಿ.

ಉದ್ಯೋಗದಲ್ಲಿರುವ ಜವಾಬ್ದಾರಿ, ಸಂಬಳ ಮತ್ತು ಅದರಲ್ಲಿ ಭವಿಷ್ಯದಲ್ಲಿ ಮುಂದುವರಿಯಬಹುದಾದ ವಿಚಾರಗಳ ಬಗ್ಗೆ ಸಲಹೆ ಪಡೆಯಿರಿ.

ಹಲವರೊಂದಿಗೆ ಸಲಹೆ ಪಡೆದು ನಿಮಗೆ ಸೂಕ್ತವಾಗುವ ಕೆಲವು ಅಂದರೆ ಒಂದು ನಿರ್ದಿಷ್ಟ ಸಂಖ್ಯೆಯಲ್ಲಿನ ಉದ್ಯೋಗದ Title’ಗಳನ್ನು ಆಯ್ಕೆ ಮಾಡಿಕೊಂಡು ಬರೆದಿಟ್ಟುಕ್ಕೊಲ್ಲಿ. ಮೊದಲನೇ ಬಾರಿ ಯಾತ್ರೆ ಹೊರಟ ವ್ಯಕ್ತಿ ಹಲವಾರು ಯಾತ್ರೆ ಮಾಡಿದ ವ್ಯಕ್ತಿಯೊಂದಿಗೆ ದಾರಿ ಕೇಳಿ ಹೊರಟರೆ ದಾರಿ ತಪ್ಪದೆ ಸುಲಭವಾಗಿ ಬಹುಬೇಗನೆ ಗುರಿ ತಲುಪಬಹುದು.
Whoever travels without a guide, needs two hundred years for a two-day journey”

ಎಲ್ಲಾ ಬಾಗಿಲು ತೆರೆದಿಲ್ಲ, ನೀವು ಬಾಗಿಲನ್ನು ತಟ್ಟಿದರೆ ಮಾತ್ರ ಅವರು ತೆರೆಯುತ್ತಾರೆ.
ನೀವು ಅಯ್ಕೆ ಮಾಡಿ ಬರೆದಿಟ್ಟುಕೊಂಡಿರುವ ನಿಮ್ಮ ವಿಧ್ಯಾಭ್ಯಾಸ ಮತ್ತು ಕೌಶಲ್ಯಕ್ಕೆ ಅವಕಾಶವಿರುವ ಉದ್ಯೋಗವನ್ನು ಹುಡುಕಲು ಆರಂಭಿಸಿ. ನಿಮ್ಮ ಸ್ನೇಹಿತರು ಮತ್ತು ಸಂಭಂದಿಕರು ನಿಮಗೋಸ್ಕರ ಉದ್ಯೋಗ ಹುಡುಕುತ್ತಾರೆ ಎಂಬ ಭಾವನೆಯಿಂದ ಹೊರಗೆ ಬನ್ನಿ ಯಾಕೆಂದರೆ ಅವರು ತಮ್ಮ ಉದ್ಯೋಗ ಅಥವಾ ವ್ಯಾಪಾರದಲ್ಲಿ ತೊಡಗಿಸಿಕೊಂಡಿರುತ್ತಾರೆ, ಅವರಿಗೆ ನಿಮ್ಮ ಬಗ್ಗೆ ಚಿಂತಿಸಲು ಸಮಯಾವಕಾಶದ ಕೊರತೆ ಇರಬಹುದು. ಒಬ್ಬ ವ್ಯಕ್ತಿಯ ಚಿತ್ರಣ ಕಣ್ಣ ಮುಂದೆ ಬಂದಾಗಲೇ ಆತನ ವಿಚಾರವು ನೆನಪಿಗೆ ಬರುವುದು. ಇದು ಬದಲಾಗದ ಜಗತ್ತಿನ ಸತ್ಯ. ಅವರು ನಿಮಗೆ ಉದ್ಯೋಗವನ್ನು ಹುಡುಕುವ ಪ್ರಯತ್ನದಲ್ಲಿರುತ್ತಾರೆ ಆದರೆ ನಿಮ್ಮ ಆಪ್ತರು ನಿಮಗೋಸ್ಕರ ಉತ್ತಮವಾದ ಉದ್ಯೋಗಾವಕಾಶ ಮಾಡಿಕೊಡಲು ಪ್ರಯತ್ನಿಸುತ್ತಾರೆ. ನಿಮಗೆ ಉದ್ಯೋಗ ಮಾಡಿಕೊಟ್ಟರೆ ನೀವು ಉದ್ಯೋಗಕ್ಕೆ ಸೇರುವ ಕಂಪೆನಿಯಲ್ಲಿ ವ್ಯವಸ್ಥೆ ಸರಿಯಾಗಿರದೆ ನಿಮ್ಮನ್ನು ಸಂಕಷ್ಟಕ್ಕೆ ಸಿಲುಕಿಸಿಬಿಡುತ್ತೇನೋ ಎಂಬ ಭಯವೂ ಅವರಲ್ಲಿರುತ್ತೆ. ಸಂಭಂದಿಕರ ಮತ್ತು ಸ್ನೇಹಿತರೊಂದಿಗೆ ಉದ್ಯೋಗಕ್ಕಾಗಿ ಅನ್ವೇಷಿಸಿ ಆದರೆ ಅದೇ ಸಮಯದಲ್ಲಿ ಬೇರೆ ರೀತಿಯ ಹುಡುಕಾಟವನ್ನೂ ನಡೆಸಿ. *ಇದು ನಿಮ್ಮ ದಾರಿ,ಇತರರು ನಿಮ್ಮೊಂದಿಗೆ ನಡೆಯಬಹುದು ಆದರೆ ನಿಮಗೋಸ್ಕರ ನಡೆಯುವುದಿಲ್ಲ.

ನೀವು ಹುಡುಕಾಟ ನಡೆಸಬಹುದಾದ ಕೆಲವೊಂದು ದಾರಿ ಹೀಗಿದೆ:
– ನಿಮ್ಮ ಸ್ನೇಹಿತರು ಮತ್ತು ಸಂಬಂಧಿಕರು ಉದ್ಯೋಗ ಮಾಡುತ್ತಿರುವ ಕಂಪೆನಿಗಳು.
– ಉದ್ಯೋಗದ ವೆಬ್ಸೈಟ್’ಗಳ ಮೂಲಕ.
ಉದಾಃ: indeed, Timesjobs, Naukrigulf, Monster etc…..
– Classifieds Website ಮೂಲಕ. ವಿದೇಶದಲ್ಲಿ ಉದ್ಯೋಗ ಹುಡುಕಾಟ ನಡೆಸುವುದಾದಲ್ಲಿ ಆ ದೇಶದ Classified website ಯಾವುದೆಂದು ಅನ್ವೇಷಣೆ ಮಾಡಿ.(ಗೂಗಲ್’ನಲ್ಲಿ Classified website of Dubai ಎಂದು ಹುಡುಕಿ)
– LinkedIn(ಅತೀ ವೇಗದಲ್ಲಿ ಉದ್ಯೋಗ ಹುಡುಕಲು ಸೂಕ್ತವಾದ Social Network site.)
– Twitter’ನಲ್ಲಿ space ಮೂಲಕವೂ ಉದ್ಯೋಗಕ್ಕೆ ನೇಮಕಾತಿ ಮಾಡುವ Trend ಚಾಲ್ತಿಯಲ್ಲಿದೆ.
– ನಿಮಗೆ ತಿಳಿದಿರುವ ಕಂಪೆನಿಗಳ website’ನಲ್ಲಿ Careers ಎಂಬ ಆಯ್ಕೆ ಇದೆ. ಅದರಲ್ಲಿ ನಿಮ್ಮ CV submit ಮಾಡಿ ಆ ಕಂಪೆನಿಗೆ ಕರೆ ಮಾಡಿ ಮಾತನಾಡಿ.
– Consulting Service (ಎಲ್ಲಾ ಪ್ರಯತ್ನ ಮುಗಿದ ನಂತರ ಕೊನೆಯಲ್ಲಿ ಮಾಡುವ ಆಯ್ಕೆ ಇದು).

ನಿಮಗೆ ಉದ್ಯೋಗದ ಅಗತ್ಯವಿದ್ದಂತೆಯೇ, ಕಂಪೆನಿಗಳಿಗೆ ಉದ್ಯೋಗಸ್ಥರ ಅಗತ್ಯವಿದೆ ಎನ್ನುವುದನ್ನು ಮರೆಯಬೇಡಿ

ಮೇಲಿನ ಬರಹದ ಬಗ್ಗೆ ನಿಮ್ಮ ವಿಚಾರವನ್ನು ತಿಳಿಸಿ.
ಈ ಬಗ್ಗೆ ಇನ್ನಷ್ಟು ಮಾಹಿತಿ ಬರಹದ ಮೂಲಕ ತಿಳಿಸಬೇಕೆಂಬ ಅಭಿಪ್ರಾಯವಿದ್ದಲ್ಲಿ ಕೆಳಗೆ ನೀಡಿರುವ ನಂಬರ್’ಗೆ ವಾಟ್ಸಪ್ ಮೆಸೇಜ್ ಮೂಲಕ ತಿಳಿಸಿ.

+91 9632130659

✒️ಇಂಝಾಮ್ ಬಜ್ಪೆ

error: Content is protected !! Not allowed copy content from janadhvani.com