ಉಡುಪಿ ಸರಕಾರಿ ಬಾಲಕಿಯರ ಪದವಿ ಪೂರ್ವ ಕಾಲೇಜಿನ ಲ್ಲಿ ವಿಧ್ಯಾಭ್ಯಾಸ ಮಾಡುತ್ತಿರುವ ಮುಸ್ಲಿಮ್ ವಿದ್ಯಾರ್ಥಿನಿಯರು,ಅವರ ಧಾರ್ಮಿಕ ಪೋಶಾಕು ಹಿಜಾಬ್ ಧರಿಸಿ ಕಾಲೇಜು ಪ್ರವೇಶಿಸುವುದನ್ನು ನಿರಾಕರಿಸುವ ಕಾಲೇಜಿನ ಅಧ್ಯಾಪಕರ ನಡೆ ಖಂಡನೀಯ.
ವಿದ್ಯಾರ್ಥಿಗಳು ಅವರ ಸ್ವ ಧರ್ಮ ಸ್ವಾತಂತ್ರ್ಯ ದ ಭಾಗವಾಗಿ ಶಿರವನ್ನು ಹಿಜಾಬ್ ಮೂಲಕ ಮುಚ್ಚಿ,ಸಾರ್ವಜನಿಕವಾಗಿ ಬೆರೆಯುವುದು,ಇಂದು ನಿನ್ನೆಯ ಪದ್ಧತಿ ಅಲ್ಲ. ಈ ಪದ್ಧತಿ ಮುಸ್ಲಿಮ್ ಮತ್ತು ಇತರ ಸಮುದಾಯದಲ್ಲಿ ಅನಾದಿ ಕಾಲದಿಂದ ರೂಡಿಯಲ್ಲಿರುವ ಒಂದು ಧಾರ್ಮಿಕ ಮೂಲಭೂತ,ಸಾಂವಿಧಾನಿಕ ಖಡ್ಡಾಯ ಕ್ರಮವಾಗಿದೆ. ಈ ಪದ್ಧತಿಯನ್ನು ಅಳವಡಿಸಿ ಯಾವುದೇ ಮಹಿಳೆ ಸಾರ್ವಜನಿಕವಾಗಿ ತನ್ನನು ಬಿಂಬಿಸಿದರೆ,ಅಂತಃ ಪದ್ಧತಿಯನ್ನು ನಿರಾಕರಿಸುವ ಹಕ್ಕು ಯಾರಿಗೂ ಇಲ್ಲ.
ಉಡುಪಿಯ ಶಿಕ್ಷಣ ಸಂಸ್ಥೆಯ ಪ್ರಾಂಶುಪಾಲರು,ಪೂರ್ವಗ್ರಹ ಪೀಡಿತ,ಮತೀಯ ಮನಸ್ಥಿತಿಯಿಂದ ಹಿಜಾಬ್ ಯುಕ್ತ,ಮುಗ್ದ ಮುಸ್ಲಿಮ್ ವಿದ್ಯಾರ್ಥಿನಿಯರನ್ನು ಶಾಲೆಗೆ ಸರ್ಪಡಿಸಲು ನಿರಾಕರಿಸಿರುವುದು,ವಿದ್ಯಾರ್ಥಿನಿಯರ ಶೈಕ್ಷಣಿಕ,ಧಾರ್ಮಿಕ,ಮಾನವ ಹಕ್ಕು,ಸಾಂವಿಧಾನಿಕ ಹಕ್ಕುಗಳ ಸಂಪೂರ್ಣ ಉಲ್ಲಂಘನೆಯಾಗಿದೆ.
ಪ್ರಾಂಶುಪಾಲರ ಈ ವರ್ತನೆ ಮಹಿಳಾ ಮತ್ತು ಬಾಲಕಿಯರ ಶಿಕ್ಷಣದ ಹಕ್ಕನ್ನು ವಂಚಿಸಿದೆ. ಈ ಕೃತ್ಯ ಖಂಡನೀಯ,ರಾಜ್ಯ ಶಿಕ್ಷಣ ಇಲಾಖೆ,ಅಧ್ಯಾಪಕರ ಕೃತ್ಯವನ್ನು ಪರಿಗಣಿಸಿ,ಅಮಾನತು ಗೊಳಿಸಬೇಕು ಮತ್ತು ಸಂತ್ರಸ್ತೆ ವಿದ್ಯಾರ್ಥಿನಿಯರನ್ನು ತಕ್ಷಣದಿಂದ ಸಂಸ್ಥೆಗೆ ಸೇರ್ಪಡಿ ಸಬೇಕು.
ಕೆ.ಅಶ್ರಫ್
ದ.ಕ. ಜಿಲ್ಲಾ ಮುಸ್ಲಿಮ್ ಒಕ್ಕೂಟ.