janadhvani

Kannada Online News Paper

ಸ್ಕಾರ್ಫ್ ಹಾಕಿದ್ದಕ್ಕೆ ತರಗತಿ ನಿರಾಕರಿಸಿದ್ದು ಖಂಡನಾರ್ಹ ಕೆ ಎಮ್ ಜೆ ಉಡುಪಿ ಜಿಲ್ಲಾ ಸಮಿತಿ

ಉಡುಪಿ: ಉಡುಪಿ ಸರಕಾರಿ ಪಿಯು ಬಾಲಕಿಯರ ಕಾಲೇಜಿನಲ್ಲಿ ಸ್ಕಾರ್ಫ್ ಹಾಕಿದ್ದಕ್ಕೆ ತರಗತಿಗೆ ಪ್ರವೇಶವನ್ನು ನಿರಾಕರಿಸಿ, ಕಳೆದ ನಾಲ್ಕು ದಿನಗಳಿಂದ
ಆರು ವಿದ್ಯಾರ್ಥಿನಿಯರನ್ನು ತರಗತಿ ಪ್ರವೇಶಿಸಲು ಅವಕಾಶ ನೀಡದೆ ಇರುವುದು ಖಂಡನಾರ್ಹವಾಗಿದೆ.

ಕಾಲೇಜಿನಲ್ಲಿ ತರಗತಿಗೆ ಪ್ರವೇಶಿಸಲು ಅನುಮತಿ ನಿರಾಕರಣೆ ಮಾತ್ರವಲ್ಲ ಧಾರ್ಮಿಕವಾಗಿ ವಿಧ್ಯಾರ್ಥಿನಿಯರನ್ನು ವಿಭಜಿಸಿರುವುದು ಅಕ್ಷಮ್ಯ ಅಪರಾಧ.

ಸರ್ಕಾರಿ ಶಾಲೆಗಳಲ್ಲಿ ಕೂಡ ಇಂತಹ ಘಟನೆ ನಡೆಯುತ್ತಿರುವುದು ದುರದೃಷ್ಟಕವಾಗಿದ್ದು ಈ ಬಗ್ಗೆ ಶಿಕ್ಷಣ ಇಲಾಖೆಯವರು ಹಾಗೂ ಸಂಭಂದ ಪಟ್ಟ ಅಧಿಕಾರಿಗಳು ಮಧ್ಯಪ್ರವೇಶಿಸಿ ಇದಕ್ಕೊಂದು ಶಾಶ್ವತ ಪರಿಹಾರ ಕಂಡುಕೊಳ್ಳಬೇಕು ಹಾಗು ವಿದ್ಯಾರ್ಥಿನಿಯರ ವಿದ್ಯಾಭ್ಯಾಸಕ್ಕೆ ಯಾವುದೇ ರೀತಿಯ ತೊಂದರೆಯಾಗದಂತೆ ಕ್ರಮ ಕೈಗೊಳ್ಳಬೇಕೆಂದು ಕರ್ನಾಟಕ ಮುಸ್ಲಿಂ ಜಮಾಅತ್ ಉಡುಪಿ ಜಿಲ್ಲಾ ಸಮಿತಿ ಆಗ್ರಹಿಸಿದೆ.

error: Content is protected !! Not allowed copy content from janadhvani.com