ಬಂಟ್ವಾಳ : ಮಸೀದಿಗಳಿಂದ ದಿನ ನಿತ್ಯ ಮೊಳಗುವ ಅಝಾನ್ ಕರೆಯನ್ನು, ಅಪಪ್ರಚಾರ ಮಾಡಿ, ಸಮುದಾಯಗಳ ನಡುವೆ ದ್ವೇಷವನ್ನುಂಟು ಮಾಡುವ ರೀತಿಯಲ್ಲಿ ಪ್ರಚೋದನಕಾರಿ ಭಾಷಣ ಮಾಡಿರುವ ಹಾರಿಕಾ ಮಂಜುನಾಥ್ ವಿರುದ್ಧ ದೂರು ದಾಖಲಿಸಲಾಗಿದೆ.
ಅಝಾನ್ ಎಂಬ ಶಾಂತಿಯ ಸಂದೇಶವನ್ನು ಸಾರುವ ಪವಿತ್ರ ಕರೆಯನ್ನು, “ಮುಸ್ಲಿಮೇತರರನ್ನು ಕೊಲ್ಲಿರಿ ಎಂದಾಗಿದೆ ಮಸೀದಿಯಿಂದ ಮೊಳಗುವ ಅಝಾನ್ ಕರೆಯಲ್ಲಿ ಹೇಳುತ್ತಿರುವುದು” ಎಂದು ತನ್ನ ಭಾಷಣದ ಮೂಲಕ ಸಮಾಜಕ್ಕೆ ತಪ್ಪು ಸಂದೇಶವನ್ನು ರವಾನಿಸಿ, ಕೋಮು ಪ್ರಚೋದನೆಗೆ ಕುಮ್ಮಕ್ಕು ನೀಡಿದ್ದಾರೆ.
ಬೆಳ್ತಂಗಡಿಯಲ್ಲಿ ಸೋಮವಾರ ಹಿಂದೂ ಸಂಘಟನೆಗಳ ನೇತೃತ್ವದಲ್ಲಿ ಕಿನ್ಯಮ್ಮ ಸಭಾಂಗಣದಲ್ಲಿ ಹಮ್ಮಿಕೊಳ್ಳಲಾಗಿದ್ದ ಗೀತಾ ಜಯಂತಿ ಸೌರ್ಯ ಪಥಸಂಚಲನ ಕಾರ್ಯಕ್ರಮದಲ್ಲಿ ಬೆಂಗಳೂರಿನ ಹಾರಿಕಾ ಮಂಜುನಾಥ್ ಅವರು ಮುಸ್ಲಿಮರ ಅಝಾನ್ ಬಗ್ಗೆ ದುರುದ್ದೇಶಪೂರಕ ತಪ್ಪು ವ್ಯಾಖ್ಯಾನ ನೀಡಿದ್ದರು.
ಇದರಿಂದ ಸಮಾಜಕ್ಕೆ ತಪ್ಪು ಮಾಹಿತಿ ರವಾನೆಯಾಗುತ್ತದೆ. ಎಂದು ಬಿಸ್ಮಿಲ್ಲಾ ಜುಮ್ಮಾ ಮಸೀದಿ ಆಡಳಿತ ಕಮಿಟಿ
ವತಿಯಿಂದ ದೂರು ನೀಡಲಾಗಿದೆ.