ರಿಯಾದ್: ಸೌದಿ ಅರೇಬಿಯಾಲ್ಲಿ ವಿದೇಶಿಗಳ ಉದ್ಯೋಗಾವಕಾಶಗಳು ಅಧಿಕವಾಗಲಿದೆ ಎಂದು ರಾಜಕುಮಾರ ಮುಹಮ್ಮದ್ ಬಿನ್ ಸಲ್ಮಾನ್ ಹೇಳಿದರು, ದೇಶವು ಪ್ರಗತಿಯ ಹಾದಿಯಲ್ಲಿದೆ ಆ ಕಾರಣಕ್ಕಾಗಿ ದೇಶೀಯರಂತೆ ವಿದೇಶಿಗಳಿಗೂ ಹಲವಾರು ಉದ್ಯೋಗಾವಕಾಶಗಳು ಕಾಯುತ್ತಿದೆ ಎಂದು ರಾಜಕುಮಾರ ತಿಳಿಸಿದ್ದಾರೆ.
ಅಮೆರಿಕಾ ಪರ್ಯಟನೆಯ ವೇಳೆ ಪ್ರಮುಖ ಪ್ರಾದೇಶಿಕ ಪತ್ರಿಕೆಗೆ ನೀಡಿದ ಸಂದರ್ಶನವೊಂದರಲ್ಲಿ, ಸಲ್ಮಾನ್ ರಾಜಕುಮಾರ ಸೌದಿ ಅರೇಬಿಯಾದಲ್ಲಿ ವಿದೇಶೀಯರಿಗೆ ಉದ್ಯೋಗ ಅವಕಾಶಗಳ ಹೆಚ್ಚಳದ ಬಗ್ಗೆ ವ್ಯಕ್ತಪಡಿಸಿದ್ದರು. ಆದ್ದರಿಂದ ವಿದೇಶೀಯರ ಸಂಖ್ಯೆಯು ಗಣನೀಯವಾಗಿ ಏರಲಿದೆ.
ದೇಶೀಯ ಮತ್ತು ವಿದೇಶಿ ಕೆಲಸಗಾರರಿಗೆ ಸಾಕಷ್ಟು ಉದ್ಯೋಗ ಅವಕಾಶಗಳಿವೆ. ಕಳೆದ ಮೂರು ವರ್ಷಗಳಲ್ಲಿ, ದೇಶದ ಬದಲಾವಣೆಯು ಕಳೆದ 30 ವರ್ಷಗಳಲ್ಲಿ ಉಂಟಾದ ಬದಲಾವಣೆಗಳಿಗಿತಲೂ ಮಿಗಿಲಾಗಿದೆ. ಹತ್ತು ಮಿಲಿಯನ್ ವಲಸಿಗರು ಈಗ ಸೌದಿಯಲ್ಲಿದ್ದಾರೆ,ಅದು ಕಡಿಮೆಯಾಗಲಾರದು ಯಾಕೆಂದರೆ ದೇಶವು ಪ್ರಗತಿಯ ಹಾದಿಯಲ್ಲಿದೆ.
ಆದ್ದರಿಂದ,ಬಹಳಷ್ಟು ಮಾನವ ಸಂಪನ್ಮೂಲಗಳ ಅಗತ್ಯವಿದೆ ಎಂದು ಸಲ್ಮಾನ್ ರಾಜಕುಮಾರ ಹೇಳಿದರು. ದೇಶವು ಆರ್ಥಿಕವಾಗಿ ಪ್ರಗತಿಪರವಾಗಿದೆ. ದೇಶದಲ್ಲಿ ಸಾರ್ವಜನಿಕ ಠೇವಣಿ ನಿಧಿಯು 160 ಬಿಲಿಯನ್ ನಿಂದ 300 ಬಿಲಿಯನ್ ಡಾಲರ್ ವರೆಗೆ ಬೆಳೆಯಿತು. 2020 ರಲ್ಲಿ ಇದು 600 ರಿಂದ 700 ಬಿಲಿಯನ್ ಗಳಿಗೆ ಏರಿಕೆಯಾಗಲಿದೆ ಎಂದು ಪ್ರಿನ್ಸ್ ಮುಹಮ್ಮದ್ ಬಿನ್ ಸಲ್ಮಾನ್ ರಾಜಕುಮಾರ ಹೇಳಿದರು.















ಇನ್ನಷ್ಟು ಸುದ್ದಿಗಳು
ಸೌದಿಯ ವೈಮಾನಿಕ ದಾಳಿ ಇರಾಕಿ ಜನತೆ ಅಥವಾ ಸರ್ಕಾರದ ವಿರುದ್ಧವಲ್ಲ- ಸೌದಿ ಅರೇಬಿಯಾ
ಇಸ್ರೇಲಿ ಉತ್ಪನ್ನಗಳ ಆಮದು ನಿಷೇಧ: ಐರ್ಲೆಂಡ್ ಕ್ರಮವನ್ನು ಸ್ವಾಗತಿಸಿದ ಕತಾರ್
ಪ್ರಾದೇಶಿಕ ಮಟ್ಟದಲ್ಲಿ ಅನಿಶ್ಚಿತತೆ: ಮೂರು ಗಲ್ಫ್ ದೇಶಗಳಿಗೆ ವಿಮಾನ ಸೇವೆ ಸ್ಥಗಿತ
ಅನಿವಾಸಿ ಭಾರತೀಯರ ಪಾಸ್ಪೋರ್ಟ್ ಶುಲ್ಕ ಹೆಚ್ಚಳ: ಮೂರು ವಾರಗಳಲ್ಲಿ ನಿರ್ಧಾರ ತಿಳಿಸುವಂತೆ ಕೇಂದ್ರಕ್ಕೆ ಕೋರ್ಟ್ ನಿರ್ದೇಶನ
ಹೋರ್ಮುಜ್ ಮೂಲಕ ಸುರಕ್ಷಿತ ಸಾರಿಗೆ- ಪ್ರಮುಖ ಚರ್ಚೆಗಾಗಿ ಇರಾನ್ಗೆ ತಲುಪಿದ ಒಮಾನ್ ನಿಯೋಗ
ಉಮ್ರಾ ಯಾತ್ರಿಕರಿಗೆ ಸಿಹಿ ಸುದ್ದಿ: ಒಂದು ವರ್ಷ ಕಾಲಾವಧಿಯ ‘ಮಲ್ಟಿ ಎಂಟ್ರಿ’ ಉಮ್ರಾ ವೀಸಾ ಬಿಡುಗಡೆ
ಭಾರತದ ವಿಮಾನ ಪ್ರಯಾಣಿಕರಿಗೆ ಸಿಹಿ ಸುದ್ದಿ: ಟಿಕೆಟ್ ದರಕ್ಕೆ ಮಾಸಿಕ ಕಂತಿನ ಸೌಲಭ್ಯ
ನಿಖರವಲ್ಲದ ಸುದ್ದಿ ಹಂಚಿಕೊಂಡರೆ ಅಪಾಯ- ನಕಲಿ ಸುದ್ದಿಗಳ ವಿರುದ್ಧ ಸೌದಿಯಲ್ಲಿ ಎಚ್ಚರಿಕೆ
ಸೌದಿ: ‘ಏಕೀಕೃತ ರಾಷ್ಟ್ರೀಯ ವೀಸಾ ಪ್ಲಾಟ್ಫಾರ್ಮ್’ ಅನುಷ್ಠಾನಕ್ಕೆ- ವೀಸಾ ಪ್ರಕ್ರಿಯೆಗಳು ಇನ್ನಷ್ಟು ಸುಲಭ
ಅಂತಾರಾಷ್ಟ್ರೀಯ ಸರ್ವೀಸ್ಗಳಲ್ಲಿ ದರ ಕಡಿತ – ಏರ್ ಇಂಡಿಯಾ ಎಕ್ಸ್ಪ್ರೆಸ್ ಘೋಷಣೆ