janadhvani

Kannada Online News Paper

ವಿಮಾ ವಲಯದಲ್ಲಿ ಕೆಲಸ ಮಾಡುವ ಭಾರತೀಯರು ತಾಯ್ನಾಡಿಗೆ

ಒಮಾನ್: ವಿಮಾ ವಲಯದಲ್ಲಿ ಕೆಲಸ ಮಾಡುವ ಭಾರತೀಯರು ತಾಯ್ನಾಡಿಗೆ ಮರಳುವ ಯೋಚನೆಯಲ್ಲಿದ್ದಾರೆ. ವಿಮಾ ವಲಯದಲ್ಲಿ ಶೇ. 70 ರಷ್ಟು ದೇಶೀಕರಣ ವನ್ನು ಜಾರಿಗೆ ತರಲಾಗುವುದು ಎನ್ನುವ ಆಜ್ಞೆಯು ಆ ವಲಯ ದಲ್ಲಿ ಕಾರ್ಯಾಚರಿಸುವ ವಿದೇಶೀಯರ ಮೇಲೆ ಪರಿಣಾಮ ಬೀರಲಿದೆ ಎಂದು ವರದಿಗಳು ಹೇಳುತ್ತಿದೆ.

ಕೆಲಸ ನಷ್ಟ ಹೊಂದುವವರು ಮರಳುವ ತಯಾರಿಯಲ್ಲಿದ್ದಾರೆ. ದೇಶೀಕರಣ ಅನುಷ್ಠಾನಗೊಳಿಸುವ ಭಾಗವಾಗಿ ಅಧಿಕಾರಿಗಳು ವಿಮಾ ಕಂಪನಿಗಳಲ್ಲಿ ತಪಾಸಣೆಗಳನ್ನು ಪ್ರಾರಂಭಿಸಿದ್ದಾರೆ. ಮಾಲೀಕನು ಅಣುಪಾತಕ್ಕೆ ಅನುಸಾರವಾಗಿ ಕೆಲಸಕ್ಕೆ ದೇಶೀಯರನ್ನು ನಿಯಮಿಸದಿದ್ದರೆ, ಮೊದಲ ಹಂತವಾಗಿ ದಂಡ ಪಾವತಿಸ ಬೇಕಾಗುತ್ತದೆ. ಆರು ತಿಂಗಳ ನಂತರ ಮತ್ತೆ ಸಿಕ್ಕಿಹಾಕಿಕೊಂಡರೆ ಕಂಪನಿಯ ವಿರುದ್ಧ ಇತರ ಕಾನೂನು ಕ್ರಮಗಳನ್ನು  ಕೈಗೊಳ್ಳಲಾಗುತ್ತವೆ.

ದೇಶೀಕರಣದ ಆದೇಶ ಹೊರಬಿದ್ದ ನಂತರ ಪ್ರಮುಖ ಕಂಪನಿಗಳು ದೇಶೀಯರಿಗೆ ಉದ್ಯೋಗಾವಕಾಶ ಒದಗಿಸಲು ಕ್ರಮಗಳನ್ನು ಕೈಗೊಳ್ಳಲಾಗುತ್ತಿದೆ. ನೌಕರರ ನಿರ್ವಹಣೆಯ ಮೇಲೆ ದೇಶೀಕರಣವು ಗಮನಾರ್ಹ ಪರಿಣಾಮ ಬೀರುವುದಿಲ್ಲ. ಆದರೆ, ಮಾರುಕಟ್ಟೆಯಲ್ಲಿನ ಹಿಂಜರಿತವು ಆದಾಯದಲ್ಲಿ ಕಡಿಮೆ ಕಂಡುಬಂದಿದೆ. ಪ್ರಸ್ತುತ ಸಮಸ್ಯೆಯು ವಿಮಾ ಕಂಪನಿಗಳು ಮತ್ತು ಏಜೆಂಟರ ಮೇಲೆ ಪರಿಣಾಮ ಬೀರುತ್ತದೆ.

ವಿವಿಧ ಶಾಖೆಗಳಲ್ಲಿ 100 ಕ್ಕಿಂತ ಹೆಚ್ಚು ಸಂಸ್ಥೆಗಳು ಒಮಾನಿನಲ್ಲಿ ಕಾರ್ಯಾಚರಿಸಿತ್ತಿವೆ. ಇವುಗಳಲ್ಲಿ ದೊಡ್ಡ ಮಟ್ಟದಲ್ಲಿ ಕೇರಳೀಯರು ಹಲವು ಭಾರತೀಯರು ಕಾರ್ಯನಿರ್ವಹಿಸುತ್ತಿದ್ದಾರೆ. ಸಾಮಾನ್ಯವಾಗಿ, ವಾಹನ ಮಾರಾಟ ಮತ್ತು ಇತರ ಕಡಿಮೆಯಾಗಿರುವುದು ಈ ವಲಯಯವು ಮುಗ್ಗರಿಸುವಂತೆ ಮಾಡಿದೆ. ದೇಶೀಕರಣದ ಅನುಷ್ಠಾನದೊಂದಿಗೆ, ಅನೇಕ ಅನುಭವಿ ಜನರು ವಲಯವನ್ನು ಬಿಡಬೇಕಾಗುತ್ತದೆ. ಇದು ಸಣ್ಣ ಏಜೆನ್ಸಿಗಳ ಮೇಲೆ ಪ್ರತಿಕೂಲ ಪರಿಣಾಮ ಬೀರಲಿವೆ ಎಂದು ಅಂದಾಜಿಸಲಾಗಿದೆ.

error: Content is protected !! Not allowed copy content from janadhvani.com