janadhvani

Kannada Online News Paper

ರಾಜ್ಯಾದ್ಯಂತ ಕರ್ನಾಟಕ ಮುಸ್ಲಿಂ ಜಮಾಅತ್ ಸದಸ್ಯತನ ಅಭಿಯಾನಕ್ಕೆ ಚಾಲನೆ

18 ವರ್ಷ ಮೇಲ್ಪಟ್ಟ ಪ್ರತಿಯೊಬ್ಬರೂ ಮುಸ್ಲಿಂ ಜಮಾಅತ್ ನ ಸದಸ್ಯ ತನ ಪಡೆಯುವಂತೆ ಇಂಡಿಯನ್ ಗ್ರಾಂಡ್ ಮುಫ್ತಿ ಎ. ಪಿ ಉಸ್ತಾದ್ ಸೂಚಿಸಿದ್ದಾರೆ

ಮಂಗಳೂರು : ಮುಸ್ಲಿಂ ಸಮುದಾಯದ ಸಾಮಾಜಿಕ, ಶೈಕ್ಷಣಿಕ,ಆರ್ಥಿಕ,ಔದ್ಯೋಗಿಕ ಸಬಲೀಕರಣವನ್ನು ಲಕ್ಷ್ಯವಾಗಿಟ್ಟು ಕಾರ್ಯಚರಿಸಲು ಇಂಡಿಯನ್ ಗ್ರಾಂಡ್ ಮುಫ್ತಿ ಸುಲ್ತಾನುಲ್ ಉಲಮಾ ಎ ಪಿ ಉಸ್ತಾದ್ ಜಾರಿಗೆ ತಂದ ಸಂಘಟನೆಯಾಗಿರುವ ಕರ್ನಾಟಕ ಮುಸ್ಲಿಂ ಜಮಾಅತ್ ಕಳೆದ 2019 ರಲ್ಲಿ ಬೆಂಗಳೂರಿನಲ್ಲಿ ಹಲವು ‌ಧಾರ್ಮಿಕ , ಸಾಮಾಜಿಕ, ಶೈಕ್ಷಣಿಕ, ರಾಜಕೀಯ ನಾಯಕರ ಸಮ್ಮುಖದಲ್ಲಿ ಅಸ್ತಿತ್ವಕ್ಕೆ ತರಲಾಗಿತ್ತು.

ಆ ಬಳಿಕ ವಿವಿಧ ಜಿಲ್ಲೆ, ತಾಲೂಕು, ಬ್ಲಾಕ್, ಗ್ರಾಮಗಳಲ್ಲಿ ಘಟಕಗಳು ಅಸ್ತಿತ್ವಕ್ಕೆ ಬಂದಿದೆ. ಇದೀಗ ಸಂಘಟನೆಯ ಪುನರ್ರಚನೆಯ ಮೂರು ವರ್ಷಗಳ ಅವಧಿಯ ನಂತರ ಎಲ್ಲಾ ಗ್ರಾಮ, ಬ್ಲಾಕ್, ತಾಲೂಕು, ಜಿಲ್ಲೆ ಹಾಗೂ ರಾಜ್ಯ ಘಟಕಗಳ ಅಧಿವೇಶನಗಳು ನಡೆಯಲಿದೆ.ಇದರ ಭಾಗವಾಗಿ ಸಂಘಟನೆಗಾಗಿ ಕರ್ನಾಟಕ ರಾಜ್ಯಾದ್ಯಂತ ನವೆಂಬರ್ 1 ರಿಂದ ಸದಸ್ಯತನ ಅಭಿಯಾನಕ್ಕೆ ಚಾಲನೆ ನೀಡಲಾಗಿದೆ.

18 ವರ್ಷ ಮೇಲ್ಪಟ್ಟ ಪ್ರತಿಯೊಬ್ಬರೂ ಮುಸ್ಲಿಂ ಜಮಾಅತ್ ನ ಸದಸ್ಯ ತನ ಪಡೆಯಲು ಇಂಡಿಯನ್ ಗ್ರಾಂಡ್ ಮುಫ್ತಿ ಇತ್ತೀಚೆಗೆ ಸರ್ವರಿಗೂ ಸೂಚಿಸಿರುತ್ತಾರೆ.

ನವೆಂಬರ್ 1 ರಿಂದ ನವೆಂಬರ್ 30 ನಡೆಯುವ ಸದಸ್ಯ ತನ ಅಭಿಯಾನವು ರಾಜ್ಯದ 31 ಜಿಲ್ಲೆಗಳಲ್ಲಿಯೂ ನಡೆಯಲಿದೆ.ರಾಜ್ಯ ಮಟ್ಟದ ಉದ್ಘಾಟನಾ ಸಮಾರಂಭವು ಕೇರಳ ಮುಸ್ಲಿಂ ಜಮಾಅತ್ ಪ್ರಧಾನ ಕಾರ್ಯದರ್ಶಿ ಬದ್ರುಸ್ಸದಾತ್ ಖಲೀಲ್ ಬುಖಾರಿ ತಂಙಲ್ ನೇತೃತ್ವ ದಲ್ಲಿ ಕೊಡಗಿನಲ್ಲಿ ನಡೆದಿದೆ.

ರಾಜ್ಯದಲ್ಲಿ ಎಲ್ಲರೂ ನವೆಂಬರ್ 1ರಿಂದ30ರ ತನಕ ಸದಸ್ಯತನ ಪಡೆಯಲು ಅವಕಾಶವಿದೆ ಪ್ರತ್ಯಕ್ಷವಾಗಿ ಪಡೆಯಲು ಸಾಧ್ಯವಿಲ್ಲದವರು ಗೂಗಲ್ ಪಾರಂ ಮೂಲಕ ಸದಸ್ಯತನ ಪಡೆಯಲು ಅವಕಾಶ ಕಲ್ಪಿಸಲಾಗಿದೆ ಎಂದು ಕರ್ನಾಟಕ ಮುಸ್ಲಿಂ ಜಮಾಅತ್ ರಾಜ್ಯ ಆಯ್ಕೆ ಮಂಡಳಿಯ ಜನರಲ್ ಕನ್ವೀನರ್ ಅಬ್ದುಲ್ ಹಮೀದ್ ಬಜ್ಪೆ ಪತ್ರಿಕಾ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.