ರಿಯಾದ್ – ಮುಖ್ಯರಸ್ತೆಯಲ್ಲಿ 20 ಮೀಟರ್ ಗಿಂತ ಹೆಚ್ಚು ವಾಹನಗಳನ್ನು ಹಿಂದಕ್ಕೆ ಚಲಾಯಿಸಿ, ಸಂಚಾರ ನಿಯಮ ಉಲ್ಲಂಘಿಸಿದರೆ 150 ರಿಯಾಲ್ ನಿಂದ 300 ರಿಯಾಲ್ ವರೆಗೆ ದಂಡ ವಿಧಿಸಲಾಗುವುದು ಎಂದು ಸಂಚಾರ ನಿರ್ದೇಶನಾಲಯ ಎಚ್ಚರಿಕೆ ನೀಡಿದೆ.
ಸುರಕ್ಷಿತ ಮತ್ತು ಕಾನೂನುಬದ್ಧ ರೀತಿಯಲ್ಲಿ ರಸ್ತೆಯಿಂದ ನಿರ್ಗಮಿಸಲು ಸಾಧ್ಯವಾಗದಿದ್ದರೆ, ಮುಂದಿನ ಎಕ್ಸಿಟ್ ತನಕ ವಾಹನವನ್ನು ಚಲಾಯಿಸಬೇಕು.ರಸ್ತೆಯಲ್ಲಿನ ಸುಗಮ ಸಂಚಾರಕ್ಕೆ ಅಡ್ಡಿ ಮಾಡಬಾರದು.
ಪ್ರಯಾಣಿಸುವ ವೇಳೆ ಅನಿರೀಕ್ಷಿತವಾಗಿ ಟೈರ್ ಒಡೆದುಹೋದ ಸಂದರ್ಭದಲ್ಲಿ ತಮ್ಮ ಮತ್ತು ರಸ್ತೆ ಬಳಸುವ ಇತರರ ಸುರಕ್ಷತೆಗಾಗಿ ಸೂಕ್ತ ಕ್ರಮಗಳನ್ನು ತೆಗೆದುಕೊಳ್ಳುವಂತೆ ಸಂಚಾರ ನಿರ್ದೇಶನಾಲಯವು ಚಾಲಕರನ್ನು ಎಚ್ಚರಿಸಿದೆ.
ತಮ್ಮ ವಾಹನದ ಟೈರ್ ಅನಿರೀಕ್ಷಿತವಾಗಿ ಸ್ಫೋಟಗೊಂಡರೆ ಚಾಲಕರು ಪಾಲಿಸಬೇಕಾದ ಏಳು ಹಂತಗಳು
- ಸ್ಟೀರಿಂಗ್ ಚಕ್ರವನ್ನು ಬಿಗಿಯಾಗಿ ಹಿಡಿದಿಟ್ಟುಕೊಳ್ಳುವುದು.
- ಬ್ರೇಕ್ ಹಾಕಬಾರದು.
- ಎಕ್ಸಲರೇಟರ್ ನಿಂದ ಪಾದವನ್ನು ಎತ್ತಬೇಕು.
- ರಸ್ತೆಯ ಬಲಭಾಗದಲ್ಲಿ ಯಾರೂ ಇಲ್ಲವೆಂದು ಖಾತರಿಪಡಿಸಬೇಕು.
- ನಂತರ ವಾಹನವನ್ನು ರಸ್ತೆ ಬದಿಗೆ ಚಲಾಯಿಸ ಬೇಕು.
- ವಾಹನವನ್ನು ಸುರಕ್ಷಿತ ಸ್ಥಳದಲ್ಲಿ ನಿಲ್ಲಿಸಲು ವಿಶೇಷ ಕಾಳಜಿ ವಹಿಸಬೇಕು.
- ವಾಹನದ ಎಮರ್ಜೆನ್ಸಿ ಸಿಗ್ನಲ್ ವರ್ತಿಸಬೇಕು.
ಎಂದು ಸಂಚಾರ ನಿರ್ದೇಶನಾಲಯ ಎಚ್ಚರಿಕೆ ನೀಡಿದೆ.