janadhvani

Kannada Online News Paper

‘ನಾರ್ಕೋಟಿಕ್ ಜಿಹಾದ್’ ವಿವಾದಾತ್ಮಕ ಹೇಳಿಕೆ – ಪಾಲಾ ಬಿಷಪ್ ವಿರುದ್ಧ ದೂರು ದಾಖಲು

ಪಾಲಾ ಮ್ಯಾಜಿಸ್ಟ್ರೇಟ್ ನ್ಯಾಯಾಲಯದ ಆದೇಶದ ಮೇರೆಗೆ ಈ ಕ್ರಮ ಕೈಗೊಳ್ಳಲಾಗಿದೆ.

ಪಾಲಾ(ಕೇರಳ)|ವಿವಾದಾತ್ಮಕ ನಾರ್ಕೋಟಿಕ್ ಜಿಹಾದ್ ಪರಾಮರ್ಶೆ ಸಂಬಂಧಿಸಿದಂತೆ ಪಾಲಾ ಬಿಷಪ್ ಮಾರ್ ಜೋಸೆಫ್ ಕಲ್ಲರಂಙ್ಙಾಟ್ ವಿರುದ್ಧ ದೂರು ದಾಖಲು.

ಕುರುವಿಲಂಗಾಡ್ ಪೊಲೀಸರು ಪ್ರಕರಣ ದಾಖಲಿಸಿಕೊಂಡಿದ್ದಾರೆ. ಪಾಲಾ ಮ್ಯಾಜಿಸ್ಟ್ರೇಟ್ ನ್ಯಾಯಾಲಯದ ಆದೇಶದ ಮೇರೆಗೆ ಈ ಕ್ರಮ ಕೈಗೊಳ್ಳಲಾಗಿದೆ.ಅಖಿಲ ಭಾರತ ಇಮಾಮ್ಸ್ ಕೌನ್ಸಿಲ್‌ನ ಕೊಟ್ಟಾಯಂ ಜಿಲ್ಲಾಧ್ಯಕ್ಷರು ಸಲ್ಲಿಸಿದ್ದ ಅರ್ಜಿಯ ಮೇರೆಗೆ ಪ್ರಕರಣ ದಾಖಲಿಸಿಕೊಳ್ಳುವಂತೆ ನ್ಯಾಯಾಲಯ ಆದೇಶಿಸಿದೆ.

ಅವರು ಸೆ.24ರಂದು ಕುರವಿಲಂಗಾಡ್ ಪೊಲೀಸ್ ಠಾಣೆಯಲ್ಲಿ ದೂರು ನೀಡಿದ್ದರು. ಆದರೆ, ಪೊಲೀಸರು ಪ್ರಕರಣ ದಾಖಲಿಸಿಕೊಳ್ಳಲು ಸಿದ್ಧರಿರಲಿಲ್ಲ. ನಂತರ ಎಸ್ಪಿ ಗೂ ದೂರು ನೀಡಲಾಗಿತ್ತು.

ಸೆಪ್ಟೆಂಬರ್ 8 ರಂದು ಕುರವಿಲಂಗಾಡ್ ಸೇಂಟ್ ಮೇರಿ ಫೊರೋನಾ ಚರ್ಚ್ ನಲ್ಲಿ ಮಾರ್ ಜೋಸೆಫ್ ಕಲ್ಲರಂಗಡ್ ಅವರು ವಿವಾದಾತ್ಮಕ ಭಾಷಣವನ್ನು ಮಾಡದ್ದರು.

ಕ್ರಿಸ್ಚಿಯನ್ ಮತ್ತು ಹಿಂದೂ ಯುವಕರನ್ನು ಮಾದಕ ವ್ಯಸನಕ್ಕೆ ಗುರಿಪಡಿಸಲು ಕೇರಳದ ವಿವಿಧ ಭಾಗಗಳಲ್ಲಿ ವಿಶೇಷ ಗುಂಪುಗಳನ್ನು ರಚಿಸಲಾಗಿದೆ. ಆಯುಧಗಳಿಂದ ಯುದ್ಧ ನಡೆಸಲಾಗದ ಪ್ರದೇಶಗಳಲ್ಲಿ ಇಂತಹ ಷಡ್ಯಂತ್ರಗಳ ಮೂಲಕ ಇತರ ಧರ್ಮಗಳನ್ನು ನಾಶಪಡಿಸುವುದು ಅವರ ಉದ್ದೇಶವಾಗಿದೆ. ಹಿಂದೆಂದೂ ಎದುರಾಗದ ರೀತಿಯ ಸಮಸ್ಯೆಗಳು ಮತ್ತು ಬಿಕ್ಕಟ್ಟುಗಳು. ಎರಡು ಪ್ರಮುಖ ಮತ್ತು ಗಮನಾರ್ಹವಾದವುಗಳೆಂದರೆ ಲವ್ ಜಿಹಾದ್ ಮತ್ತು ನಾರ್ಕೋಟಿಕ್ ಜಿಹಾದ್.

ಜಗತ್ತಿನಲ್ಲಿ ನ್ಯಾಯ, ಶಾಂತಿ ಮತ್ತು ಇಸ್ಲಾಂ ಅನ್ನು ಸ್ಥಾಪಿಸಲು ಯುದ್ಧ ಮತ್ತು ಹೋರಾಟವನ್ನು ನಡೆಸಬೇಕು ಎಂದು ಕೆಲವು ಗುಂಪುಗಳು ಉಗ್ರವಾದವನ್ನು ಹುಟ್ಟುಹಾಕುತ್ತಿವೆ. ಪ್ರಪಂಚದಾದ್ಯಂತ ಜಿಹಾದಿ ಉಗ್ರಗಾಮಿಗಳು ಜನಾಂಗೀಯತೆ ಮತ್ತು ಮತಾಂಧತೆಯನ್ನು ಉತ್ತೇಜಿಸಲು ಪ್ರಯತ್ನಿಸುತ್ತಿದ್ದಾರೆ ಎಂದು ಬಿಷಪ್ ತನ್ನ ವಿವಾದಿತ ಭಾಷಣದಲ್ಲಿ ಹೇಳಿದ್ದರು.

error: Content is protected !! Not allowed copy content from janadhvani.com