janadhvani

Kannada Online News Paper

ಕೆಸಿಎಫ್ ರಬುವ ಸೆಕ್ಟರ್: ಸ್ನೇಹ ಸಂಗಮ ಮತ್ತು ಪ್ರತಿಭೋತ್ಸವ-21 – ಯಶಸ್ವಿ ಸಮಾಪ್ತಿ

ರವಾಬಿ ಯುನಿಟ್ ಚಾಂಪಿಯನ್ ಟ್ರೋಫಿಯನ್ನು ತಮ್ಮದಾಗಿಸಿಕೊಂಡಿತು.

ರಿಯಾದ್: ಕೆಸಿಎಫ್ ರಿಯಾದ್ ಝೋನ್ ಅಧೀನದ ರಬುವ ಸೆಕ್ಟರ್ ಆಯೋಜಿಸಿದ “ಸ್ನೇಹ ಸಂಗಮ ಮತ್ತು ಪ್ರತಿಭೋತ್ಸವ-21” ದಿನಾಂಕ-22/10/2021 ರ ರಾತ್ರಿ 1:30ರಿಂದ ಬೆಳಗಿನ ಜಾವ5:30ರ ತನಕ ರಿಯಾದ್ “ಅಲ್ -ನಹ್ದ” ಇಸ್ತಿರಾಹ್ ದಲ್ಲಿ ಯಶಸ್ವಿಯಾಗಿ ಸೆಕ್ಟರ್ ಅಧ್ಯಕ್ಷರಾದ ಮಜೀದ್ ಹಳೆಯಂಗಡಿ ಇವರ ಅಧ್ಯಕ್ಷತೆಯಲ್ಲಿ ಜರುಗಿತು.

“ಆಧ್ಯಾತ್ಮಿಕ ಮಜ್ಲಿಸ್ ನೊಂದಿಗೆ ಆರಂಭ ಗೊಂಡ ಕಾರ್ಯಕ್ರಮ ಝೋನ್ ಶಿಕ್ಷಣ ಇಲಾಖೆ ಅಧ್ಯಕ್ಷರಾದ ಇಲ್ಯಾಸ್ ಲತೀಫಿ ಉಸ್ತಾದರ ದುಆ ಮೂಲಕ ಸಭಾ ಕಾರ್ಯಕ್ರಮ ಆರಂಭಗೊಂಡಿತು.

ಯಾಕೂಬ್ ಮದನಿ ಉರುವಾಲು ಪದವು ಕಿರಾಅತ್ ಪಠಿಸಿದ ಸಭೆಯನ್ನು ಸೆಕ್ಟರ್ ಪ್ರ. ಕಾರ್ಯದರ್ಶಿ PKM ಅಸಿಫ್ ಉರುವಾಲು ಪದವು ಸ್ವಾಗತಿಸಿದರು. ಸೌದಿ ರಾಷ್ಟ್ರೀಯ ಸಮಿತಿ ಶಿಕ್ಷಣ ಇಲಾಖೆ ಅಧ್ಯಕ್ಷರಾದ ಸಿದ್ದೀಕ್ ಸಖಾಫಿ ಪೆರುವಾಯಿ ಸಭೆಯನ್ನು ಉದ್ಘಾಟಿಸಿದರು.
ಬಳಿಕ ಕಾರ್ಯಕರ್ತರಿಗೆ ಆಯೋಜಿಸಿದ “ಪ್ರತಿಭೋತ್ಸವ-2k21” ಬಹಳ ಯಶಸ್ವಿಯಾಗಿ ನಡೆಯಿತು.

ವಿವಿಧ ಸ್ಪರ್ಧೆಗಳಲ್ಲಿ ಬಹಳ ಆವೇಶದಿಂದ ಭಾಗವಹಿಸಿದ ಕಾರ್ಯಕರ್ತರು ಸೆಕ್ಟರ್ ಅಧೀನದ 3 ಯುನಿಟ್ ಗಳಾದ ರವಾಬಿ,ರೈಯ್ಯಾನ್,ರೌದ ಯುನಿಟ್ ಮದ್ಯೆ ನಡೆದ ಹಣಾಹಣಿಯಲ್ಲಿ ಆತೀ ಹೆಚ್ಚು ಅಂಕಗಳೊಂದಿಗೆ *ರವಾಬಿ ಯುನಿಟ್ ಚಾಂಪಿಯನ್ ಟ್ರೋಫಿಯನ್ನು* ತಮ್ಮದಾಗಿಸಿಕೊಂಡಿತು. ರೈಯ್ಯಾನ್ ಯುನಿಟ್ ದ್ವಿತೀಯ ಸ್ಥಾನವನ್ನು ಪಡೆದರೆ,ರೌದ ಯುನಿಟ್ ತೃತೀಯ ಸ್ಥಾನಕ್ಕೆ ತೃಪ್ತಿ ಪಟ್ಟುಕೊಂಡಿತು.

ಬಳಿಕ ಸೆಕ್ಟರ್ ಬೆಳವಣಿಗೆಯಲ್ಲಿ ಗರಿಷ್ಠ ಸೇವೆ ಸಲ್ಲಿಸಿದ PKM ಹನೀಫ್ ಉರುವಾಲು ಪದವು, ಹಾಗೂ ಇಸ್ಮಾಯಿಲ್ ಮದನಿ ಉಸ್ತಾದ್’ರನ್ನು ಶಾಲು ಹೊದಿಸಿ ಮೊಮೆಂಟೊ ನೀಡಿ ಗೌರವಿಸಲಾಯಿತು.
ಸೆಕ್ಟರ್ ಶಿಕ್ಷಣ ಇಲಾಖೆ ಅಧ್ಯಕ್ಷರಾದ ಇಸ್ಮಾಯಿಲ್ ಮದನಿ ಒಕ್ಕೆತ್ತೂರು ಮುಖ್ಯ ಪ್ರಭಾಷಣ ನಡೆಸಿದರು.
ಬಳಿಕ ಝೋನ್ ಅಧ್ಯಕ್ಷರಾದ ಹನೀಫ್ ಕಣ್ಣೂರು ಮತ್ತು ಕಾರ್ಯದರ್ಶಿ ಆಶ್ರಫ್ ಕಿಲ್ಲೂರ್ ಶುಭ ಹಾರೈಸಿ ಮಾತನಾಡಿದರು.

ವೇದಿಕೆಯಲ್ಲಿ ಝೋನ್ ಅಡ್ಮಿನ್ ಇಲಾಖೆ ಕಾರ್ಯದರ್ಶಿ ಹಬೀಬ್ TH,ಝೋನ್ ಪಬ್ಲಿಷಿಂಗ್ ಇಲಾಖೆ ಕಾರ್ಯದರ್ಶಿ ಫಾರೂಕ್ ಪಾಣೆಮಂಗಳೂರು, ಸೆಕ್ಟರ್ ಉಸ್ತುವಾರಿ ನಝೀರ್ ಕಕ್ಕಿಂಜೆ ಝೋನ್ ಸಾಂತ್ವನ ಇಲಾಖೆ ಕಾರ್ಯದರ್ಶಿ ಸಲಾಂ ಹಳೆಯಂಗಡಿ, ಮುರೂಜ್ ಸೆಕ್ಟರ್ ಅಧ್ಯಕ್ಷರಾದ ಲತೀಫ್ ಮಿಸ್ಭಾಹಿ,ಬದಿಯ ಅಧ್ಯಕ್ಷರಾದ ಹಮೀದ್ ಮುಲ್ಕಿ ,ಗುರ್ನಾಥ ಸೆಕ್ಟರ್ ಕಾರ್ಯದರ್ಶಿ ಮುಸ್ತಫಾ ವಿಟ್ಲ,ಬತ್ತ್ಹ ಸೆಕ್ಟರ್ ಅಧ್ಯಕ್ಷ ರಝ್ಝಾಕ್ ಮುಸ್ಲಿಯಾರ್, ಬದಿಯ ಸೆಕ್ಟರ್
ಕಾರ್ಯದರ್ಶಿ ಹಮೀದ್ ಮಠ, ಸನಯ್ಯಾ ಸೆಕ್ಟರ್ ಕಾರ್ಯದರ್ಶಿ ಹನೀಫ್, ಝೋನ್ ಎಕ್ಸಿಕ್ಯೂಟಿವ್ ಸದಸ್ಯರಾದ ಜಮಾಲ್ ಮಣಿಪುರ, ಶಾಕಿರ್ ಕಬಕ, ಅಬ್ಬಾಸ್ ಪಾದೆಕಲ್ಲು ಮೊದಲಾದ ನಾಯಕರು ಉಪಸ್ಥಿತರಿದ್ದರು.

ಬಳಿಕ ಪ್ರತಿಭೋತ್ಸವ ಚಾಂಪಿಯನ್ ಟ್ರೋಫಿ ಮತ್ತು ಬಹುಮಾನ ವಿತರಣೆ ನಡೆಯಿತು.
PKM ಹನೀಫ್ ಉರುವಾಲು ಪದವು ನಿರೂಪಣೆ ಗೈದು, ಸ್ವಾಗತ ಸಮಿತಿ ಕನ್ವೀನರ್ ರಿಯಾಝ್ ಮಲಾರ್ ಧನ್ಯವಾದ ಗೈದು ಕೊನೆಯಲ್ಲಿ ಮಜೀದ್ ಹನೀಫಿಯವರ ನೇತೃತ್ವದಲ್ಲಿ ಬುರ್ಧಾ ಮಜ್ಲಿಸ್ ನೊಂದಿಗೆ ಕಾರ್ಯಕ್ರಮ ಮುಕ್ತಾಯ ಗೊಂಡಿತು.

✍️PKM ಅಸಿಫ್, ಪ್ರ ಕಾರ್ಯದರ್ಶಿ ಕೆಸಿಎಫ್ ರಬುವ ಸೆಕ್ಟರ್

error: Content is protected !! Not allowed copy content from janadhvani.com