janadhvani

Kannada Online News Paper

ಕೊಡಗು ಸುನ್ನಿ ವೆಲ್ಫೇರ್ ಅಸೋಸಿಯೇಷನ್ ಯುಎಇ: ಬೃಹತ್ ಮೀಲಾದ್ ಸಮಾವೇಶ

ಕಾರ್ಯಕ್ರಮಕ್ಕೆ ಕೇರಳ ಮುಸ್ಲಿಂ ಜಮಾಅತ್ ಪ್ರಧಾನ ಕಾರ್ಯದರ್ಶಿ ಬದ್ರುಸ್ಸಾದಾತ್ ಸಯ್ಯದ್ ಖಲೀಲ್ ಬುಖಾರಿ ತಂಙ್ಞಳ್ ನೇತೃತ್ವ ವಹಿಸಿದ್ದರು

ಕೊಡಗು ಸುನ್ನಿ ವೆಲ್ಫೇರ್ ಅಸೋಸಿಯೇಷನ್ ಯುಎಇ ಸಮಿತಿ ಆಯೋಜಿಸಿದ್ದ ಬೃಹತ್ ಮೀಲಾದ್ ಸಮಾವೇಶ ದುಬೈಯಲ್ಲಿ ನಡೆಯಿತು. ಸಂಘಟನೆಯ ಅಧ್ಯಕ್ಷರಾದ ಅಬೂಬಕ್ಕರ್ ಹಾಜಿ ಕೊಟ್ಟಮುಡಿ ಅಧ್ಯಕ್ಷತೆಯಲ್ಲಿ ನಡೆದ ಕಾರ್ಯಕ್ರಮಕ್ಕೆ ಕೇರಳ ಮುಸ್ಲಿಂ ಜಮಾಅತ್ ಪ್ರಧಾನ ಕಾರ್ಯದರ್ಶಿ ಬದ್ರುಸ್ಸಾದಾತ್ ಸಯ್ಯದ್ ಖಲೀಲ್ ಬುಖಾರಿ ತಂಙ್ಞಳ್ ನೇತೃತ್ವ ವಹಿಸಿದ್ದರು.

ಕೆಸಿಎಫ್ ಅಂತರಾಷ್ಟ್ರೀಯ ಸಮಿತಿಯ ಸಾಂತ್ವನ ವಿಭಾಗದ ಛೇರ್ಮನ್ ಅಲಿ ಮುಸ್ಲಿಯಾರ್ ಬಹರೈನ್ ಕಾರ್ಯಕ್ರಮವನ್ನು ಉದ್ಘಾಟಿಸಿದರು. ಕೆಸಿಎಫ್ ಸೌದಿಅರೇಬಿಯಾ ಅಧ್ಯಕ್ಷರಾದ ಯೂಸುಫ್ ಸಖಾಫಿ ಬೈತಾರ್, ಕೆಸಿಎಫ್ ಯುಎಇ ಪ್ರಧಾನ ಕಾರ್ಯದರ್ಶಿ ಮೂಸ ಹಾಜಿ ಬಸರ, ಕರ್ನಾಟಕ ಮುಸ್ಲಿಂ ಜಮಾಅತ್ ಕೊಡಗು ಜಿಲ್ಲಾ ಪ್ರಧಾನ ಕಾರ್ಯದರ್ಶಿ ಮುಹಮ್ಮದ್ ಹಾಜಿ ಕುಂಜಿಲ, ಕೊಡಗು ಸುನ್ನಿ ವೆಲ್ಫೇರ್ ಅಸೋಸಿಯೇಷನ್ ಸೌದಿಅರೇಬಿಯಾ ಪ್ರಧಾನ ಕಾರ್ಯದರ್ಶಿ ಆಬಿದ್ ಕಂಡಕ್ಕರೆ, ಸ್ವಾಗತ ಸಮಿತಿ ಛೇರ್ಮನ್ ಉಸ್ಮಾನ್ ಹಾಜಿ ನಾಪೋಕ್ಲು ಶುಭಹಾರೈಸಿ ಮಾತನಾಡಿದರು. ಜನಾಬ್ ಶಾಮ್ ಅಹ್ಮದ್ ನಾಪೋಕ್ಲು, ಮುಝಮ್ಮಿಲ್ ಪಾಲಿಬೆಟ್ಟ, ಶಫೀಲ್ ಕಣ್ಣೂರ್ ಮುಖ್ಯ ಅತಿಥಿಗಳಾಗಿ ಆಗಮಿಸಿದ್ದರು.

ಕೊಡಗಿನ ಅನಿವಾಸಿ ಮಕ್ಕಳು ಅವತರಿಸಿದ ಪ್ರವಾದಿ ಕೀರ್ತನೆಗಳ ಹಾಡು, ಭಾಷಣ ಸೇರಿದಂತೆ ಸಾಂಸ್ಕೃತಿಕ ಕಾರ್ಯಕ್ರಮಗಳು ಮತ್ತು ಫೈಝಲ್ ಸಖಾಫಿ ಕೊಂಡಂಗೇರಿ ನೇತೃತ್ವದಲ್ಲಿ ನಡೆದ ಮಧುರ ಕಂಠದ ಬುರ್ದಾ ಮತ್ತು ಮೌಲಿದ್ ಪಾರಾಯಣವು ಸಮಾರಂಭಕ್ಕೆ ಮೆರುಗನ್ನು ನೀಡಿತು.

ಪ್ರಾರ್ಥನೆಗೆ ನೇತೃತ್ವವನ್ನು ಕೊಟ್ಟು ಮಾತನಾಡಿದ ಸಯ್ಯದ್ ಖಲೀಲ್ ಬುಖಾರಿ ತಂಙ್ಞಳ್ ರವರು ಇಂದು ವಿಶ್ವಾದ್ಯಂತ ಪ್ರವಾದಿ ಕೀರ್ತನೆಗಳು ಅತ್ಯಂತ ಹೆಚ್ಚಿನ ರೀತಿಯಲ್ಲಿ ವಿಶ್ವದಾದ್ಯಂತ ಎಲ್ಲಾ ರಾಷ್ಟ್ರಗಳಲ್ಲಿ ಅಲ್ಲಿನ ಆಡಳಿತ ವ್ಯವಸ್ಥೆಗಳ ಸಮ್ಮುಖದಲ್ಲಿ ಅತ್ಯಂತ ಬಹಳ ಹೆಚ್ಚಾಗಿ ನಡೆಯುತ್ತಿರುವುದು ಅತ್ಯಂತ ಸಂತೋಷದ ವಿಷಯ, ಪ್ರವಾದಿ ಕೀರ್ತನೆಯನ್ನು ಒಳಗೊಂಡು ಮುನ್ನಡೆ ಹೋದರೆ ಮಾತ್ರ ನಮ್ಮ ಜೀವನದಲ್ಲಿ ವಿಜಯ ಸಾದ್ಯವೆಂದು ಕರೆ ನೀಡಿದರು.
ಕೊಡಗು ಕೊಡಗು ಜಿಲ್ಲಾ ಎಸ್ಎಸ್ಎಫ್ ಅಧ್ಯಕ್ಷರಾದ ಶಾಫೀ ಸಹದಿ ಸೋಮವಾರಪೇಟೆ ರವರು ಮುಖ್ಯ ಭಾಷಣ ಮಾಡಿದರು. ಪ್ರಧಾನ ಕಾರ್ಯದರ್ಶಿ ಇಸ್ಮಾಯಿಲ್ ಮೂರ್ನಾಡು ದಿಕ್ಸೂಚಿ ಭಾಷಣ ಮಾಡಿದರು, ಸ್ವಾಗತ ಸಮಿತಿಯ ಕನ್ವೀನರ್ ರಿಯಾಝ್ ಕೊಂಡಂಗೇರಿ ಕಾರ್ಯಕ್ರಮಕ್ಕೆ ಆಗಮಿಸಿದ ಸರ್ವರನ್ನು ಸ್ವಾಗತಿಸಿ, ಶಾಹುಲ್ ಹಮೀದ್ ಸಖಾಫಿ ಕಾರ್ಯಕ್ರಮ ನಿರೂಪಿಸಿದರು. ಮುಜೀಬ್ ಕಡಂಗ ಕೊನೆಯಲ್ಲಿ ವಂದಿಸಿದರು.

ಯುಎಇ ಯಲ್ಲಿರುವ ಕೊಡಗಿನ ನಿವಾಸಿಗಳಾದ ಸುಮಾರು 450 ಕ್ಕಿಂತಲೂ ಹೆಚ್ಚು ಜನರು ಭಾಗವಹಿಸಿದ್ದ ಕಾರ್ಯಕ್ರಮಗಳಲ್ಲಿ ಮಹಿಳೆಯರಿಗಾಗಿ ಪ್ರಬಂಧ ಸ್ಪರ್ಧೆ, ರಸಪ್ರಶ್ನೆ, ಮಾಲೆ ಆಲಾಪನೆ, ಅರಬಿಕ್ ಕೈಬರಹ ಸೇರಿದಂತೆ ಹಲವು ವಿವಿಧ ಸ್ಪರ್ಧೆಗಳು ನಡೆಯಿತು. ಕಾರ್ಯಕ್ರಮದಲ್ಲಿ ಭಾಗವಹಿಸಿದ ಎಲ್ಲಾ ಮಕ್ಕಳಿಗೆ ಬಹುಮಾನ ನೀಡಲಾಯಿತು.

*ಪ್ರಬಂಧ – ಪುರುಷರು*
ಪ್ರಥಮ : ಆಸಿಫ್ ನಾಪೋಕ್ಲು
ದ್ವಿತೀಯ : ಅಬ್ದುರಹ್ಮಾನ್ ಕೊಟ್ಟಮುಡಿ

*ಪ್ರಬಂಧ – ಮಹಿಳೆಯರು *

ಪ್ರಥಮ : ರುಬೀನಾ ಸುಹೈಲ್
ದ್ವಿತೀಯ : ನೇಹಾ ನಯಾಝ್

*ರಸಪ್ರಶ್ನೆ – ಮಹಿಳೆಯರು *

ಪ್ರಥಮ : ಜುಬೈರಿಯಾ ಶಾಫಿ ಸಖಾಫಿ
ದ್ವಿತೀಯ : ವಫಾ ನೌಫಲ್

*ಮುಯ್ಯಿದ್ದೀನ್ ಮಾಲಾ ಆಲಾಪನೆ *

ಪ್ರಥಮ : ಸಹಲಾ ಶಂಸು ಮಕ್ಕಿ
ದ್ವಿತೀಯ: ಫರ್ಹಾನಾ ಬಶೀರ್

*ಅರೇಬಿಕ್ ಕೈ ಬರಹ- ವಿದ್ಯಾರ್ಥಿನಿಯರು*

ಪ್ರಥಮ : ನಸ್ರೀನ್ ಉಸ್ಮಾನ್ ನಾಪೋಕ್ಲು
ದ್ವಿತೀಯ : ಆಯಿಶತ್ ಆಫಿಯಾ ಹಮೀದ್ ಚಾಮಿಯಾಲ್

* ರಸಪ್ರಶ್ನೆ ವಿದ್ಯಾರ್ಥಿನಿಯರು *
ಪ್ರಥಮ : ಶಮ್ನಾ ಶುಕೂರ್
ದ್ವಿತೀಯ: ಹಿಬಾ ನಫಿಶಾ ಹಮೀದ್ ನಾಪೋಕ್ಲು

error: Content is protected !! Not allowed copy content from janadhvani.com