janadhvani

Kannada Online News Paper

ಕೆಸಿಎಫ್ ಕುವೈಟ್: ಇಶ್ಕ್ -ಎ -ರಸೂಲ್ ಮೀಲಾದ್ ಕಾನ್ಫರೆನ್ಸ್- ಸ್ವಾಗತ ಸಮಿತಿ ರಚನೆ

ಚೇರ್ಮ್ಯಾನ್: ಅಬ್ದುಲ್ ರಹ್ಮಾನ್ ಸಖಾಫಿ ಪೊಯ್ಯತ್ತಬೈಲ್, ಕನ್ವಿನರ್: ಯಾಕುಬ್ ಕಾರ್ಕಳ, ಕೋಶಾಧಿಕಾರಿ: ಮೂಸ ಇಬ್ರಾಹಿಂ ಮೊಂಟೆಪದವು

ಕರ್ನಾಟಕ ಕಲ್ಚರಲ್ ಫೌಂಡೇಶನ್ ಕೆಸಿಎಫ್ ಕುವೈಟ್ ಶಿಕ್ಷಣ ವಿಭಾಗದ ವತಿಯಿಂದ ‘ಸ್ವಸ್ಥ ಜಗತ್ತಿನ ಪ್ರವಾದಿ “ಎಂಬ ಘೋಷ ವಾಕ್ಯ ದೊಂದಿಗೆ ಇಶ್ಕ್ -ಎ -ರಸೂಲ್ ಮೀಲಾದ್ ಕಾನ್ಫರೆನ್ಸ್ 2021 ನವೆಂಬರ್ 4ರಂದು ನಡೆಯಲಿದ್ದು,ಕಾರ್ಯಕ್ರಮದ ಸ್ವಾಗತ ಸಮಿತಿಯನ್ನು ರಚಿಸಲಾಯಿತು.

ಸ್ವಾಗತ ಸಮಿತಿ ಚೇರ್ಮ್ಯಾನ್ ಆಗಿ ಕೆಸಿಎಫ್ ಕುವೈಟ್ ಸಮಿತಿ ಅಧ್ಯಕ್ಷರಾದ ಬಹುಮಾನ್ಯ ಅಬ್ದುಲ್ ರಹ್ಮಾನ್ ಸಖಾಫಿ ಪೊಯ್ಯತ್ತಬೈಲ್, ಕನ್ವಿನರ್ ಆಗಿ ಯಾಕುಬ್ ಕಾರ್ಕಳ, ಕೋಶಾಧಿಕಾರಿಯಾಗಿ ಮೂಸ ಇಬ್ರಾಹಿಂ ಮೊಂಟೆಪದವು ಇವರನ್ನು ಆಯ್ಕೆ ಮಾಡಲಾಗಿದೆ.

ಅಡ್ವೈಸ್ ರಾಗಿ ಝಕರಿಯ ಆನೇಕಲ್, ಬಹು ಬಾದುಷಾ ಸಖಾಫಿ, ಬಹು ಹುಸೈನ್ ಎರ್ಮಾಡ್, ಬಹು ಉಮರ್ ಝುಹುರಿ, ಬಹು ಉಮರುಲ್ ಫಾರೂಕ್ ಸಖಾಫಿ, ಬಹು ಶಾಹುಲ್ ಹಮೀದ್ ಸಅದಿ ಹಾಗೂ ಪ್ರಚಾರ ವಿಭಾಗಕ್ಕೆ ಇಬ್ರಾಹಿಂ ವೇಣೂರು ,ಮುಸ್ತಫಾ ಉಳ್ಳಾಲ್, ಮೀಡಿಯ ಕನ್ವಿನರ್ ಹಸೈನಾರ್ ಮೊಂಟೆ ಪದವು,
ಮತ್ತು ತೌಫಿಕ್ ಕಾರ್ಕಳ ಹಾಗೂ ಕೆಸಿಎಫ್ ಕುವೈಟ್ ರಾಷ್ಟ್ರೀಯ ನಾಯಕರು ಮತ್ತು ಝೋನ್ ಹಾಗೂ ಸೆಕ್ಟರ್ ನಾಯಕರು ಸಮಿತಿಯ ಸದಸ್ಯರಾಗಿ ಆಯ್ಕೆಯಾಗಿದ್ದಾರೆ.

error: Content is protected !! Not allowed copy content from janadhvani.com