ಬಂಟ್ವಾಳ: ಸಾಮಾಜಿಕ ಜಾಲತಾಣವಾದ ವಾಟ್ಸಪ್ ನಲ್ಲಿ ರಾಷ್ಟ್ರಪಿತ ಮಹಾತ್ಮಾ ಗಾಂಧೀಜಿಯನ್ನು ಅವಹೇಳನ ಮಾಡುವಂತಹ ಅಶ್ಲೀಲ ಚಿತ್ರವಿರುವ ಸ್ಟೇಟಸ್ ಹಾಕಿ ಪ್ರಕಟಿಸಿ ದೇಶ ದ್ರೋಹ ಕೃತ್ಯವೆಸಗಿದ ದುಷ್ಕರ್ಮಿಯ ವಿರುದ್ಧ ಕಠಿನ ಕ್ರಮ ಕೈಕೊಳ್ಳಬೇಕೆಂದು ವಿನಂತಿಸಿ ಬಂಟ್ವಾಳ ನಗರ ಪೋಲಿಸ್ ಠಾಣೆಯಲ್ಲಿ ಎಸ್ಡಿಪಿಐ ಬಂಟ್ವಾಳ ಪುರಸಭಾ ಸಮಿತಿ ಅಧ್ಯಕ್ಷರಾದ ಶರೀಫ್ ವಳವೂರು ದೂರು ದಾಖಲಿಸಿದರು.
ಈ ಸಂಧರ್ಭದಲ್ಲಿ ಎಸ್ಡಿಪಿಐ ಬಂಟ್ವಾಳ ಕ್ಷೇತ್ರ ಸಮಿತಿ ಅಧ್ಯಕ್ಷ ಶಾಹುಲ್ ಹಮೀದ್ ಎಸ್ ಎಚ್
ಬಂಟ್ವಾಳ ಪುರಸಭಾ ಸದಸ್ಯ ಇದ್ರಿಸ್ ಪಿ ಜೆ , ಎಸ್ ಡಿ ಪಿ ಐ ಬಂಟ್ವಾಳ ಪುರ ಸಭಾ ಸಮಿತಿ ಜೊತೆ ಕಾರ್ಯದರ್ಶಿ ರಿಯಾಝ್ ಟಿ ಎಮ್ ಆರ್ , ಕೋಶಾಧಿಕಾರಿ ರಫೀಕ್ ಬೋಗೋಡಿ , ಸಮಿತಿ ಸದಸ್ಯ ಅಶ್ರಫ್ ಬಿ.ಎಮ್.ಟಿ ಉಪಸ್ಥಿತರಿದ್ದರು.