ಕರ್ನಾಟಕ ಮುಸ್ಲಿಂ ಜಮಾಅತ್ ಉಡುಪಿ ಜಿಲ್ಲಾ ಸಮಿತಿಯ ಸಹಾಯ್ ತಂಡದಿಂದ ಕೆ ಸಿ ಎಫ್ ಅಂತಾರಾಷ್ಟ್ರೀಯ ಸಮಿತಿಯ ಪ್ರಾಯೋಗಿಕತ್ವದಲ್ಲಿ ನೂರಕ್ಕೂ ಅಧಿಕ ಪಡಿತರ ಕಿಟ್ ಹಾಗೂ ಸಹಾಯ್ ತಂಡದ ಜಾಕೆಟ್ ವಿತರಣಾ ಕಾರ್ಯಕ್ರಮವು ಹೂಡೆ ದಾರುಸ್ಸಲಾ ನಲ್ಲಿ ಸಮಿತಿಯ ಅಧ್ಯಕ್ಷರಾದ ಜನಾಬ್ ಬಿ ಎಸ್ ಎಫ್ ರಫೀಕ್ ಗಂಗೊಳ್ಳಿ ರವರ ಅಧ್ಯಕ್ಷತೆಯಲ್ಲಿ ನಡೆಯಿತು.
ಎಸ್ಸೆಸ್ಸೆಫ್ ಉಡುಪಿ ಜಿಲ್ಲಾಧ್ಯಕ್ಷ ಶಬೀರ್ ಸಖಾಫಿ ಉಚ್ಚಿಲ ರವರ ದುಆ ದೊಂದಿಗೆ ಚಾಲನೆ ಗೊಂಡ ಕಾರ್ಯಕ್ರಮದಲ್ಲಿ ಮುಸ್ಲಿಂ ಜಮಾಅತ್ ರಾಜ್ಯ ಸದಸ್ಯ, ಸಹಾಯ್ ತಂಡದ ಕೋ-ಓಡಿನೆಟರ್ ಕೆ ಎ ಅಬ್ದುರ್ರಹ್ಮಾನ್ ರಝ್ವಿ ಕಲ್ಕಟ್ಟ ಮಾತನಾಡಿ ಕೋವಿಡ್ -19 ಸಂದರ್ಭದಲ್ಲಿ,ಇನ್ನಿತರ ತುರ್ತು ಸಂದರ್ಭದಲ್ಲೂ ನಿರಂತರ ಸೇವೆಗಳಲ್ಲಿ ಸಕ್ರಿಯರಾಗುವ ಮುಸ್ಲಿಂ ಜಮಾಅತ್ ನ ಸಹಾಯ್ ತಂಡ ಎಸ್ಸೆಸ್ಸೆಫ್ ಹೆಲ್ಪ್ ಡೆಸ್ಕ್,,ಎಸ್ ವೈ ಎಸ್ ಟೀಂ ಇಶಾಬ ಹಾಗೂ ಸರ್ವ ಸುನ್ನೀ ಸಂಘಟನೆಗಳ ಕಾರ್ಯಕರ್ತರ ಕಾರ್ಯವೈಖರಿಯ ಬಗ್ಗೆ ಶ್ಲಾಘಿಸಿದರು.
ಜಿಲ್ಲಾ ನಾಯಕರ ನೇತೃತ್ವದಲ್ಲಿ ಜಿಲ್ಲೆಗೊಳಪಟ್ಟ ಉಡುಪಿ, ಕುಂದಾಪುರ, ಬೈಂದೂರು, ಕಾಪು, ಬ್ರಹ್ಮಾವರ , ಕಾರ್ಕಳ ಹಾಗೂ ಹೆಬ್ರಿ ತಾಲೂಕುಗಳಿಗೆ ಅರ್ಹ ಕುಟುಂಬಗಳಿಗೆ ವಿತರಿಸುವ ಪಡಿತರ ಕಿಟ್ ನ್ನು ಜಿಲ್ಲಾಧ್ಯಕ್ಷ ಬಿ ಎಸ್ ಎಫ್ ರಫೀಕ್ ಗಂಗೊಳ್ಳಿ ರವರು ಕಾಪು ತಾಲೂಕಿನ ಕಿಟ್ ಕಾರ್ಯದರ್ಶಿ ವೈ ಎಮ್ ಇಲ್ಯಾಸ್ ಕಟಪಾಡಿ ರವರಿಗೆ ನೀಡುವ ಮೂಲಕ ಚಾಲನೆ ನೀಡಿದರು.
ಕೋವಿಡ್ – 19 ಎಸ್ಸೆಸ್ಸೆಫ್ ಹೆಲ್ಪ್ ಡೆಸ್ಕ್ ಸಹಾಯ್ ತಂಡದ ಜಿಲ್ಲಾ ಕಂಟ್ರೋಲರ್ ಮಜೀದ್ ಹನೀಫಿ ರವರಿಗೆ ಜಿಲ್ಲಾ ಕಾರ್ಯಾಧ್ಯಕ್ಷ ಸುಬ್ಹಾನ್ ಅಹ್ಮದ್ ಹೊನ್ನಾಳ ರಾಜ್ಯ ಸಹಾಯ್ ತಂಡ ನೀಡಿದ ಜಾಕೆಟ್ ವಿತರಣೆಗೆ ಚಾಲನೆ ನೀಡಿದರು.
ಮುಸ್ಲಿಂ ಜಮಾಅತ್ ಜಿಲ್ಲಾ ಪ್ರಧಾನ ಕಾರ್ಯದರ್ಶಿ ವೈ ಬಿ ಸಿ ಬಶೀರ್ ಅಲಿ ಮೂಳೂರು ಮುಂದಿನ ಕಾರ್ಯಾಚರಣಿಯ ಸುತ್ತೋಲೆ ಮಂಡಿಸಿದರು
ಕರ್ನಾಟಕ ಬ್ಯಾರಿ ಅಕಾಡೆಮಿ ಗೌರವ ಪ್ರಶಸ್ತಿ ಪುರಸ್ಕೃತರಾದ ಬಶೀರ್ ಉಸ್ತಾದ್ ಮಜೂರು ರವರಿಗೆ ಹೂಡೆ ದಾರುಸ್ಸಲಾಂ ವತಿಯಿಂದ ಸಂಸ್ಥೆಯ ಅಧ್ಯಕ್ಷ ಅಶ್ರಫ್ , ಕೆ ಸಿ ಎಫ್ ಹಾಗೂ ಎಸ್ ಡಿ ಐ ಒಮಾನ್ ನಾಯಕ ಉಸ್ತಾದ್ ಸಮೀರ್, ಜುನೈದ್ ಹೂಡೆ ಸನ್ಮಾನಿಸಿದರು.
ನಾಯಕರಾದ ಫಾರೂಖ್ ಆರ್ ಕೆ, ಮುಸ್ತಫಾ ಬಂಗ್ಲಗುಡ್ಡೆ,, ಅಬ್ದುಲ್ ಮಜೀದ್ ಕಟಪಾಡಿ, ಇಮ್ರಾನ್ ಬಶೀರ್ ಕಾಪು ಹಾಗೂ ಮತ್ತಿತರ ನಾಯಕರು ಉಪಸ್ಥಿತರಿದ್ದರು
ವೈ ಬಿ ಸಿ ಬಶೀರ್ ಸ್ವಾಗತಿಸಿದರು,ಸುಬ್ಹಾನ್ ಅಹ್ಮದ್ ಕಾರ್ಯಕ್ರಮ ನಿರೂಪಿಸಿದರು ಅಶ್ರಫ್ ದಾರುಸ್ಸಲಾಂ ವಂದಿಸಿದರು.