janadhvani

Kannada Online News Paper

ಎಸ್ಸೆಸ್ಸೆಫ್ ಹಾಸನ ಡಿವಿಷನ್ :ಮಾದಕ ವಸ್ತುಗಳ ವಿರುದ್ಧ ಜಾಗೃತಿ ಆಂದೋಲನ

ಜೂನ್-25,ಹಾಸನ: ಎಸ್ ಎಸ್ ಎಫ್ ಹಾಸನ ಡಿವಿಷನ್ ಸಮಿತಿಯಿಂದ ಜೂನ್ 26ರಂದು ಮಾದಕ ವಸ್ತುಗಳ ವಿರುದ್ಧ ಜಾಗೃತಿ ಆಂದೋಲನ

ಎಸ್ ಎಸ್ ಎಫ್ ಹಾಸನ ಡಿವಿಷನ್ ಸಮಿತಿಯಿಂದ ಜೂನ್ 26ರಂದು ವಿಶ್ವ ಡ್ರಗ್ಸ್ ವಿರೋಧಿ ದಿನದ ಅಂಗವಾಗಿ ಮಾದಕ ವಸ್ತುಗಳ ವಿರುದ್ಧ ಜಾಗೃತಿ ಆಂದೋಲನವನ್ನು ಹಮ್ಮಿಕೊಳ್ಳಲಾಗಿದೆ.
ಜೂನ್ 26ರಂದು ಬೆಳಿಗ್ಗೆ 12.00 ಗಂಟೆಗೆ ಒನ್ಲೈನ್ ಮುಖಾಂತರ ಜಾಗೃತಿ ಆಂದೋಲನ ನಡೆಯಲಿದ್ದು,ಹಾಸನ ಡಿವಿಷನ್ ಅಧ್ಯಕ್ಷರಾದ ಅನೀಸ್ ನಿಜಾಮಿರವರ ಅಧ್ಯಕ್ಷತೆಯಲ್ಲಿ
ಮಸ್ಜಿದ್ ಖುಬ ಖತೀಬ್ ರಾದ ಮೌಲಾನ ಹಬೀಬುಲ್ಲಹ್ ರಜ್ವಿಯವರು ಉದ್ಘಾಟನೆ ಮಾಡಲಿದ್ದಾರೆ.

ಕರ್ನಾಟಕ ರಾಜ್ಯ ಎಸ್ ವೈ ಎಸ್ ಪ್ರಧಾನ ಕಾರ್ಯದರ್ಶಿ ಡಾ:ಅಬ್ದುಲ್ ರಶೀದ್ ಝೈನಿ ಕಾಮಿಲ್ ರವರು ಮುಖ್ಯ ಪ್ರಬಾಷಣ ಮಾಡಿ,ಜಿಲ್ಲಾ ಫೈನಾನ್ಸ್ ಕಾರ್ಯದರ್ಶಿ ಜುನೈದ್ ರಜ್ವಿಯವರು ವಂದನಾ ಬಾಷಣವನ್ನು ಮಾಡಲಿದ್ದಾರೆ.