ಬೆಂಗಳೂರು: ಕೋವಿಡ್ ರೋಗದ ಎರಡನೇ ಅಲೆ ಎಲ್ಲೆಡೆ ಹರಡುವ ಕಾರಣ ರಮಳಾನ್ ತಿಂಗಳಲ್ಲಿ ಮಸೀದಿಯಲ್ಲಿ ಪ್ರಾರ್ಥನೆ ಮಾಡುವ ಕುರಿತು ಕರ್ನಾಟಕ ರಾಜ್ಯ ಸರಕಾರ ಹೊಸ ಮಾರ್ಗಸೂಚಿ ಬಿಡುಗಡೆ ಮಾಡಲಾಗಿದೆ.
ಮಾರ್ಗಸೂಚಿಯಲ್ಲಿ ತಿಳಿಸಿದ ಪ್ರಮುಖ ವಿಷಯಗಳು ಈ ಕೆಳಗಿನಂತಿವೆ.
- ಕಂಟೈನ್ಮೆಂಟ್ ಝೋನ್ ಗಳಲ್ಲಿರುವ ಮಸೀದಿಗಳನ್ನು ಮುಚ್ಚಲಾಗುವುದು.
- 60 ವರ್ಷ ಮೇಲ್ಪಟ್ಟವರು, ಅನಾರೋಗ್ಯದಿಂದಿರುವವರು, ಗರ್ಭಿಣಿ ಸ್ತ್ರೀಯರು ಮತ್ತು ಮಕ್ಕಳು ಮಸೀದಿಗೆ ಬರಕೂಡದು.
- ನಮಾಝ್ ಗೆ ನಿಲ್ಲುವ ಸಾಲುಗಳ ಮಧ್ಯೆ 6 ಅಡಿ ಅಂತರ ಪಾಲಿಸುವುದು.
- ಅವಶ್ಯಕತೆಯಿದ್ದರೆ ಎರಡು ಇಮಾಮ್ ಜಮಾಅತ್ ನಡೆಸುವುದು.
- ಮಸೀದಿಯು ಭರ್ತಿಯಾಗಿದ್ದರೆ ಎರಡನೇ ಹಂತದ ಜಮಾಅತ್ ವರೆಗೆ ಮಸೀದಿಯ ಹೊರಗಡೆ ಸುರಕ್ಷಿತ ಅಂತರ ಪಾಲನೆಯೊಂದಿಗೆ ಕಾಯುವುದು.
- ಗ್ರಂಥಾಲಯ, ಮದ್ರಸಾ ಮತ್ತು ಧಾರ್ಮಿಕ ತರಗತಿಗಳನ್ನು ಮಸೀದಿಯೊಳಗೆ ನಡೆಸಬಾರದು.
- ಸಾಮೂಹಿಕವಾಗಿ ಧಾರ್ಮಿಕ ಗ್ರಂಥ ಪಠಣ ಮತ್ತು ಮಸೀದಿಯೊಳಗೆ ಸಾಮೂಹಿಕ ಚರ್ಚೆ ನಡೆಸಬಾರದು
- ಮನೆಯಲ್ಲೇ ಇಫ್ತಾರ್ ಮಾಡಿ ಪ್ರಾರ್ಥನೆಗಾಗಿ ಮಾತ್ರ ಮಸೀದಿಗೆ ಬರುವುದು, ಯಾವುದೇ ಕಾರಣಕ್ಕೂ ಮಸೀದಿಗೆ ಅಹಾರವನ್ನು ತರಬಾರದು.
- ಕೋವಿಡ್ ನಿಯಮಗಳನ್ನು ಪಾಲಿಸಿಕೊಂಡು ತರಾವೀಹ್ ನಮಾಝ್ ನಡೆಸಬೇಕು. ಅಗತ್ಯವಿದ್ದರೆ ಎರಡು ಜಮಾಅತ್ ನಡೆಸುವುದು
- ಸಾಮಾನ್ಯವಾಗಿ ಉಪಯೋಗಿಸುವ ಟವೆಲ್, ಟೋಪಿಗಳನ್ನು ಮಸೀದಿಯೊಳಗೆ ಬಳಸಬಾರದು.
- ನಮಾಝ್ ಗೆ ಬಂದವರು ಪರಸ್ಪರ ಹಸ್ತಲಾಘವ ಅಥವಾ ಅಪ್ಪಿಕೊಳ್ಳಬಾರದು.
- ತರಾವೀಹ್ ನಮಾಝ್ ಗೆ ಮನೆಯಲ್ಲೇ ವುಝೂ (ಅಂಗಸ್ನಾನ) ನಿರ್ವಹಿಸಿ ಮಸೀದಿಗೆ ಬರಬೇಕು.
- ಸುನ್ನತ್ ನಮಾಝ್ ಮನೆಯಲ್ಲೇ ನಿರ್ವಹಿಸುವುದು.
- ನಮಾಝ್ ಗೆ ಬೇಕಾಗುವ ಮುಸಲ್ಲಾ ತರುವುದು.
- ಮಾಸ್ಕ್ ಧರಿಸುವುದು ಕಡ್ಡಾಯ.
- ಜನದಟ್ಟನೆಯನ್ನು ನಿಯಂತ್ರಿಸುವುದು.
- ಸೀನುವಾಗ ಸಮರ್ಪಕ ಕರವಸ್ತ್ರಗಳನ್ನು ಬಳಸುವುದು.
- ಮಸೀದಿಗೆ ಪ್ರವೇಶಿಸುವಾಗ ಥರ್ಮಲ್ ಸ್ಕ್ಯಾನರ್ ಮೂಲಕ ಸ್ಕ್ಯಾನ್ ಮಾಡುವುದು. ಶೀತ, ಕಫ, ಗಂಟಲು ನೋವು ಮತ್ತು ಉಸಿರಾಟ ತೊಂದರೆಗಳು ಕಂಡು ಬಂದರೆ ಮಸೀದಿಗೆ ಪ್ರವೇಶಿಸಲು ಅನುಮತಿ ನೀಡದಿರುವುದು.
- ಕೊರೋನ ಜಾಗೃತಿ ಮೂಡಿಸುವ ಪೋಸ್ಟರ್ ಗಳನ್ನು ಪ್ರದರ್ಶಿಸಬೇಕು. ಆಡಿಯೋ ಮತ್ತು ವೀಡಿಯೋ ಕ್ಲಿಪ್ ಗಳನ್ನು ಪ್ರಸಾರ ಮಾಡಬೇಕು.
- ಕೈ ತೊಳೆಯಲು ಸೋಪ್ ಮತ್ತು ದ್ರಾವಕಗಳ ವ್ಯವಸ್ಥೆ ಮಾಡುವುದು.
- ಆರೋಗ್ಯ ಸೇತು ಅಪ್ಲಿಕೇಶನ್ ಬಳಸುವುದು ಉತ್ತಮ.
- ನಮಾಝ್ ಮುಗಿದ ಬಳಿಕ ಸೋಂಕು ನಿವಾರಕ ದ್ರಾವಕಗಳನ್ನು ಸಿಂಪಡಿಸುವುದು.
- ಎಲ್ಲಾ ನಮಾಝ್ ಗಳನ್ನು ಸರಿಯಾದ ಸಮಯಕ್ಕೆ ಮುಗಿಸುವುದು.
















ಇನ್ನಷ್ಟು ಸುದ್ದಿಗಳು
‘ಬೆಲ್ಯೆಚ್ಚ ಅಸ್ಸಲಾಮು ಅಲೈಕುಂ’ ಪ್ರೀತಿಯ ಅಣ್ಣನ ಖಬರಿನ ಬಳಿ ತಂಗಿಯ ಸಲಾಂ
ಮೀಲಾದ್ ರ್ಯಾಲಿ: ಯುವಕರಿಗೊಂದು ಪ್ರೀತಿಯ ಉಪದೇಶ
ಮುಹರ್ರಂ : ಬದುಕು ಬದಲಿಸಲು ಇದರಲ್ಲಿದೆ ಪಾಠಗಳು
ಮುಹರ್ರಮ್ ಹೊಸ ಭರವಸೆ, ಭವಿಷ್ಯಕ್ಕೊಂದು ಮುನ್ನುಡಿ
ಈದ್ ಸಂಭ್ರಮ- ಧರ್ಮದ ಚೌಕಟ್ಟು ದಾಟದಿರಲಿ…!
ಖುರ್ಆನ್ ದುರ್ವ್ಯಾಖ್ಯಾನಕಾರರಿಂದ ಇಸ್ಲಾಂಗೆ ಭಾರೀ ಹಾನಿಯುಂಟಾಗುತ್ತಿದೆ- ಡಾ. ಝೈನೀ ಕಾಮಿಲ್
ಶೋಷಣೆ ಮುಕ್ತ ಸಮಾಜ ನಿರ್ಮಾಣದ ಮಹಾನ್ ನಾಯಕ- ಪ್ರವಾದಿ ಮುಹಮ್ಮದ್ (ಸ.ಅ)
ಈ ವರ್ಷ ವಿದೇಶಿ ಯಾತ್ರಾರ್ಥಿಗಳಿಗೂ ಹಜ್ಜ್ ನಿರ್ವಹಿಸಲು ಅವಕಾಶ
ಕುರ್’ಆನಿನ ಸೂಕ್ತಗಳನ್ನು ರದ್ದುಗೊಳಿಸಲು ಸಲ್ಲಿಸಿದ್ದ ಅರ್ಜಿಯನ್ನು ವಜಾಗೊಳಿಸಿದ ಸುಪ್ರೀಂ ಕೋರ್ಟ್
ಬಡಕಬೈಲ್ ನೂತನ ಮಸೀದಿ ಉದ್ಘಾಟನೆ: ಸುಲ್ತಾನುಲ್ ಉಲಮಾ ಮುಖ್ಯ ಅತಿಥಿ