ದೋಹಾ: ಕೋವಿಡ್ ರೋಗಿಗಳ ಸಂಖ್ಯೆ ಹೆಚ್ಚುತ್ತಿರುವ ಹಿನ್ನೆಲೆಯಲ್ಲಿ ಖತಾರ್‌ನಲ್ಲಿ ಕೆಲವು ನಿರ್ಬಂಧಗಳನ್ನು ಪುನಃ ಸ್ಥಾಪಿಸಲು ಸಂಪುಟ ನಿರ್ಧರಿಸಿದೆ. ಆದರೆ ಖತಾರ್‌ಗೆ ಯಾವುದೇ ಪ್ರಯಾಣ ನಿಷೇಧವಿಲ್ಲ. ಇಂತಹ ಅಪಪ್ರಚಾರ ತಪ್ಪು ಎಂದು ಅಧಿಕಾರಿಗಳು ತಿಳಿಸಿದ್ದಾರೆ. ಅಸ್ತಿತ್ವದಲ್ಲಿರುವ ವಿಮಾನ ಸೇವೆಗಳು ಮುಂದುವರಿಯಲಿದೆ.
ಪುನಃಸ್ಥಾಪಿಸಿರುವ ನಿರ್ಬಂಧಗಳು ಈ ಕೆಳಗಿನಂತಿವೆ.
- ಕಚೇರಿಗಳಲ್ಲಿ ಕೇವಲ 80% ಉದ್ಯೋಗಿಗಳಿಗೆ ಮಾತ್ರ ಹಾಜರಾಗಲು ಅವಕಾಶವಿದೆ. ಉಳಿದವರು ಮನೆಯಿಂದಲೇ ಕೆಲಸ ಮಾಡಬೇಕು.
- ಕಚೇರಿಗಳಲ್ಲಿನ ಸಭೆಯು 15 ಜನರಿಗೆ ಸೀಮಿತವಾಗಿರಬೇಕು.
- ಒಳಾಂಗಣ ಕಾರ್ಯಕ್ರಮದಲ್ಲಿ ಕೇವಲ ಐದು ಜನರು ಮತ್ತು ಹೊರಾಂಗಣ ಕಾರ್ಯಕ್ರಮಗಳಿಗೆ 15 ಜನರಿಗೆ ಅನುಮತಿ.
- ಉದ್ಯಾನವನಗಳು ಮತ್ತು ಕಡಲತೀರಗಳಲ್ಲಿನ ಆಟದ ಮೈದಾನಗಳನ್ನು ಮುಚ್ಚಲಾಗುವುದು.
- ರೆಸ್ಟೋರೆಂಟ್‌ಗಳು ಮತ್ತು ಕೆಫೆಗಳನ್ನು ಕಡಿಮೆಗೊಳಿಸಬೇಕು. ಮಾಲ್‌ಗಳಲ್ಲಿನ ಫುಡ್ ಕೋರ್ಟ್ ಗಳನ್ನು ಮುಚ್ಚಬೇಕು.
- ಮಸೀದಿಗಳನ್ನು ಮುಚ್ಚಲಾಗುವುದಿಲ್ಲ. ಶುಚಿಗೊಳಿಸುವ ಮತ್ತು ಶೌಚಾಲಯದ ಸೌಲಭ್ಯಗಳನ್ನು ಮುಚ್ಚಲಾಗುವುದು.
- ಆನ್‌ಲೈನ್ ಮತ್ತು ನೇರ ಕಲಿಕೆಯನ್ನು ಸಂಯೋಜಿಸುವ ರೀತಿಯಲ್ಲಿ ಶಾಲೆಗಳು ತಮ್ಮ ಪ್ರಸ್ತುತ ಸಾಮರ್ಥ್ಯದಲ್ಲಿ ಕಾರ್ಯನಿರ್ವಹಿಸುತ್ತವೆ.
ಇನ್ನಷ್ಟು ಸುದ್ದಿಗಳು
ಕಾರನ್ನು ಕದ್ದು ಮಾರಿದ ಪೋಲೀಸರು: ಮಂಗಳೂರು ಸಿಸಿಬಿ ಪೋಲಿಸರ ವಿರುದ್ಧ ಸಿಐಡಿ ತನಿಖೆ
ಚೆಕ್ಇನ್ ಬ್ಯಾಗೇಜ್ ಇಲ್ಲದ ವಿಮಾನ ಪ್ರಯಾಣಿಕರಿಗೆ ಟಿಕೆಟ್ ದರದಲ್ಲಿ ರಿಯಾಯಿತಿ
ಕೋವಿಡ್ ನಿರ್ಬಂಧಗಳು ರಂಜಾನ್ ವರೆಗೆ ವಿಸ್ತರಣೆ
ಸೌದಿ: ವಲಸಿಗರಿಗೆ ಶಾಕ್ – ರೆಸ್ಟೋರೆಂಟ್, ಸೂಪರ್ಮಾರ್ಕೆಟ್ಗಳಲ್ಲೂ ದೇಶೀಕರಣ
ಸೌದಿ ಅರೇಬಿಯಾದಲ್ಲಿ ಇಂದು ಕೋವಿಡ್ ನಿಂದ 5 ಮರಣ ಹಾಗೂ 356 ಹೊಸ ಕೇಸ್
ಆತೂರು ಸಅದ್ ಮುಸ್ಲಿಯಾರ್ ವಿಯೋಗ: ಸಮುದಾಯಕ್ಕೆ ತೀರಾ ನಷ್ಟ -ಎಸ್.ವೈ.ಎಸ್