janadhvani

Kannada Online News Paper

ಜ 31 ರಂದು ಎಲಿಮಲೆಯಲ್ಲಿ ಮಜ್ಲಿಸುನ್ನೂರ್ ವಾರ್ಷಿಕ & ದಫ್ ಪ್ರದರ್ಶನ

SKSSF ಎಲಿಮಲೆ ಶಾಖಾ ವತಿಯಿಂದ ಮಜ್ಲಿಸುನ್ನೂರ್ ವಾರ್ಷಿಕ ಹಾಗೂ ದಫ್ ಪ್ರದರ್ಶನ ಜನವರಿ 31ರ ಆದಿತ್ಯವಾರ ಮಗ್ರಿಬ್ ನಮಾಝಿನ ನಂತರ SKSSF ಎಲಿಮಲೆ ಶಾಖಾ ವಠಾರದಲ್ಲಿ ನಡೆಯಲಿದೆ.

ಶಾಖಾಧ್ಯಕ್ಷರಾದ ಅಬೂಬಕರ್ ಸಿದ್ದೀಕ್ ಜೀರ್ಮುಕ್ಕಿ ಇವರ ಅಧ್ಯಕ್ಷತೆಯಲ್ಲಿ ನಡೆಯಲಿರುವ ಕಾರ್ಯಕ್ರಮದಲ್ಲಿ ಅಸ್ಸಯ್ಯದ್ ಜಲಾಲುದ್ದೀನ್ ತಂಗಳ್ ಅಲ್-ಬುಖಾರಿ ಕುನ್ನಂಗೈ ಕೇರಳ ಇವರು ದುಆ ಹಾಗೂ ಮಜ್ಲಿಸುನ್ನೂರ್ ಗೆ ನೇತೃತ್ವ ನೀಡಲಿದ್ದಾರೆ. IK ಖಲಂದರ್ ಎಲಮಲೆಯವರು ಸ್ವಾಗತ ಹೇಳುವ ಕಾರ್ಯಕ್ರಮದ ಉದ್ಘಾಟನೆಯನ್ನು SKSSF ದ.ಕ ಜಿಲ್ಲಾ ವಿಖಾಯ ಚೇರ್ಮಾನ್ ಸೈಯ್ಯದ್ ಇಸ್ಮಾಯಿಲ್ ತಂಗಳ್ ಉಪ್ಪಿನಂಗಡಿಯವರು ನೆರವೇರಿಸಲಿದ್ದಾರೆ.

ದ.ಕ ಜಿಲ್ಲಾ ಸಂಘಟನಾ ಕಾರ್ಯದರ್ಶಿ ಜನಾಬ್ ಪಿ.ಎ ಮರ್ದಾಳರವರು ಮುಖ್ಯ ಪ್ರಭಾಷಣ ನಡೆಸಲಿದ್ದಾರೆ.

ಮುಖ್ಯ ಅತಿಥಿಗಳಾಗಿ ಸಯ್ಯದ್ ಅಫ್ವಾನ್ ಅಲಿ ತಂಙಳ್, ಜಮಾಲುದ್ದೀನ್ ಬೆಳ್ಳಾರೆ, ಎಸ್.ಎ ಹಮೀದ್ ಸುಳ್ಯ ಹಾಗೂ ಇನ್ನಿತರ ಗಣ್ಯ ವ್ಯಕ್ತಿಗಳು ಭಾಗವಹಿಸಲಿದ್ದಾರೆ ಎಂದು ಸಂಘಟಕರು ತಿಳಿಸಿದ್ದಾರೆ.

error: Content is protected !! Not allowed copy content from janadhvani.com