janadhvani

Kannada Online News Paper

ವಾಟ್ಸಾಪ್ ಹೊಸ ಫೀಚರ್- ಅನಗತ್ಯ ಮೆಸೇಜ್ ತಾನಾಗಿಯೇ ಡಿಲೀಟ್

ನವದೆಹಲಿ: ಜನಪ್ರಿಯ ವಾಟ್ಸಾಪ್ ಹೊಸ ಫೀಚರ್ ಗಳ ಮೂಲಕ ಬಳಕೆದಾರರ ಮನಗೆದ್ದಿದ್ದು, ಇದೀಗ ಅನಾವಶ್ಯಕ ಚಾಟ್ ಗಳು 7 ದಿನದ ನಂತರ ತಾನಾಗಿಯೇ ಡಿಲೀಟ್ ಆಗುವಂತೆ ‘ಡಿಸಪಿಯರಿಂಗ್ ಮೆಸೇಜಸ್’ (disappearing-messages) ಎಂಬ ಹೊಸ ಆಯ್ಕೆಯನ್ನು ನೀಡಿದೆ.

ಈ ಸೌಲಭ್ಯವನ್ನು ಆ್ಯಂಡ್ರಾಯ್ಡ್, ಐಪೋನ್ ಮತ್ತು ಡೆಸ್ಕ್ ಟಾಪ್ ಆವೃತ್ತಿಗಳಿಗೆ ನೀಡಲಾಗಿದ್ದು, ಗ್ರೂಪ್ ಮತ್ತು ವ್ಯೆಯಕ್ತಿಕ ಚಾಟ್ ಗಳಲ್ಲಿ ಈ ಆಯ್ಕೆಯನ್ನು ಬಳಸಿಕೊಳ್ಳಬಹುದಾಗಿದೆ.

ವಾಟ್ಸಾಪ್ ನಲ್ಲಿ ಈ ಫೀಚರ್ ಅನ್ನು ಆನ್ ಮಾಡಿದ 7 ದಿನಗಳ ನಂತರ ನಿಮ್ಮ ಚಾಟ್ ಗಳು ಡಿಲೀಟ್ ಆಗುತ್ತದೆ. ಗ್ರೂಪ್ ಚಾಟ್ ನಲ್ಲಿ ಈ ಆಯ್ಕೆಯ ಸೌಲಭ್ಯವನ್ನು ಕೇವಲ ಅಡ್ಮಿನ್ ಗಳು ಮಾತ್ರ ಬಳಸಬಹುದಾಗಿದೆ.

ಈ ಕುರಿತು ಮಾಹಿತಿ ಹಂಚಿಕೊಂಡಿರುವ ವಾಟ್ಸಾಪ್ ಸಂಸ್ಥೆ, ಈ ಸೌಲಭ್ಯ ಗ್ರಾಹಕರ ವ್ಯೆಯಕ್ತಿಕ ಮಾತುಕತೆಗಳಿಗೆ ಯಾವುದೇ ಹಾನಿ ಮಾಡುವುದಿಲ್ಲ. ಗ್ರಾಹಕರು ಈ ಸೌಲಭ್ಯವನ್ನು ಅವಶ್ಯಕತೆಗೆ ತಕ್ಕಂತೆ ಆನ್ ಮತ್ತು ಆಫ್ ಮಾಡಿಕೊಳ್ಳಬಹುದಾಗಿದ್ದು. ಈ ಫೀಚರ್ ಅನ್ನು ಆಫ್ ಮಾಡಿದರೆ ಯಾವುದೇ ಮಾಹಿತಿಗಳು ಅಳಿಸಿಹೋಗುವುದಿಲ್ಲ ಎಂದಿದೆ, ಗ್ರೂಪ್ ಚಾಟ್ ಗಳಲ್ಲಿ ಮಾತ್ರ ಈ ಫೀಚರ್ ಅನ್ನು ನಿಯಂತ್ರಿಸಲು ಕೇವಲ ಅಡ್ಮಿನ್ ಗೆ ಮಾತ್ರ ಅವಕಾಶವಿದೆ ಎಂದು ತಿಳಿಸಿದೆ.

ಈ ಫೀಚರ್ ನಿಂದ ಚಾಟ್ ಗಳು ಮಾತ್ರ 7 ದಿನಗಳಲ್ಲಿ ಸಂಪೂರ್ಣ ಡಿಲೀಟ್ ಆಗುತ್ತವೆ. ಆದರೇ ಆಟೋ ಡೌನ್ ಲೋಡ್ ಆಗುವಂತಹ ಪೋಟೋ ಮತ್ತು ವಿಡಿಯೋಗಳು ಸ್ಟೋರೇಜ್ ನಲ್ಲಿಯೇ ಉಳಿಯಲಿದೆ ಎಂದು ವಾಟ್ಸಾಪ್ ಸಂಸ್ಥೆ ತಿಳಿಸಿದೆ.

error: Content is protected !! Not allowed copy content from janadhvani.com