ನವದೆಹಲಿ: ಬಳಕೆದಾರರ ವೈಯಕ್ತಿಕ ಮಾಹಿತಿಯನ್ನು ಹಂಚಿಕೊಳ್ಳುವ ರೀತಿಯಲ್ಲಿ ತನ್ನ ಗೌಪ್ಯತೆ ನೀತಿಯನ್ನು ಪರಿಷ್ಕರಿಸಿರುವ ವಾಟ್ಸಾಪ್ ಭಾರೀ ಬಿಕ್ಕಟ್ಟಿಗೆ ಸಿಲುಕಿದೆ. ಹೊಸ ಗೌಪ್ಯತೆ ನೀತಿಯನ್ನು ವಿರೋಧಿಸಿ ಅನೇಕ ಜನರು ಮೆಸೇಜಿಂಗ್ ಪ್ಲಾಟ್‌ಫಾರ್ಮ್ ಅನ್ನು ತೊರೆಯುತ್ತಿದ್ದಾರೆ ಎಂದು ವರದಿಯಾಗಿದೆ. ಗೌಪ್ಯತೆಗೆ ಹೆಚ್ಚು ಒತ್ತು ನೀಡುವ ‘ಸಿಗ್ನಲ್’ ಅಪ್ಲಿಕೇಶನ್‌ನ ಡೌನ್‌ಲೋಡ್‌ಗಳು ಭಾರತದಲ್ಲಿ ಗಗನಕ್ಕೇರಿವೆ.
ಅಗ್ರಸ್ಥಾನದಲ್ಲಿ ಸಿಗ್ನಲ್
ಆಪ್ ಸ್ಟೋರ್‌ನಲ್ಲಿ ಉಚಿತ ಅಪ್ಲಿಕೇಶನ್‌ಗಳ ಪಟ್ಟಿಯಲ್ಲಿ ವಾಟ್ಸಾಪ್ ಅನ್ನು ಮೂರನೇ ಸ್ಥಾನಕ್ಕೆ ಇಳಿಸಿ,ಸಿಗ್ನಲ್ ಈಗ ಅಗ್ರಸ್ಥಾನದಲ್ಲಿದೆ. ಬಳಕೆದಾರರ ಗೌಪ್ಯತೆಯನ್ನು ಗೌರವಿಸಲಾಗುವುದು ಎಂದು ಸಿಗ್ನಲ್ ಸ್ಪಷ್ಟಪಡಿಸಿದೆ.