ದುಬೈ: ಡಿಸೆಂಬರ್ 19 ಮತ್ತು ಜನವರಿ 15 ರ ನಡುವೆ ವೀಸಾ ಅವಧಿ ಮುಗಿದ ಸಂದರ್ಶಕರು ಜನವರಿ 26 ರವರೆಗೆ ಯುಎಇಯಲ್ಲಿ ಇರಬಹುದಾಗಿದೆ. ಇದನ್ನು ನಿವಾಸ ಮತ್ತು ವಿದೇಶಾಂಗ ವ್ಯವಹಾರಗಳ ನಿರ್ದೇಶನಾಲಯ ತಿಳಿಸಿದೆ.
ಯುಎಇಯಲ್ಲಿ ಸಂದರ್ಶಕರ ವೀಸಾದ ಅವಧಿ ಮುಗಿದವರಿಗೆ ಹಿಂದಿರುಗುವ ಪ್ರಯಾಣ ಮತ್ತು ಹೆಚ್ಚುವರಿ ವಸತಿ ದಂಡದ ಬಗ್ಗೆ ಸಂದೇಹ ಉಂಟಾದ ಹಿನ್ನೆಲೆಯಲ್ಲಿ ಈ ಸ್ಪಷ್ಟನೆ ಹೊರಡಿಸಲಾಗಿದೆ. ಯುಎಇ ಸಂದರ್ಶಕ ವೀಸಾಗಳಲ್ಲಿ ಸಿಲುಕಿರುವವರಿಗೆ ಒಂದು ತಿಂಗಳ ವಿನಾಯಿತಿ ನೀಡುವಂತೆ ಉಪಾಧ್ಯಕ್ಷ, ಪ್ರಧಾನಿ ಮತ್ತು ದುಬೈ ಆಡಳಿತಗಾರ ಶೈಖ್ ಮುಹಮ್ಮದ್ ಬಿನ್ ರಾಶೀದ್ ಆಲ್ ಮಕ್ತೂಮ್ ಘೋಷಿಸಿದ್ದರು.