ಅಬುಧಾಬಿ:ಅನುಮತಿಯಿಲ್ಲದೆ ದೇಣಿಗೆ ಸಂಗ್ರಹಿಸುವುದು ಮತ್ತು ವಿತರಿಸುವುದನ್ನು ನಿಷೇಧಿಸಿ, ಯುಎಇ ಫೆಡರಲ್ ನ್ಯಾಷನಲ್ ಕೌನ್ಸಿಲ್ ಹೊಸ ಕರಡು ಕಾನೂನನ್ನು ಅಂಗೀಕರಿಸಿದೆ.
ನಿಯಮ ಉಲ್ಲಂಘಿಸುವವರಿಗೆ 5 ಲಕ್ಷ ದಿರ್ಹಮ್ಗಳವರೆಗೆ ದಂಡ ವಿಧಿಸಲಾಗುತ್ತದೆ. ಅಧಿಕೃತ ಪರವಾನಗಿ ಪಡೆಯದೆ ದೇಣಿಗೆ, ದತ್ತಿ ಚಟುವಟಿಕೆಗಳು ಅಥವಾ ಮಾನವೀಯ ನೆರವು ಸಂಗ್ರಹಿಸುವುದನ್ನೂ ನಿಷೇಧಿಸಲಾಗಿದೆ. ವ್ಯಕ್ತಿಗಳು ಮತ್ತು ಸಂಸ್ಥೆಗಳು ಕಾನೂನುಬಾಹಿರವಾಗಿ ದೇಣಿಗೆ ಸಂಗ್ರಹಿಸುವುದನ್ನು ನಿಷೇಧಿಸುವುದಾಗಿದೆ ಹೊಸ ಕಾನೂನು.
ಆದರೆ ಸಾಮಾಜಿಕ ಸ್ವಯಂಸೇವಾ ಸಂಸ್ಥೆಗಳು ಹಣ ಸಂಗ್ರಹಿಸಲು ಕಾನೂನಿನಲ್ಲಿ ನಿಯಮಗಳಿವೆ.ಹೊಸ ಕಾನೂನು,ಸಂಗ್ರಹಿಸಿದ ಹಣವನ್ನು ಭಯೋತ್ಪಾದಕ ಚಟುವಟಿಕೆಗಳಿಗೆ ದುರುಪಯೋಗಪಡಿಸಿಕೊಳ್ಳದಂತೆ ತಡೆಯುವ ಗುರಿಯನ್ನು ಹೊಂದಿದೆ. ಫೆಡರಲ್ ಕೌನ್ಸಿಲ್ ಕರಡು ಕಾನೂನನ್ನು ಅನುಮೋದಿಸುವ ಮೊದಲು, ಎಫ್ಎನ್ಸಿ ಸದಸ್ಯರ ಸಭೆ 34 ನಿಯಮಗಳನ್ನು ಚರ್ಚಿಸಿತು.
ಅನಧಿಕೃತವಾಗಿ ಸಂಗ್ರಹಿಸಿದ ದೇಣಿಗೆಗಳನ್ನು ಮುಟ್ಟುಗೋಲು ಹಾಕಿಕೊಳ್ಳುವುದು, ಶಿಕ್ಷೆ ಮುಗಿದ ನಂತರ ಗಡೀಪಾರು ಮಾಡುವುದು ಮತ್ತು 1 ಲಕ್ಷ ದಿರ್ಹಮ್ಗಳಿಂದ 5 ಲಕ್ಷ ದಿರ್ಹಮ್ಗಳವರೆಗೆ ದಂಡ ವಿಧಿಸಲು ಕಾನೂನು ಶಿಫಾರಸು ಮಾಡಿದೆ. ಸಂಘಗಳು ಮತ್ತು ಸಂಸ್ಥೆಗಳಿಗೆ ದೇಣಿಗೆ ಸಂಗ್ರಹಿಸಲು ಸಹಾಯಕವಾದ ಸ್ಮಾರ್ಟ್ ಇ-ಸಿಸ್ಟಮ್ ಅನ್ನು ಸ್ಥಾಪಿಸಲು ಅನುಮೋದನೆ ನೀಡಲಾಗಿದೆ.
















ಇನ್ನಷ್ಟು ಸುದ್ದಿಗಳು
ವಲಸಿಗರಿಗೆ ಶುಭ ಸುದ್ದಿ: ಜಿದ್ದಾ–ಕೋಝಿಕ್ಕೋಡ್ ನಡುವೆ ಫ್ಲೈನಾಸ್ ನೇರ ವಿಮಾನ ಸೇವೆ ಆರಂಭ
ರಿಯಾದ್ ವಿಮಾನ ನಿಲ್ದಾಣ ಬಂದ್: ಪರ್ಯಾಯ ಪ್ರಯಾಣ ಮಾರ್ಗದಲ್ಲೂ ಟಿಕೆಟ್ ದರ ಏರಿಕೆ
ಸೌದಿ: ಸಿಲುಕಿರುವ ಯಾತ್ರಿಕರ ವಾಪಸಾತಿಗೆ ರಾಯಭಾರ ಕಚೇರಿ ತೀವ್ರ ಕಾರ್ಯಾಚರಣೆ
ಯುಎಇ : ನಾಲ್ಕು ಪಾಸ್ಪೋರ್ಟ್ ಸೇವಾ ಕೇಂದ್ರಗಳು ಇಂದಿನಿಂದ ಸ್ಥಗಿತ- ರಾಯಭಾರ ಕಚೇರಿ
ಉಮ್ರಾ ಯಾತ್ರಿಕರ ವಾಪಸಾತಿಗೆ ಪರ್ಯಾಯ ವಿಮಾನ ವ್ಯವಸ್ಥೆ ಕಲ್ಪಿಸಬೇಕು- ರಾಯಭಾರ ಕಚೇರಿ
ರಿಯಾದ್, ಜಿದ್ದಾ ವಿಮಾನ ಸೇವೆಗಳು ಅಕ್ಟೋಬರ್ 27ರವರೆಗೆ ಸ್ಥಗಿತ
ಧರ್ಮ ನಿಂದನೆ ದೂರು: ಯುವಕನ ಮರಣದಂಡನೆಯನ್ನು ರದ್ದುಗೊಳಿಸಿದ ಸೌದಿ ಸುಪ್ರೀಂ ಕೋರ್ಟ್
ಸೌದಿ ವಿಮಾನ ಸೇವೆ ಸ್ಥಗಿತ: ವೀಸಾ ಅವಧಿ ಮೀರಿದವರಿಗೆ ದಂಡವಿಲ್ಲದೆ ನಿರ್ಗಮನಕ್ಕೆ ಅವಕಾಶ- ಭಾರತೀಯ ರಾಯಭಾರ ಕಚೇರಿ
ವಿಮಾನ ನಿಲ್ದಾಣದ ಮೇಲೆ ದಾಳಿ: ಉಮ್ರಾಗೆ ಬಂದಿದ್ದ ಬಾಂಗ್ಲಾದೇಶದ ಶಿಕ್ಷಕನಿಗೆ ದಾರುಣ ಅಂತ್ಯ
ರಿಯಾದ್ ವಿಮಾನ ನಿಲ್ದಾಣ ದಾಳಿ: ಗಾಯಗೊಂಡವರಲ್ಲಿ 11 ಮಂದಿ ಭಾರತೀಯರು- ಭಾರತೀಯ ರಾಯಭಾರ ಕಚೇರಿ