janadhvani

Kannada Online News Paper

ಅಲ್ ಮದೀನತುಲ್ ಮುನವ್ವರ ಮೂಡಡ್ಕ ಬದಿಯ್ಯಾ ಸಮಿತಿ: ಮಹಾಸಭೆ, ಸ್ವಲಾತ್ ಮಜ್ಲಿಸ್

ರಿಯಾದ್: ಅಲ್ ಮದೀನತುಲ್ ಮುನವ್ವರ ಮೂಡಡ್ಕ ಬದಿಯ್ಯಾ ಸಮಿತಿಯ ವಾರ್ಷಿಕ ಮಹಾಸಭೆ ಹಾಗೂ ಮಾಸಿಕ ಸ್ವಲಾತ್ ಮಜ್ಲಿಸ್ ರಿಯಾದಿನ ಬದಿಯ್ಯಾದ ಫಾರೂಕ್ ಮಂಜೇಶ್ವರ ರವರ ವಿಲ್ಲಾದಲ್ಲಿ ಇತ್ತೀಚೆಗೆ ನಡೆಯಿತು.

ನಿಕಟಪೂರ್ವ ಅಧ್ಯಕ್ಷರಾದ ಅಮೀರ್ ಕಲ್ಲಾಪುರವರು ಅಧ್ಯಕ್ಷತೆ ವಹಿಸಿದ್ದರು. ಮೂಡಡ್ಕ ಸೌದಿ ಅರೇಬಿಯಾ ಆರ್ಗನೈಸರ್ ಕರೀಂ ಲತೀಫಿಯವರು ಸ್ವಲಾತ್ ಹಾಗೂ ದುಆಃ ಮಜ್ಲಿಸಿಗೆ ನೇತೃತ್ವ ನೀಡಿದರು. ಹಸನಿಯ್ಯಾ ಎಜ್ಯುಕೇಶನಲ್ ಸೆಂಟರ್ ಅಡ್ಡೈ-ಕೊಕ್ಕಡ ಇದರ ರಿಯಾದ್ ಸಮಿತಿ ಅಧ್ಯಕ್ಷರಾದ ಅಝೀಝ್ ಮದನಿ ಕಿರಾಅತ್ ಪಠಿಸಿ, ಮೂಡಡ್ಕ ಹಯ್ಯಿಲ್ ಮುರೂಜ್ ಅಧ್ಯಕ್ಷರಾದ ದಾವೂದ್ ಸಅದಿ ಉರುವಾಲ್ ಪದವು ರವರು ಸಭೆಯನ್ನು ಉಧ್ಘಾಟಿಸಿದರು.

ಹಳೇಯ ಸಮಿತಿಯನ್ನು ಬರ್ಕಾಸ್ತುಗೊಳಿಸಿ AMMEC ಬದಿಯ್ಯಾ ಸಮಿತಿ ಜತೆ ಕಾರ್ಯದರ್ಶಿ ರಿಯಾ ನೆಲ್ಯಾಡಿ ವಾರ್ಷಿಕ ವರದಿ ಹಾಗೂ ಲೆಕ್ಕಪತ್ರ ಮಂಡಿಸಿದರು.
ನಂತರ AMMEC ಸೌದಿ ನ್ಯಾಷನಲ್ ಸಮಿತಿ ನೇತಾರರಾದ ಇಬ್ರಾಹಿಂ ಬೇಂಗಿಲ, ಶರೀಫ್ ಗುಂಪಕಲ್ಲು, ಹೈದರ್ ಹಾಜಿ ಸರಳಿಕಟ್ಟೆ, ಹಮೀದ್ ಮೂರುಗೋಳಿ, ಅಬ್ದುರ್ರಝಾಕ್ ಮಾಚಾರ್, ಮೊದಲಾದವರ ನೇತೃತ್ವದಲ್ಲಿ 2021-21 ರ ನೂತನ ಸಮಿತಿಯನ್ನು ಆರಿಸಲಾಯಿತು.

AMMEC ಬದಿಯ್ಯಾ ಸಮಿತಿಯ ನೂತನ ಅಧ್ಯಕ್ಷರಾಗಿ ಫಾರೂಕ್ ಮಂಜೇಶ್ವರ, ಪ್ರಧಾನ ಕಾರ್ಯದರ್ಶಿ ಬಶೀರ್ ಮೂರುಗೋಳಿ, ಕೋಶಾಧಿಕಾರಿ ಹಮೀದ್ ಭಾರತ್, ಉಪಾಧ್ಯಕ್ಷರಾಗಿ ಕಬೀರ್ ಕೃಷ್ಣಾಪುರ, ಇಸ್ಮಾಯಿಲ್ ಕಳಂಜಿಬೈಲು, ಜತೆ ಕಾರ್ಯದರ್ಶಿಗಳಾಗಿ ರಿಯಾ ನೆಲ್ಯಾಡಿ, ಹಾರಿಸ್ ಕನ್ಯಾನ, ಸಲಹೆಗಾರರಾಗಿ ಮಜೀದ್ ವಿಟ್ಲ, ಅಮೀರ್ ಕಲ್ಲಾಪು, ಮುಸ್ತಫಾ ಮಠ ರವರನ್ನು ಆರಿಸಲಾಯಿತು.

ಸದಸ್ಯರಾಗಿ ಖಾದರ್ ಮಠ, ಅಬೂಬಕ್ಕರ್ ಸಖಾಫಿ ಆಲಂಗಾರ್, ಹಮೀದ್ ಮುಲ್ಕಿ, ನಝೀರ್ ಕೃಷ್ಣಾಪುರ, ರಝ್ಝಾಕ್ ಪುತ್ತೂರು, ಸಿರಾಜ್ ಸಾಲೆತ್ತೂರು, ಸಲೀಂ ಮಠ, ಶಫೀಕ್ ಉಜಿರೆ, ಮನ್ಸೂರ್ ಕಿನ್ನಿಗೋಳಿ ಮೊದಲಾದಲರನ್ನು ಆರಿಸಲಾಯಿತು.

ಪೈನಲ್ ಎಕ್ಸಿಟ್ ಮುಖಾಂತರ ಊರಿಗೆ ತೆರಳುವ AMMEC ಮೂಡಡ್ಕ ಸಹಿತ ಹಲವಾರು ಸಂಘ ಸಂಸ್ಥೆಗಳಲ್ಲಿ ಹಗಳಿರುಲು ದುಡಿದ ಹಿರಿಯ ವ್ಯಕ್ತಿ ಹೈದರ್ ಹಾಜಿ ಸರಳಿಕಟ್ಟೆ ಯವರನ್ನು ಬದಿಯ್ಯಾ ಸಮಿತಿ ವತಿಯಿಂದ ಶಾಲು ಹೊದಿಸಿ ಸನ್ಮಾನಿಸಲಾಯಿತು. ಇದೇ ಸಂದರ್ಭ AMMEC ಮೂಡಡ್ಕ ಇದರ 2021ರ ಕ್ಯಾಲಂಡರ್ ಬಿಡುಗಡೆ ಮಾಡಲಾಯಿತು.

ವೇದಿಕೆಯಲ್ಲಿ ಆದೂರ್ ಆರ್ಗನೇಶರ್ ಮಹಮ್ಮದ್ ಸೂಫಿ ಮುಸ್ಲಿಯಾರ್ ಕನ್ಯಾಡಿ, ಕೆಸಿಎಫ್ ಬದಿಯ್ಯಾ ಸೆಕ್ಟರ್ ಅಧ್ಯಕ್ಷರಾದ ಹಮೀದ್ ಮುಲ್ಕಿ, ದಾರುಲ್ ಹಿಕ್ಮ ಬೆಳ್ಳಾರೆ ಇದರ ಕಾರ್ಯದರ್ಶಿ ಝಾಕೀರ್ ಪಂಜ ಮೊದಲಾದವರು ಉಪಸ್ಥಿತರಿದ್ದರು.

ಪ್ರಧಾನ ಕಾರ್ಯದರ್ಶಿ ಬಶೀರ್ ಮೂರುಗೋಳಿ ಸ್ವಾಗತಿಸಿ ವಂದಿಸಿದರು.

ವರದಿ:ರಿಯಾ ನೆಲ್ಯಾಡಿ
ಜನಧ್ವನಿ

error: Content is protected !! Not allowed copy content from janadhvani.com