ಅಲ್ ಕೋಬರ್ : ಸೌದಿ ಅರೇಬಿಯಾದ ಅಲ್ ಕೋಬರ್ ಅಬೂ ನಯನ್ ಗ್ರೂಪ್ ಕಂಪನಿಯಲ್ಲಿ ಕೆಲಸ ನಿರ್ವಹಿಸುತ್ತಿದ್ದ ಬಜ್ಪೆ ನಿವಾಸಿ ಹುಸೈನ್ ಮೋನು ಎಂಬುವವರು ಡಿ. 22 ರಂದು ನಿಧನ ಹೊಂದಿದ್ದರು.
ತಮ್ಮ ರೂಮ್ ನಲ್ಲಿ ಇಶಾ ನಮಾಜ್ ನಿರ್ವಹಿಸುವ ವೇಳೆ ಸುಜೂದ್ ನಲ್ಲಿ ಮರಣ ಹೊಂದಿದ್ದ ಅವರ ಮಯ್ಯತಿನ ದಫನ ಕಾರ್ಯಕ್ಕೆ ಸೌದಿ ಸರಕಾರದ ನಿಯಮಾವಳಿಗನ್ನು ಪಾಲಿಸಿ ಪೇಪರ್ ವರ್ಕ್ ಹಾಗು ಇನ್ನಿತರ ಕೆಲಸಗಳನ್ನು ಕರ್ನಾಟಕ ಕಲ್ಚರಲ್ ಫೌಂಡೇಶನ್(ಕೆ.ಸಿ.ಎಫ್)ಕೈಗೆತ್ತಿಕೊಂಡಿತು.
ಕೆಸಿಎಫ್ ಸಾಂತ್ವನ ವಿಭಾಗ ನಾಯಕರಾದ ಮಹಮ್ಮದ್ ಮಲೆಬೆಟ್ಟು (ರಾಷ್ಟ್ರೀಯ ಸಾಂತ್ವನ ಚೇರ್ಮಾನ್) ಹಾಗು ರೈಸ್ಕೋ ಬಾಷಾ ಗಂಗಾವಳಿ (ಝೋನ್ ಸಾಂತ್ವನ ಕನ್ವೀನರ್) ಇವರು ಕೂಡಲೆ ಕಾರ್ಯ ಪ್ರವರ್ತರಾಗಿ ಕೇವಲ 2 ದಿನದಲ್ಲಿ ಎಲ್ಲಾ ಕೆಲಸ ಕಾರ್ಯವನ್ನು ಮುಗಿಸುವಲ್ಲಿ ಯಶಸ್ವಿಯಾದರು. ಇಂದು (ಡಿ.25) ಜುಮಾ ಬಳಿಕ ಕೋಬರ್ ಇಸ್ಕಾನ್ ಕಿಂಗ್ ಫಹದ್ ಮಸ್ಜಿದ್ ಬಳಿ ಮಯ್ಯತ್ ನಮಾಜ್ ನಿರ್ವಹಿಸಿ ದಫನ ಕಾರ್ಯ ನೆರೆವೇರಿಸಲಾಯಿತು.
ಮೃತ ಹುಸೈನ್ ರವರ ಕುಟುಂಬವು ಊರಿನಲ್ಲಿ ಇದ್ದು 3 ಹೆಣ್ಣು ಹಾಗು 1 ಗಂಡು ಮಕ್ಕಳನ್ನು ಅಗಲಿದ್ದಾರೆ. ಸಹೋದರ ಝಿಯಾ ಎಂಬುವವರು ಕೋಬರ್ ನಲ್ಲಿ ಕೆಲಸ ನಿರ್ವಹಿಸುತ್ತಿದ್ದು, ಪೇಪರ್ ಕೆಲಸಕ್ಕೆ ಕೆ.ಸಿ.ಎಫ್ ತಂಡದೊಂದಿಗೆ ಸಂಪೂರ್ಣ ಸಹಕರಿಸಿದ್ದಾರೆ.
ದಫನ ಕಾರ್ಯದಲ್ಲಿ ಕುಟುಂಬದ ಸದಸ್ಯರು, ಸ್ನೇಹಿತರು ಹಾಗು ಕೆ.ಸಿ.ಎಫ್ ದಮ್ಮಾಮ್ ಝೋನ್, ಸೆಕ್ಟರ್ ನಾಯಕರು, ಅದೇ ರೀತಿ ಬಜ್ಪೆ ವಿದೇಶ ಸಮಿತಿಯಾದ “ಬಾಮಾ” ಇದರ ಅಧ್ಯಕ್ಷರಾದ ಸೈಯ್ಯದ್ ಬಾವ ಬಂಕಲ್ ಮತ್ತು ಸದಸ್ಯರಾದ ಮುಖ್ತಾರ್ ಬಜ್ಪೆ ಹಾಗು ಇನ್ನಿತರ ಸದಸ್ಯರು ಪಾಲ್ಗೊಂಡರು,ಕೆಸಿಎಫ್ ದಮ್ಮಾಮ್ ನಾರ್ತ್ ಸೆಕ್ಟರ್ ಅಧ್ಯಕ್ಷರಾದ ಶಿಹಾಬ್ ಹಿಮಮಿ ಸಖಾಫಿ ಮರವೂರು ದುಅ ನೆರೆವೇರಿಸಿದರು.