janadhvani

Kannada Online News Paper

ಅಲ್ಪಸಂಖ್ಯಾತರ ಮತಗಳನ್ನು ವಿಭಜಿಸಿ,ಬಿಜೆಪಿಗೆ ಬೆಂಬಲ – ಓವೈಸಿ ಪಕ್ಷ ವಿರುದ್ಧ ಮಮತಾ

ಕೋಲ್ಕತ್ತಾ: ದೇಶದಲ್ಲಿ ಎಲ್ಲೇ ಚುನಾವಣೆಗಳು ನಡೆದರೂ ಅಲ್ಪಸಂಖ್ಯಾತರ ಮತಗಳನ್ನು ವಿಭಜಿಸಲು, ಬಿಜೆಪಿಗೆ ಹೈದರಾಬಾದ್ ಮೂಲದ ಪಕ್ಷವೊಂದು ಸಹಾಯ ಮಾಡುತ್ತದೆ ಎಂದು ಪಶ್ಚಿಮ ಬಂಗಾಳ ಮುಖ್ಯಮಂತ್ರಿ ಮಮತಾ ಬ್ಯಾನರ್ಜಿ ಆರೋಪಿಸಿದ್ದಾರೆ.

ಈ ಮೂಲಕ ಸಂಸದ ಅಸದುದ್ದೀನ್ ಉವೈಸಿ ನೇತೃತ್ವದ ಎಐಎಂಐಎಂ ಪಕ್ಷವನ್ನು ತರಾಟೆಗೆ ತೆಗೆದುಕೊಂಡಿರುವ ಮಮತಾ ಬ್ಯಾನರ್ಜಿ, ಒವೈಸಿ ಪಕ್ಷವನ್ನು ಮತ ವಿಭಜಕ ಪಕ್ಷ ಎಂದು ಜರೆದಿದ್ದಾರೆ.

ಅಲ್ಪಸಂರಖ್ಯಾತರಮತಗಳನ್ನು ವಿಭಜಿಸಲು ಬಿಜೆಪಿಗೆ ಹೈದರಾಬಾದ್ ಮೂಲದ ಪಕ್ಷವೊಂದು ಸಹಾಯ ಮಾಡುತ್ತದೆ. ಬಿಜೆಪಿ ಆ ಪಕ್ಷಕ್ಕೆ ಹೇರಳವಾಗಿ ಧನಸಹಾಯ ಮಾಡುತ್ತದೆ. ಇತ್ತೀಚಿಗೆ ನಡೆದ ಬಿಹಾರ ವಿಧಾನಸಭೆ ಚುನಾವಣೆಯೇ ಇದಕ್ಕೆ ನಿದರ್ಶನ ಎಂದು ಮಮತಾ ಬ್ಯಾನರ್ಜಿ ಒವೈಸಿ ಪಕ್ಷದ ವಿರುದ್ಧ ಗಂಭೀರ ಆರೋಪ ಮಾಡಿದ್ದಾರೆ.

ಒವೈಸಿ ಪಕ್ಷದ ವಿರುದ್ಧ ವಿಪಕ್ಷಗಳು ಮೊದಲಿನಿಂದಲೂ ಈ ಆರೋಪ ಮಾಡುತ್ತಲೇ ಇದ್ದು, ಬಿಜೆಪಿಗೆ ಸಹಾಯ ಮಾಡಲೆಂದೇ ಎಐಎಂಐಎಂ ತಮ್ಮ ಪಕ್ಷದ ಅಭ್ಯರ್ಥಿಗಳನ್ನು ಕಣಕ್ಕಿಳಿಸುತ್ತದೆ ಎಂದು ವಾದಿಸುತ್ತಿವೆ.

ಬಿಹಾರ ವಿಧಾನಸಭೆ ಚುನಾವಣೆಯಲ್ಲಿ ಐದು ಕ್ಷೇತ್ರಗಳಲ್ಲಿ ಜಯಗಳಿಸಿರುವ ಎಐಎಂಐಎಂ, ಪಶ್ಚಿಮ ಬಂಗಾಳ ವಿಧಾನಸಭೆ ಚುನಾವಣೆಯಲ್ಲಿ ಸ್ಪರ್ಧಿಸುವುದಾಗಿ ಈಗಾಗಲೇ ಘೋಷಣೆ ಮಾಡಿದೆ.

ಬಿಹಾರ ವಿಧಾನಸಭೆ ಚುನಾವಣೆ ಫಲಿತಾಂಶ ಘೋಷಣೆಯಾಗುತ್ತಿದ್ದಂತೇ ಈ ಕುರಿತು ಮಾತನಾಡಿದ್ದ ಅಸದುದ್ದೀನ್ ಒವೈಸಿ, ನಾವು ಪಶ್ಚಿಮ ಬಂಗಾಳಕ್ಕೂ ಬರಲಿದ್ದೇವೆ ಎಂದು ಹೇಳಿದ್ದನ್ನು ಇಲ್ಲಿ ಸ್ಮರಿಸಬಹುದು.

error: Content is protected !! Not allowed copy content from janadhvani.com