janadhvani

Kannada Online News Paper

ಎಸ್ಸೆಸ್ಸೆಫ್ ಸದಸ್ಯತ್ವ ಅಭಿಯಾನ: ಹೃದಯವಿದೆಯಾ, ಸತ್ಯಪಥದಲ್ಲಿ ಸೇರಲು..!?

✒️ಕೊಡಂಗಾಯಿ ಕಾಮಿಲ್ ಸಖಾಫಿ

ಪವಿತ್ರ ಇಸ್ಲಾಂ ಧರ್ಮದ ಪ್ರಚಾರಾಂದೋಲನದಲ್ಲಿ ವಿನೂತನ ಮೈಲುಗಲ್ಲುಗಳನ್ನು ದಾಟುತ್ತಾ ಭೂಮಿಯ ಉದ್ದಗಲಕ್ಕೂ ಇಸ್ಲಾಮಿನ ಸಂದೇಶವು ತಲುಪುವಂತೆ ಮಾಡಬೇಕಾದ ಜವಾಬ್ದಾರಿಯನ್ನು ಸಂಪೂರ್ಣವಾಗಿ ನಿರ್ವಹಿಸಿದವರೇ ಅಲ್ಲಾಹನ ಪ್ರವಾದಿವರ್ಯರುಗಳು. ಮೊದಲ ಮಾನವ ಆದಂ {ಅ}ರವರಿಂದ ಮೊದಲ್ಗೊಂಡು ಅಂತ್ಯ ಪ್ರವಾದಿವರ್ಯರಾದ ಮುಹಮ್ಮದ್ ಸ್ವಲ್ಲಲ್ಲಾಹು ಅಲೈಹಿ ವಸಲ್ಲಮರ ತನಕದ ಸರ್ವ ಪ್ರವಾದಿಗಳು ಈ ಪ್ರಚಾರಾಂದೋಲನದಲ್ಲಿ ಸಕ್ರಿಯವಾಗಿ ತಮ್ಮ ಕಾರ್ಯಾಚರಣೆಯನ್ನು ಮಾಡುವಲ್ಲಿ ಯಶಸ್ವಿಯಾಗಿದ್ದರು.ಅಂತಹ ಪ್ರವಾದಿಗಳ ಹಿಂಬಾಲಕರೆಂದು ಪವಿತ್ರ ಹದೀಸುಗಳಲ್ಲಿ ಉಲ್ಲೇಖಿತವಾದ ವಿಭಾಗವೇ ವಿದ್ವಾಂಸರಾಗಿದ್ದಾರೆ.

ನಮ್ಮ ಭಾರತಕ್ಕೆ ಇಸ್ಲಾಂ ಧರ್ಮವು ತಲುಪುವಲ್ಲಿ ಪ್ರಮುಖ ಪಾತ್ರ ವಹಿಸಿದ ವಿದ್ವಾಂಸರಿಂದಲೇ ಮುಂದೆ ಇಲ್ಲಿ ವಿದ್ಯಾಸಂಸ್ಥೆಗಳು ಕೂಡ ಸ್ಥಾಪಿತಗೊಂಡಿತು. ಆ ಮೂಲಕ ವೇಗ ಮತ್ತು ಗಟ್ಟಿಯಾಗಿಯೇ ಇಸ್ಲಾಂ ನಮ್ಮ ದೇಶದಲ್ಲೂ ನೆಲೆಯೂರಿತು. ಇಸ್ಲಾಮಿನ ಸೌಂದರ್ಯ, ಪರೋಪಕಾರದ ಸಂದೇಶ, ಸಹಬಾಳ್ವೆ, ಸಾಹೋದರ್ಯತೆ ಮುಂತಾದ ಗುಣಗಳನ್ನು ಪೂರ್ವಿಕ ಮಹಾತ್ಮರಿಂದ ನೇರವಾಗಿ ದರ್ಶಿಸಲು ಸಾಧ್ಯವಾದಾಗ ಬಹಳಷ್ಟು ಜನರು ಇಸ್ಲಾಮಿನ ಸದಸ್ಯತ್ವವನ್ನು ಪಡಕೊಂಡರು.

ಮುಂದೆ ಎಲ್ಲವೂ ವಿದ್ವಾಂಸರ ನಾಯಕತ್ವದಲ್ಲಿಯೇ ನಡೆಯುತ್ತಿದ್ದವು. ಈ ಮದ್ಯೆ ಪವಿತ್ರ ಇಸ್ಲಾಮಿನ ನೈಜ ಹಾದಿಯಲ್ಲಿ ಕೆಲವೊಂದು ಜನರು ಭಿನ್ನತೆಯನ್ನು ಸೃಷ್ಟಿಸಿದಾಗ ಸಾಮಾನ್ಯ ಜನರು ಅವರ ಕುತಂತ್ರಕ್ಕೆ ಬಲಿಯಾಗದಿರಲು ಸೂಫೀವರ್ಯರೂ ಆಧ್ಯಾತ್ಮಿಕ ನಾಯಕರೂ ಉನ್ನತ ವಿದ್ವಾಂಸರೂ ಸಭೆ ಸೇರಿ ಉಲಮಾ ಒಕ್ಕೂಟಕ್ಕೆ ಚಾಲನೆ ನೀಡಿದರು. ಕಾಲಕ್ರಮೇಣ ಹಲವು ರೂಪದಲ್ಲಿ ವಿಂಗಡಿಸಿ ವಿವಿಧ ಸಂಘಟನೆಗಳನ್ನು ರಚನೆ ಮಾಡುವ ಮೂಲಕ ಪ್ರತಿಯೊಬ್ಬರನ್ನು ದೀನೀ ಕೈಂಕರ್ಯದಲ್ಲಿ ಮುನ್ನುಗ್ಗುವಂತೆ ಪ್ರೇರೇಪಿಸಲಾಯಿತು.!

ಮಾರ್ದನಿಸಿದ ಧರ್ಮ ಕ್ರಾಂತಿಯ ಧ್ವನಿ

1973 ಏಪ್ರಿಲ್ 29ರಂದು ಕೇರಳದ ಮಲಪ್ಪುರಂ ಜಿಲ್ಲೆಯ ಪಟ್ಟಿಕಾಡ್ ಜಾಮಿಅಃ ನೂರಿಯ್ಯಃ ಕಾಲೇಜಿನಲ್ಲಿ ವಿದ್ವಾಂಸರ ಸಾರಥ್ಯದಲ್ಲಿ ರೂಪಿತಗೊಂಡ ವಿದ್ಯಾರ್ಥಿ ಒಕ್ಕೂಟವಾಗಿದೆ ಸುನ್ನೀ ಸ್ಟೂಡೆಂಟ್ಸ್ ಫೆಡರೇಶನ್. ಸಂಘಟನೆ ಸ್ಥಾಪನೆಗೊಂಡ ಮಣ್ಣು ಕೇರಳವೆಂದ ಮೇಲೆ ಬೆಳವಣಿಗೆಯ ತೀವ್ರತೆಯನ್ನು ಊಹಿಸಬಹುದಾಗಿದೆ.!

ಪುಟ್ಟ ಅವಧಿಯಲ್ಲೇ ಹೆಮ್ಮರವಾಗಿ ಬೆಳೆದು ಆ ರಾಜ್ಯದ ರಾಜಧಾನಿ ತಿರುವನಂತಪುರಂದಿಂದ ಹಿಡಿದು ಕಾಸರಗೋಡಿನ ತನಕದ 14 ಜಿಲ್ಲೆಗಳಲ್ಲೂ ಹಲವು ಘಟಕಗಳು ರಚನೆಗೊಂಡುವು. ವಿದ್ಯಾರ್ಥಿ ಚಳುವಳಿಯಲ್ಲಿ ಕೈಜೋಡಿಸಲು ಲಕ್ಷಾಂತರ ಜನರು ಅಷ್ಟರಲ್ಲೇ ರೆಡಿಯಾಗಿ ನಿಂತಿದ್ದರು. ಅದರ ಪರಿಮಳವು ಸಮೀಪದ ರಾಜ್ಯಗಳಿಗೂ ಪಸರಿಸಿದಾಗ ದೀನೀ ಕಾರ್ಯದಲ್ಲಿ ಕೇರಳವನ್ನೇ ಆಶ್ರಯಿಸುವ ಕರ್ನಾಟಕದ ಮುಸ್ಲಿಮರು ಕೂಡ ಹಿಂದೆ ನೋಡಲಿಲ್ಲ. ನಾಡಿನ ಸಾತ್ವಿಕರ ಸಾರಥ್ಯದಲ್ಲಿ 1989 ಸೆಪ್ಟೆಂಬರ್ 19ರಂದು ಸ್ವತಂತ್ರವಾಗಿ ಕಾರ್ಯಾಚರಿಸಲು ಕರ್ನಾಟಕ ರಾಜ್ಯ ಸುನ್ನೀ ಸ್ಟೂಡೆಂಟ್ಸ್ ಫೆಡರೇಶನ್ ಸಮಿತಿಯು ಅಂಗೀಕಾರಕ್ಕೆ ಬಂತು.
ಮದ್ರಸ, ದರ್ಸ್, ಕಾಲೇಜುಗಳ ಧಾರ್ಮಿಕ ಶಿಕ್ಷಣಕ್ಕಾಗಿ ಕೇರಳವನ್ನು ಆಶ್ರಯಿಸುವುದರಿಂದ ಸಂಘಟನಾ ಕಾರ್ಯಾಚರಣೆಗೆ ಬೇಕಾದ ಇಂಧನಗಳು ಕೇರಳದಲ್ಲಿ ಸಿಗುತ್ತಿದ್ದುವು. ಆದುದರಿಂದ ಕನ್ನಡ ನಾಡಿನಲ್ಲಿ ಎಸ್ಸೆಸ್ಸೆಫ್ ಬೆಳೆಯತೊಡಗಿತು. ಹಲವಾರು ಜಿಲ್ಲಾ ಘಟಕಗಳು ಅಸ್ತಿತ್ವಗೊಂಡುವು. ಅದರ ಕೆಲ ಘಟಕಗಳಾಗಿ ಇದೀಗ ಡಿವಿಷನ್, ಸೆಕ್ಟರ್ ಮತ್ತು ಯೂನಿಟ್ ಸಮಿತಿಗಳು ವರ್ಕ್ ಮಾಡುತ್ತಿದೆ. ಕರ್ನಾಟಕ ರಾಜ್ಯದಲ್ಲೂ ಪ್ರತಿಯೊಂದು ವಿಭಾಗದವರಿಗೆ ಸಂಘಟನೆಗಳಿವೆ. ಕೇವಲ ವಿದ್ಯಾರ್ಥಿಗಳಿಗಾಗಿ ಎಸ್ಸೆಸ್ಸೆಫ್ ಸಕ್ರಿಯವಾಗಿ ಕಾರ್ಯಾಚರಿಸುತ್ತಿದೆ. ಇದಕ್ಕೆ ಸಾಟಿಯಾಗಬಲ್ಲ ಯಾವುದೇ ಸಂಘಟನೆಯನ್ನು ಕಾಣಲು ಸಾಧ್ಯವಿಲ್ಲ. ಒಳಿತಿಗೆ ಆಹ್ವಾನ ನೀಡುತ್ತಾ ಕೆಡುಕಿಗೆ ಕಡಿವಾಣ ಹಾಕಲು ವಿದ್ಯಾರ್ಥಿ ಸಮೂಹಕ್ಕೆ ಉತ್ತೇಜನ ನೀಡುವಲ್ಲಿ
ಎಸ್ಎಸ್ಎಫ್ ನೂರು ಶೇಕಡಾ ಕಾರ್ಯ ಪಥದಲ್ಲಿದೆ. ಅದು ಇನ್ನೂ ಮುಂದುವರಿಯುವುದರಲ್ಲಿ ಸಂದೇಹವಿಲ್ಲ.

ವಿದ್ಯಾರ್ಥಿಗಳು ವಿವೇಚನೆಯುಳ್ಳವರಾಗಲು..

ಮನುಷ್ಯ ಬದುಕಿನ ಪ್ರಮುಖ ಘಟ್ಟವು ವಿದ್ಯಾರ್ಥಿ ಕಾಲವಾಗಿದೆ. ಪೋಷಕರಿಂದ ಸಂಪೂರ್ಣವಾಗಿ ವಿಮೋಚನೆಗೊಂಡು ಶಾಲಾ-ಕಾಲೇಜುಗಳ ಕಾರ್ಯಾಗಾರದಲ್ಲಿ ಮುನ್ನಡೆಯುತ್ತಾ ಮೋಜು ಮಾಡಲು ವಿದ್ಯಾರ್ಥಿಗಳಿಗೆ ಸಿಗುವ ಅವಕಾಶವು ಅತ್ಯಪೂರ್ಣವಾಗಿದೆ. ಕಲಿಯುವವರೆಂಬ ಲೇಬಲ್ ಪಡೆದುಕೊಂಡ ಕಾರಣ ಅಗತ್ಯಗಳಿಗೂ ಮಿಗಿಲಾದುದನ್ನು ನೀಡುವಲ್ಲಿ ಹೆತ್ತವರು ಮುತುವರ್ಜಿ ವಹಿಸುತ್ತಾರೆ. ಇನ್ನೊಬ್ಬರ ಮುಂದೆ ನಮ್ಮ ಮನೆಯ ಮಕ್ಕಳು ಸಣ್ಣವರಾಗದಿರಲು ಕೇಳಿದ್ದನ್ನೆಲ್ಲಾ ನೀಡುವ ಪರಿಪಾಠವು ಎಲ್ಲೆಡೆ ಕಂಡುಬರುತ್ತದೆ. ದುಬಾರಿ ಬೆಲೆಯ ಮೊಬೈಲ್ ಫೋನುಗಳು, ಲ್ಯಾಪ್‌ಟಾಪ್, ದ್ವಿಚಕ್ರ ವಾಹನಗಳು ಇಂದು ಹೆಚ್ಚಿನ ವಿದ್ಯಾರ್ಥಿಗಳಲ್ಲಿ ಸ್ವಂತವಾಗಿರುತ್ತದೆ. ಬಾಡಿಗೆ ಮನೆಯಲ್ಲಿ ವಾಸ ಮಾಡುವ ಕುಟುಂಬ ಕೂಡ ಮಕ್ಕಳ ಕೈಗೆ ಅಗತ್ಯವಾದುದಕ್ಕಿಂತ ಹೆಚ್ಚಿನದ್ದನ್ನು ನೀಡುವಲ್ಲಿ ತಾ ಮುಂದು ನಾ ಮುಂದು ಎಂಬಂತೆ ಪೈಪೋಟಿಯಲ್ಲಿರುತ್ತಾರೆ. ಮಕ್ಕಳು ಕಲಿಯುವುದರಲ್ಲಿ ಹಿನ್ನಡೆಯಾಗಲು ಇಂತಹ ಆಧುನಿಕ ಅ(ನ)ಗತ್ಯಗಳೇ ಕಾರಣವೆಂದು ಅಧಿಕ ಹೆತ್ತವರು ಚಿಂತಿಸುವುದಿಲ್ಲ.!

ನಿಷಿದ್ಧವಾದ ಪ್ರೀತಿ-ಪ್ರೇಮದಲ್ಲಿ ಸಿಲುಕಲು ಕೂಡ ಮಕ್ಕಳಿಗೆ ಕಾರಣವಾಗುವುದು ಇಂತಹ ಆಧುನಿಕ ಸೌಕರ್ಯಗಳಾಗಿರುತ್ತದೆ. ಅದರೊಂದಿಗೆ ನಮ್ಮ ಪರಿಸರವು ಕೆಡುಕಿನತ್ತ ಅತ್ಯಧಿಕವಾಗಿ ವಿದ್ಯಾರ್ಥಿ ಸಮೂಹವನ್ನು ಸೆಳೆಯುವಲ್ಲಿ ಯಶಸ್ವಿಯಾಗುತ್ತದೆ. ಜಾಹಿರಾತಿನ ಭರದಲ್ಲಿ ಊರಿನ ಧಾರ್ಮಿಕ ಕೇಂದ್ರಗಳು ಸಹ ಕೆಲವೊಮ್ಮೆ ಎಡವಿ ಬೀಳುವುದನ್ನು ಕಾಣಬಹುದಾಗಿದೆ. ಅರೆ ನಗ್ನರಾಗಿ ಬೀದಿ ಸುತ್ತುವ ಮಹಿಳೆಯರಿಂದಲೂ ನಮ್ಮ ಸಮಾಜದ ಯವ್ವನದ ಹರೆಯದವರು ವಂಚನೆಗೊಳಗಾಗುವುದುಂಟು.!

ಸಂಘಟನೆಯ ಅನಿವಾರ್ಯತೆ

ಈ ಸಮಾಜದ ಮುಂದಿನ ನಾಯಕತ್ವವು ಈಗಿನ ವಿದ್ಯಾರ್ಥಿ ಸಮೂಹವಾಗಿರುತ್ತದೆ. ಆದಕಾರಣ ಅವರು ಸರಿದಾರಿಯ ಸಂಗೀತವಾಗಬೇಕಾಗಿದೆ. ಕೆಡುಕನ್ನು ಚಿವುಟಿ ಒಳಿತಿನ ದೀಪವನ್ನು ಹೊತ್ತಿಸುವವರಾಗಬೇಕು. ಅದಕ್ಕಾಗಿ ವಿದ್ಯಾರ್ಥಿಗಳಿಗೆ ಬೋಧನೆಯು ಅನಿವಾರ್ಯವಾಗಿರುತ್ತದೆ. ತಿಳುವಳಿಕೆ, ಬೋಧನೆ, ಒಳಿತಿನ ಪರಿಕಲ್ಪನೆಗಳನ್ನು ನೀಡದೆ ಯಾರನ್ನೂ ಸರಿಪಡಿಸಲು ಸಾಧ್ಯವಾಗದು. ಒಳಿತಿನ ಬೋಧನೆಗಳಿಂದ ಎಂತಹ ಕಠಿಣ ಹೃದಯವಂತರ ಮನವನ್ನೂ ಪರಿವರ್ತಿಸಬಹುದಾಗಿದೆ. ಅಸಾಧ್ಯವೆಂದು ಮನದಟ್ಟು ಮಾಡಿ ಕೈಬಿಟ್ಟ ಕಾರ್ಯವನ್ನು ಬೋಧನೆಗಳಿಂದ ಸಾಧ್ಯತೆಯೆಡೆಗೆ ತಿರುಗಿಸಿದ ಉದಾಹರಣೆಗಳಿವೆ. ಎಸ್‌ಎಫ್‌ಎಫ್ ಮಾಡಿದ್ದೂ ಈಗಲೂ ಮಾಡುತ್ತಿರುವುದು ಇದನ್ನೇ ಆಗಿದೆ. ಕೆಡುಕಿನ ಕೊನೆಯ ಸಾಲಿನಲ್ಲಿ ಕುಳಿತವರನ್ನು ಒಳಿತಿನ ಹಾದಿಗೆ ತಂದು ನಿಲ್ಲಿಸಿದ ಸಾವಿರಾರು ಸಂದರ್ಭಗಳಿವೆ.

ಶಾಲಾ-ಕಾಲೇಜುಗಳಲ್ಲಿ ಕಲಿಯುತ್ತಿರುವವರ ಸಮಯ ಮತ್ತು ಸಂದರ್ಭಕ್ಕನುಗುಣವಾಗಿ ಕಾರ್ಯಾಚರಿಸಲು ಕ್ಯಾಂಪಸ್ ಸಮಿತಿಗಳು ಎಲ್ಲಾ ಕಡೆಗಳಲ್ಲೂ ಕಾರ್ಯನಿರತವಾಗಿದೆ. ಯಾವುದೇ ಹೆತ್ತವರು ಮಕ್ಕಳು ಕೆಡುವುದರ ಬಗ್ಗೆ ದುಃಖಿಸದಿರಿ. ಎಸ್‌ಎಫ್‌ಎಫ್ ನಲ್ಲಿ ಸದಸ್ಯತ್ವ ಪಡೆದವರನ್ನು ಸಂಘಟನೆಯು ಧಾರ್ಮಿಕವಾಗಿ ಜಾಗೃತಿ ಮೂಡಿಸುತ್ತದೆ. ಬಡಿದೆಬ್ಬಿಸುತ್ತದೆ.

ಸಾತ್ವಿಕ, ಸಜ್ಜನರ ಸಾರಥ್ಯ

ಸಮಾಜದ ಬೆನ್ನೆಲುಬಾದ ಸಾತ್ವಿಕರು, ಸಜ್ಜನ ನಾಯಕರು, ಸಯ್ಯಿದರು ಈ ಸಂಘಟನೆಯ ಸಾರಥ್ಯದಲ್ಲಿರುವುದು ವಿಶೇಷತೆಯಾಗಿದೆ. ಆಧ್ಯಾತ್ಮಿಕ ರಂಗದಲ್ಲಿ ಮಿಂಚುತ್ತಿರುವ
ಸೂಫಿವರ್ಯರು ಎಸ್‌ಎಫ್‌ಎಫಿನ ಸದಸ್ಯರನ್ನು ಆಶೀರ್ವದಿಸಿದ್ದಾರೆ. ಉನ್ನತ ಉಲಮಾಗಳ ಪ್ರಾರ್ಥನೆಯು ಲಭಿಸುತ್ತಿದೆ. ಸಂಕಷ್ಟದ ಸಂದರ್ಭಗಳಲ್ಲಿ ನೆರವು ಸಿಗುತ್ತಿದೆ. ಸಹಾಯಕ್ಕಾಗಿ ಅಂಗಲಾಚುವವರಿಗೆ ಆಸರೆಯಾಗುತ್ತದೆ. ಎಲ್ಲದಕ್ಕೂ ಮಿಗಿಲಾಗಿ ನಮ್ಮ ವಿಶ್ವಾಸವನ್ನು ಕಾಪಾಡಿಕೊಳ್ಳಲು ಅರಿವು ಸಿಗುತ್ತಿದೆ. ಬದುಕಿನ ಪರಮ ಗುರಿಯಾದ ಪರಲೋಕದ ವಿಜಯಕ್ಕೆ ದಾರಿ ತೋರಿಸಲಾಗುತ್ತದೆ. ಇನ್ನೂ ಅನೇಕಾನೇಕ ಅತ್ಯಗತ್ಯವಾದ ಉಪಕಾರಗಳು ಈ ಸಂಘಟನೆಯಲ್ಲಿ ಸದಸ್ಯರಾದವರಿಗೆ ಲಭ್ಯವಾಗುತ್ತಿದೆ.

ಸದಸ್ಯತ್ವ ಅಭಿಯಾನದಲ್ಲಿ ಸೇರೋಣ

2020 ನವೆಂಬರ್ 13ರಿಂದ ಎಸ್‌ಎಫ್‌ಎಫ್ ನ ಸದಸ್ಯತ್ವ ಕಾಲಾವಧಿಯಾಗಿರುತ್ತದೆ. ಹೃದಯವಿದೆಯಾ ಸತ್ಪಥದಲ್ಲಿ ಸದಸ್ಯರಾಗಲು ಎಂಬ ಘೋಷಣೆಯೊಂದಿಗೆ ಹೊಸದಾಗಿ ಸೇರುವವರಿಗೂ ಮತ್ತು ನವೀಕರಿಸುವವರಿಗೂ ಸದಸ್ಯರಾಗಲು ಅವಕಾಶ ಸಿಗಲಿದೆ. ಯಾವುದೇ ಕಾರಣಕ್ಕೂ ಇದು ಮಿಸ್ ಆಗದಂತೆ ನೋಡಿಕೊಳ್ಳಬೇಕು. ಹೊರನಾಡಿನಲ್ಲಿರುವವರಿಗೂ ಸದಸ್ಯರಾಗಬಹುದು. ಇದಕ್ಕಾಗಿ ಅವರು ಊರಿಗೆ ಮರಳ ಬೇಕಾದ ಅಗತ್ಯವಿಲ್ಲ. ತಮ್ಮ ಸಂಪೂರ್ಣ ವಿಳಾಸವನ್ನು ಊರಿನ ಸಂಬಂಧಪಟ್ಟವರಿಗೆ ಕಳುಹಿಸಿಕೊಟ್ಟು ತಿಳಿಸಿದರಾಯಿತು. ಹೆತ್ತವರು ತಮ್ಮ ಮಕ್ಕಳ ಉನ್ನತಿಗಾಗಿ ಈ ಸರಣಿಯಲ್ಲಿ ಅವರನ್ನು ಸೇರಿಸಲು ಮರೆಯದಿರಿ. ನಾಳೆ ನಮ್ಮ ಮಕ್ಕಳು ನಮ್ಮ ಪರವಾಗಲು ಎಸ್‌ಎಫ್‌ಎಫ್ ನಿಂದ ಖಂಡಿತವಾಗಿಯೂ ಸಾಧ್ಯ. ಹಾಗಾಗಲು ಪ್ರಾರ್ಥಿಸೋಣ, ಪ್ರಯತ್ನಿಸೋಣ.!
ಎಸ್‌ಎಫ್‌ಎಫ್ ಝಿಂದಾಬಾದ್
ಧರ್ಮ ಕ್ರಾಂತಿ ಝಿಂದಾಬಾದ್

error: Content is protected !! Not allowed copy content from janadhvani.com