janadhvani

Kannada Online News Paper

ಮುಂಬೈ: ಮಹಾರಾಷ್ಟ್ರದ ನಾಸಿಕ್ ಜಿಲ್ಲೆಯಲ್ಲಿ ಅವರ ಕಾರು ಬೆಂಕಿಗೆ ಆಹುತಿಯಾದ ಕಾರಣ ರಾಷ್ಟ್ರೀಯವಾದಿ ಕಾಂಗ್ರೆಸ್ ಪಕ್ಷದ (ಎನ್‌ಸಿಪಿ) ಮುಖಂಡ ಸಂಜಯ್ ಶಿಂಧೆ (55) ಮಂಗಳವಾರ ಮರಣ ಹೊಂದಿದ್ದಾರೆ. ಅವರು ಪಕ್ಷದ ತಾಲ್ಲೂಕು ಘಟಕದ ಉಪಾಧ್ಯಕ್ಷರಾಗಿದ್ದರು. ಮಹರಾಷ್ಟ್ರದ ಮುಂಬೈ -ಆಗ್ರಾ ಹೆದ್ದಾರಿಯ ಪಿಂಪಲ್​ಗಾಂವ್​ ಬಸ್ವಂತ್ ಟೋಲ್ ಪ್ಲಾಝಾ ಬಳಿಯಲ್ಲಿ ಘಟನೆ ನಡೆದಿದೆ.

ಪ್ರತ್ಯಕ್ಷದರ್ಶಿಗಳ ಹೇಳಿಕೆ ಪ್ರಕಾರ ಶಾರ್ಟ್​ಸರ್ಕ್ಯೂಟ್​ನಿಂದ ಕಾರಿನಲ್ಲಿ ಬೆಂಕಿ ಹೊತ್ತುಕೊಂಡಿದ್ದು, ಪಕ್ಕದಲ್ಲೇ ಇದ್ದ ಹ್ಯಾಂಡ್ ಸ್ಯಾನಿಟೈಸರ್​ಗೆ ಬೆಂಕಿ ತಗುಲಿದೆ. ಬೆಂಕಿ ಹೊತ್ತಿಕೊಂಡ ಕೂಡಲೇ ಕಾರಿನ ಸೇಫ್ಟಿ ಲಾಕ್ ಆನ್​ಆಗಿದ್ದು, ಕಾರ್​ನ ಡೋರ್ ತೆಗೆದು ಹೊರಬರಲು ಸಂಜಯ್ ಮಾಡಿದ ಪ್ರಯತ್ನಗಳೆಲ್ಲವೂ ವ್ಯರ್ಥವಾಗಿ ಜೀವಂತ ದಹನವಾಗಿದ್ದಾರೆ. ಬೆಂಕಿಯ ಕೆನ್ನಾಲಿಗೆ ಹೆಚ್ಚಾಗುತ್ತಿದ್ದಂತೆ ಸ್ಥಳಿಯರು ಅಗ್ನಿಶಾಮಕ ದಳಕ್ಕೆ ಕರೆ ಮಾಡಿದರೂ, ಅಗ್ನಿಶಾಮಕ ದಳ ಸ್ಥಳಕ್ಕಾಗಮಿಸುವುದರ ಒಳಗೆ ಸಂಜಯ್ ಶಿಂಧೆ ಮೃತಪಟ್ಟಿದ್ದರು ಎಂದು ಪೊಲೀಸ್ ಮೂಲಗಳು ತಿಳಿಸಿವೆ.

ಕಾರಿನಲ್ಲಿದ್ದ ಸ್ಯಾನಿಟೈಸರ್​ಗೆ ಬೆಂಕಿ ತಗುಲಿ ಭಾರತದ ರಾಜಕೀಯ ನಾಯಕರೊಬ್ಬರು ಜೀವಂತ ದಹನವಾಗಿದ್ದಾರೆ.

error: Content is protected !!
%d bloggers like this: