janadhvani

Kannada Online News Paper

ಕೋಝಿಕ್ಕೋಡ್ | ಕೋವಿಡ್ ಸಂತ್ರಸ್ತರ ಅಂತ್ಯಕ್ರಿಯೆ ಸಂಬಂಧಿಸಿದ ಶಿಷ್ಟಾಚಾರವನ್ನು ಸಡಿಲಿಸುವಂತೆ ಆಗ್ರಹಿಸಿ ಭಾರತದ ಗ್ರ್ಯಾಂಡ್ ಮುಫ್ತಿ ಕಾಂತಪುರಂ ಎಪಿ ಅಬೂಬಕರ್ ಮುಸ್ಲಿಯಾರ್ ಪ್ರಧಾನಿ ನರೇಂದ್ರ ಮೋದಿಯವರಿಗೆ ಪತ್ರ ಬರೆದಿದ್ದಾರೆ.

ವಿಶ್ವ ಆರೋಗ್ಯ ಸಂಸ್ಥೆ ಹೊರಡಿಸಿದ ಮಾರ್ಗಸೂಚಿಯ ಪ್ರಕಾರ, ಕೋವಿಡ್ ಸೋಂಕಿನಿಂದ ಮರಣಿಸಿದ ವ್ಯಕ್ತಿಯಲ್ಲಿ ಧಾರ್ಮಿಕ ಮತ್ತು ಸಾಮಾಜಿಕ ಕಾರ್ಯಗಳನ್ನು ನಡೆಸಲು ಅನುಮತಿಸಲಾಗಿದೆ.

ಪಿಪಿಇ ನಿಯಮಗಳನ್ನು ಪಾಲಿಸಿ ಮೃತ ಶರೀರವನ್ನು ವೀಕ್ಷಿಸಲು ಹಾಗೂ ನೀರಿನ ಸ್ಪರ್ಶವನ್ನು ತಡೆಯುವ ಕೈಗವಸುಗಳಂತಹ ವಸ್ತುಗಳನ್ನು ಧರಿಸಿ ಸ್ನಾನ ಮಾಡಿಸುವುದನ್ನು ಮಾರ್ಚ್ 24, 2020 ರಂದು ಹೊರಡಿಸಲಾದ ವಿಶ್ವ ಆರೋಗ್ಯ ಸಂಸ್ಥೆಯ (WHO) ಮಾರ್ಗಸೂಚಿಗಳಲ್ಲಿ ಅನುಮತಿಸಿದೆ.

ಆದಾಗ್ಯೂ,ಕೋವಿಡ್ ಮೃತ ವ್ಯಕ್ತಿಯ ಸ್ನಾನ ಮಾಡಿಸುವುದು ಮತ್ತು ಧಾರ್ಮಿಕ ರೀತಿಯಲ್ಲಿ ವಸ್ತ್ರ ಧರಿಸುವುದನ್ನು ನಿಷೇಧಿಸುವ ಅಸ್ತಿತ್ವದಲ್ಲಿರುವ ಕೋವಿಡ್ ಶಿಷ್ಟಾಚಾರವು ಮರಣ ಹೊಂದಿದವರಿಗೆ ಅಗೌರವ ತೋರುತ್ತವೆ.

ಎಲ್ಲಾ ಧರ್ಮಗಳು ಮೃತ ಶರೀರವನ್ನು ಅತ್ಯಂತ ಗೌರವದಿಂದ ಕಾಣುವ ವಿಧಾನವನ್ನು ಅಳವಡಿಸಿಕೊಂಡಿವೆ. ಇದಲ್ಲದೆ, ಗಂಭೀರ ಕಾಯಿಲೆಯಿಂದ ಆಸ್ಪತ್ರೆಯಲ್ಲಿ ಕಳೆದು, ಮರಣ ನಂತರ ಧಾರ್ಮಿಕ ಪ್ರಕಾರ ಆಚರಣೆಗಳನ್ನು ಮಾಡಲು ಸಾಧ್ಯವಾಗುವುದಿಲ್ಲ ಎಂಬುದು ದುಃಖಕರ.

ಆದ್ದರಿಂದ, ವಿಶ್ವ ಆರೋಗ್ಯ ಸಂಸ್ಥೆ ಹೊರಡಿಸಿದ ಮಾನದಂಡಗಳಿಗೆ ಅನುಗುಣವಾಗಿ ಆರೋಗ್ಯವಂತ ಜನರು, ಮೃತ ವ್ಯಕ್ತಿಯ ಮೇಲೆ ಧಾರ್ಮಿಕ ವಿಧಿಗಳನ್ನು ನಡೆಸಲು ಸಾಧ್ಯವಾಗುವಂತೆ ದೇಶದ ಪ್ರೋಟೋಕಾಲ್ ಅನ್ನು ತಿದ್ದುಪಡಿ ಮಾಡಬೇಕೆಂದು ಪತ್ರದಲ್ಲಿ ಕಾಂತಪುರಂ ಒತ್ತಾಯಿಸಿದ್ದಾರೆ.

error: Content is protected !!
%d bloggers like this: