janadhvani

Kannada Online News Paper

ಕೆಸಿಎಫ್ ರಿಯಾದ್ ಝೋನ್ ಅಧೀನದಲ್ಲಿ ತಾಜುಲ್ ಫುಖಹಾ ಬೇಕಲ್ ಉಸ್ತಾದರ ಅನುಸ್ಮರಣೆ ನಡೆಸಲಾಯಿತು. ಝೋನ್ ಅಧ್ಯಕ್ಷ ಫಾರೂಕ್ ಸಅದಿಯವರ ಅಧ್ಯಕ್ಷತೆಯಲ್ಲಿ ಹಂಝ ಉಸ್ತಾದರ ದುಆದೊಂದಿಗೆ ಆರಂಭಗೊಂಡ ಕಾರ್ಯಕ್ರಮವನ್ನು ಕೆಸಿಎಫ್ ಸೌದಿ ರಾಷ್ಟ್ರೀಯ ಸಮಿತಿ ಅಧ್ಯಕ್ಷರಾದ ಡಿ.ಪಿ. ಯೂಸುಫ್ ಸಖಾಫಿ ಬೈತಾರ್ ಬೇಕಲ್ ಉಸ್ತಾದರ ಜೀವನ ಸರಳತೆ ಹಾಗೂ ಉಸ್ತಾದರ ಅಗಾಧ ಪಾಂಡಿತ್ಯದ ಬಗ್ಗೆ ವಿವರಿಸಿ ಕಾರ್ಯಕ್ರಮವನ್ನು ಉದ್ಘಾಟಿಸಿದರು.

ಮುಖ್ಯ ಅತಿಥಿಯಾಗಿ ಆಗಮಿಸಿದ ಕರ್ನಾಟಕ ರಾಜ್ಯ ಎಸ್ಎಸ್ಎಫ್ ಉಪಾಧ್ಯಕ್ಷರಾದ ಹಾಫಿಲ್ ಸುಫ್ಯಾನ್ ಸಖಾಫಿ, ಬೇಕಲ್ ಉಸ್ತಾದರ ಸಾರ್ವಜನಿಕರೊಂದಿಗಿನ ಒಡನಾಟ , ಅವರ ನೇತೃತ್ವದ ಶೈಲಿ, ಸ್ಥಾನಕ್ಕೆ ತಕ್ಕಂತಹ ಮಾತು , ಸರ್ವ ಧರ್ಮೀಯರ ಹಾಗೂ ಮುಸ್ಲಿಂ ಸಮಾಜದ ಪ್ರಶ್ನಾತೀತ ನಾಯಕರಾಗಿ ಎಲ್ಲರ ಪ್ರೀತಿ ಪಾತ್ರಕ್ಕೆ ಅರ್ಹರಾಗಿದ್ದು ಉಸ್ತಾದರ ಅಗಲುವಿಕೆ ತುಂಬಲಾರದ ನಷ್ಟವೆಂದು ಅನುಸ್ಮರಿಸಿದರು.

ಕೆಸಿಎಫ್ ಅಂತಾರಾಷ್ಟ್ರೀಯ ಸಮಿತಿಯ ಕಾರ್ಯದರ್ಶಿ ಕಮರುದ್ದೀನ್ ಗೂಡಿನಬಳಿ ಕಾರ್ಯಕರ್ತರನ್ನು ಉದ್ದೇಶಿಸಿ ಬೇಕಲ್ ಉಸ್ತಾದರನ್ನು ಮಾದರಿಯಾಗಿಸಿ ಜೀವಿಸುವುದರೊಂದಿಗೆ ಅವರ ಕನಸಿನ ಯೋಜನೆಗಳನ್ನು ಪೂರ್ತೀಕರಿಸಿದರೆ ಮಾತ್ರ ಉಸ್ತಾದರ ಅನುಸ್ಮರಣೆಗೆ ಅರ್ಥ ಕಲ್ಪಿಸಿದಂತಾಗುವುದು ಎಂದು ಉಪದೇಶ ನೀಡಿದರು.

ಕೆಸಿಎಫ್ ರಿಯಾದ್ ಝೋನ್ ಸಮಿತಿ ಅಧ್ಯಕ್ಷರಾದ ಫಾರೂಕ್ ಸಅದಿ ಅಧ್ಯಕ್ಷೀಯ ಭಾಷಣ ಮಾಡಿದರು . ಕೆಸಿಎಫ್ ಸೌದಿ ನಾಯಕರುಗಳಾದ ಸಿದ್ದೀಕ್ ಸಖಾಫಿ ಹಾಗೂ ಮುಹಮ್ಮದ್ ಕಲ್ಲರ್ಬೆ ಶುಭಾಶಯ ಕೋರಿದರು. ಕಾರ್ಯಕ್ರಮವನ್ನು ನಿಝಾಮುದ್ದೀನ್ ಉಸ್ಮಾನ್ ಸ್ವಾಗತಿಸಿ ಇಲ್ಯಾಸ್ ಲತೀಫಿ ವಂದಿಸಿದರು.

error: Content is protected !!
%d bloggers like this: