janadhvani

Kannada Online News Paper

ದಾರುಲ್ ಹಿಕ್ಮಾ ಬೆಳ್ಳಾರೆ ಇದರ ಜಿಸಿಸಿ ಸಮಿತಿ ಅಧೀನದಲ್ಲಿ ಅಕ್ಟೋಬರ್ 10 ರಂದು ಝೂಮ್ ಮೂಲಕ ತಾಜುಲ್ ಫುಖಹಾಅ್ ಬೇಕಲ್ ಉಸ್ತಾದರ ಅನುಸ್ಮರಣಾ ಕಾರ್ಯಕ್ರಮ ನಡೆಸಲಾಯಿತು.

ಜಾಮಿಅಃ ಸಅದಿಯ್ಯಾ ಅರಬಿಯ್ಯಾ ಇದರ ಕಾರ್ಯದರ್ಶಿ ಸಯ್ಯಿದ್ ಝೈನುಲ್ ಆಬಿದೀನ್ ಮುತ್ತುಕೋಯ, ಕಣ್ಣವಂ ತಂಙಳ್ ರವರು ಸಮಾಪನ ದುಆ ನಡೆಸಿದರು.

ಜಿಸಿಸಿ ಸಮಿತಿ ಅಧ್ಯಕ್ಷರಾದ ಯೂಸುಫ್ ಮುಸ್ಲಿಯಾರ್ ಚೆನ್ನಾರ್ ರವರ ಅಧ್ಯಕ್ಷತೆಯಲ್ಲಿ ನಡೆದ ಕಾರ್ಯಕ್ರಮವು ದಾರುಲ್ ಹಿಕ್ಮಾ ಕೇಂದ್ರ ಸಮಿತಿ ಅಧ್ಯಕ್ಷರಾದ ಹಸ್ಸನ್ ಸಖಾಫಿ ಬೆಳ್ಳಾರೆಯವರ ದುಆದೊಂದಿಗೆ ಆರಂಭಗೊಂಡಿತು. ಸತ್ತಾರ್ ಸಖಾಫಿ ಬೆಳ್ಳಾರೆಯವರು ಉದ್ಘಾಟನೆ ಮಾಡಿದ ಕಾರ್ಯಕ್ರಮಕ್ಕೆ ದಾರುಲ್ ಹಿಕ್ಮಾ ಯುಎಇ ಸಮಿತಿ ಅಧ್ಯಕ್ಷರಾದ ಝೈನುದ್ದೀನ್ ಹಾಜಿ ಬೇಳ್ಳಾರೆ, ಸೌದಿ ಅರೇಬಿಯಾ ರಾಷ್ಟ್ರೀಯ ಸಮಿತಿ ಅಧ್ಯಕ್ಷರಾದ ರಶೀದ್ ಹಾಜಿ ಬೇಳ್ಳಾರೆ ಹಾಗೂ ಕೆಸಿಎಫ್ ಸೌದಿ ಅರೇಬಿಯಾ ರಾಷ್ಟ್ರೀಯ ಸಮಿತಿ ಕೋಶಾಧಿಕಾರಿ ಮುಹಮ್ಮದ್ ಕಲ್ಲರ್ಬೆ ಯವರು ಆಶಂಸ ಮಾತುಗಳನ್ನು ಹೇಳಿದರು.

ತಾಜುಲ್ ಫುಖಹಾಅ್ ಬೇಕಲ್ ಉಸ್ತಾದರು ಅರಿವಿನ ಸಾಗರವಾಗಿದ್ದರು, ಇಲ್ಮ್ ಕಲಿಯುವುದು ಹಾಗೂ ಇತರರಿಗೆ ಕಲಿಸುವುದು ಮಾತ್ರ ಅವರ ಜೀವನದ ಉದ್ದೇಶವಾಗಿತ್ತು. ಫಿಖ್’ಹ್ ಕಿತಾಬ್ ನಲ್ಲಿ ತಿಳಿಸಿದಂತೆಯೇ ಆಗಿತ್ತು ಅವರ ಜೀವನ ಆದ್ದರಿಂದ ಉಸ್ತಾದರ ಜೀವನವನ್ನು ನೋಡಿದರೆ ಫಿಖ್’ಹ್ ಕಿತಾಬ್ ನೋಡಿದಂತಾಗುತ್ತದೆ ಎಂದು ಅನುಸ್ಮರಣಾ ಭಾಷಣದಲ್ಲಿ ರಫೀಕ್ ಸಅದಿ ದೇಲಂಪಾಡಿ ಉಸ್ತಾದರು ಹೇಳಿದರು.

ಕಾರ್ಯಕ್ರಮದಲ್ಲಿ ಕೊಂಬಳಿ ಝುಹ್’ರಿ, ಕಲಾಮ್ ಝುಹ್’ರಿ ಬೆಳ್ಳಾರೆ, ಅಮೀನ್ ಸಅದಿ ಚೆನಾರ್, ಕಯ್ಯೂಮ್ ಜಾಲ್ಸೂರ್, ದಾವೂದ್ ಮಾಸ್ಟರ್ ಪಂಜ, ಹನೀಫ್ ಮುಸ್ಲಿಯಾರ್ ಎಣ್ಮೂರು, ಹಸ್ಸನ್ ಹಾಜಿ ಇಂದ್ರಾಜೆ, ಮುಸ್ತಫಾ ಸುಳ್ಯ, ಜಲೀಲ್ ಎಣ್ಮೂರು, ಅಬ್ದುರ್ರಹ್ಮಾನ್ ಬಯಂಬಾಡಿ, ಅಬ್ದುಲ್ಲಾಹ್ ಅಂಚಿನಡ್ಕ ಹಾಗೂ ಇನ್ನಿತರ ಉಲಮಾ ಉಮರಾ ನೇತಾರರು ಹಾಗೂ ದಾರುಲ್ ಹಿಕ್ಮಾ ಸಂಸ್ಥೆಯ ಹಿತೈಷಿಗಳು ಭಾಗವಹಿಸಿದ್ದರು.

ಜಿಸಿಸಿ ಸಮಿತಿ ಪ್ರಧಾನ ಕಾರ್ಯದರ್ಶಿ ಸಾಲಿಹ್ ಬೆಳ್ಳಾರೆಯವರು ಸ್ವಾಗತ ಹೇಳಿದ ಕಾರ್ಯಕ್ರಮವನ್ನು ಅಬ್ದುಲ್ ಸಲಾಂ ಎಣ್ಮೂರು ರವರು ನಿರೂಪಿಸಿ ಝಕೀರ್ ಪಂಜರವರು ಧನ್ಯವಾದ ಹೇಳಿದರು.

error: Content is protected !!
%d bloggers like this: