janadhvani

Kannada Online News Paper

ಹೊಸದಿಲ್ಲಿ: ಕೇಂದ್ರ ಆಹಾರ ಮತ್ತು ನಾಗರಿಕ ಸರಬರಾಜು ಹಾಗೂ ಗ್ರಾಹಕ ವ್ಯವಹಾರ ಸಚಿವ ರಾಮ್‌ ವಿಲಾಸ್‌ ಪಾಸ್ವಾನ್‌ ಗುರುವಾರ ಆಸ್ಪತ್ರೆಯಲ್ಲಿ ನಿಧನರಾಗಿದ್ದಾರೆ. ಅವರಿಗೆ 74 ವರ್ಷ ವಯಸ್ಸಾಗಿತ್ತು.

ಕೆಲವು ದಿನಗಳ ಹಿಂದೆ ಅವರು ದಿಲ್ಲಿಯ ಆಸ್ಪತ್ರೆಯಲ್ಲಿ ಹೃದಯದ ಶಸ್ತ್ರ ಚಿಕಿತ್ಸೆಗೆ ಒಳಗಾಗಿದ್ದರು. ಇದಾದ ಬಳಿಕ ಚೇತರಿಸಿಕೊಳ್ಳದ ಅವರು ಗುರುವಾರ ಸಂಜೆ ನಿಧನರಾಗಿದ್ದಾರೆ.
ಅವರ ನಿಧನದ ಬೆನ್ನಿಗೆ ಟ್ಟೀಟ್‌ ಮಾಡಿರುವ ರಾಮ್‌ ವಿಲಾಸ್‌ ಪಾಸ್ವಾನ್‌ ಪುತ್ರ ಚಿರಾಗ್‌ ಪಾಸ್ವಾನ್‌, ‘ಪಪ್ಪಾ, ಇಂದು ನೀವು ಈ ಜಗತ್ತಿನಲ್ಲಿ ಇಲ್ಲ. ಆದರೆ ನೀವು ಎಲ್ಲೇ ಇರಿ, ನೀವು ಯಾವತ್ತೂ ನನ್ನೊಂದಿಗೆ ಇರುತ್ತೀರಿ. ಮಿಸ್‌ ಯೂ ಪಪ್ಪಾ’ ಎಂದಿದ್ದಾರೆ.

error: Content is protected !!
%d bloggers like this: