janadhvani

Kannada Online News Paper

ಹಿರಿಯ ವಿದ್ವಾಂಸ,ಕರ್ಮ ಶಾಸ್ತ್ರಜ್ಞ ಬೇಕಲ್ ಉಸ್ತಾದ್ ನಿಧನ: ಪಿಎಫ್ಐ ಜಿಲ್ಲಾ ಸಮಿತಿ ಸಂತಾಪ

ಪುತ್ತೂರು: ಉಡುಪಿ ಚಿಕ್ಕಮಗಳೂರು, ಹಾಸನ ಮತ್ತು ಶಿವಮೊಗ್ಗ ಜಿಲ್ಲೆಗಳ ಸಂಯುಕ್ತ ಖಾಝಿ ಯಾಗಿರುವ ಅಲ್ ಹಾಜ್ ಪಿ.ಎಂ ಇಬ್ರಾಹಿಂ ಮುಸ್ಲಿಯಾರ್ ಬೇಕಲ್ ಉಸ್ತಾದ್ ರವರು ನಿಧನಕ್ಕೆ ಪಾಪ್ಯುಲರ್ ಫ್ರಂಟ್ ಜಿಲ್ಲಾ ಸಮಿತಿ ಸಂತಾಪ ಸೂಚಕವನ್ನು ವ್ಯಕ್ತಪಡಿಸುತ್ತದೆ.

ಬೇಕಲ್‌ ಉಸ್ತಾದ್ ಎಂದೇ ಜನಪ್ರಿಯರಾಗಿದ್ದ ಇವರು ಕರ್ಮಶಾಸ್ತ್ರ ಮತ್ತು ಖಗೋಳಶಾಸ್ತ್ರದಲ್ಲಿ ಅಗಾದವಾದ ಪಾಂಡಿತ್ಯವನ್ನು ಹೊಂದಿದ್ದರು.

ಸುನ್ನಿ ಜಂಇಯ್ಯತುಲ್ ಉಲಮಾ ರಾಜ್ಯಾಧ್ಯಕ್ಷರಾಗಿ ಜಾಮಿಯಾ ಸ-ಅದಿಯಾ ಅರಬಿಯಾ ಕಾಲೇಜಿನ ಪ್ರಾಚಾರ್ಯರು ಮತ್ತು ಸಮಸ್ತ ಉಲಮಾ ಒಕ್ಕೂಟದ ಕೇಂದ್ರ ಮುಶಾವರದ ಸದಸ್ಯತ್ವ ಸೇರಿದಂತೆ ಹಲವಾರು ಮಹೋನ್ನತ ಸಂಸ್ಥೆಗಳ ಪದಾಧಿಕಾರಿಯಾಗಿ ಸೇವೆ ಸಲ್ಲಿಸಿ ಸಮುದಾಯವು ಧಾರ್ಮಿಕ ವಾಗಿ ಮತ್ತು ಮತ್ತು ಶೈಕ್ಷಣಿಕ ವಾಗಿ ಬೆಳವಣಿಗೆ ಹೊಂದಲು ಶ್ರಮಿಸಿದ್ದರು.ಇವರ ಧಾರ್ಮಿಕ ಕ್ಷೇತ್ರದ ಸಾಧನೆಗೆ “ತಾಜುಲ್ ಫುಕ್ ಹಾಅ್” ಎಂಬ ಬಿರುದು ಕೂಡ ಲಭಿಸಿತ್ತು.ಇವರ ನಿಧನವು ಸಮಾಜಕ್ಕೆ ಮತ್ತು ಸಮುದಾಯಕ್ಕೆ ತುಂಬಲಾರದ ನಷ್ಟವಾಗಿದೆ.
ಅಲ್ಲಾಹ್ ತಆಲ ಇವರ ಎಲ್ಲಾ ಸತ್ಕರ್ಮಗಳನ್ನು ಸ್ವೀಕರಿಸಿ ಇವರೊಂದಿಗೆ ನಮ್ಮನ್ನು ಸ್ವರ್ಗದಲ್ಲಿ ಒಟ್ಟು ಗೂಡಿಸಲಿ ಎಂದು ಪ್ರಾರ್ಥಿಸುತ್ತೇವೆ.

ಜಾಬಿರ್ ಅರಿಯಡ್ಕ
(ಅಧ್ಯಕ್ಷರು ಪಾಪ್ಯುಲರ್ ಫ್ರಂಟ್ ಪುತ್ತೂರು ಜಿಲ್ಲಾ ಸಮಿತಿ)

error: Content is protected !! Not allowed copy content from janadhvani.com