ಮರ್ಕಝುಲ್ ಹುದಾ ಬುರೈದ ಸಮಿತಿಯ 2020-21 ನೇ ಸಾಲಿನವಾರ್ಷಿಕ ಮಹಾಸಭೆಯು 17-09-2020 ರಂದು ಬುರೈದ ಲೋಕ್ದಿಯಾ ಇಸ್ತಿರಾದಲ್ಲಿ ಅಬ್ಬಾಸ್ ಅಲಿ ಕುಕ್ಕುವಳ್ಳಿಯವರ ಅಧ್ಯಕ್ಷತೆಯಲ್ಲಿ ನಡೆಯಿತು
ಅಬ್ದುಲ್ ಕರೀಂ ಇಮ್ದಾದಿ ದುವಾ ನೆರವೇರಿಸಿದರು ಕಾರ್ಯದರ್ಶಿ ಇಸ್ಮಾಯಿಲ್ ಆನಡ್ಕ ಸ್ವಾಗತಿಸಿ ನಂತರ ವಾಚಿಸಿದ ವಾರ್ಷಿಕ ವರದಿಯನ್ನು ಸಬೆಯು ಒಕ್ಕೊರಲಿನಿಂದ ಅನುಮೋದಿಸಿತು
ಕೆ.ಸಿ.ಎಫ್ ದಾಯಿ ಯಾಕೂಬ್ ಸಖಾಫಿ ಉಸ್ತಾದರು ಹಳೆ ಕಮಿಟಿಯನ್ನು ಬರ್ಕಾಸು ಮಾಡಿದರು
ಚುನಾವಣಾದಿಕಾರಿಯಾಗಿ ಆಗಮಿಸಿದ ಮರ್ಕಝುಲ್ ಹುದಾ ಸೌದಿ ರಾಷ್ಟ್ರೀಯ ಸಮಿತಿ ಪ್ರದಾನ ಕಾರ್ಯದರ್ಶಿ ಜನಾಬ್ ನೌಷದ್ ಪೋಳ್ಯ ಚುನಾವಣಾ ಪ್ರಕ್ರಿಯೆಗಳನ್ನು ನೆರವೇರಿಸಿ 2020-21 ನೇ ಸಾಲಿನ ಹೊಸ ಸಮಿತಿಯನ್ನು ರಚಿಸಿದರು.
2020-21 ನೇ ಸಾಲಿನ ನೂತನ ಸಮಿತಿ
ಗೌರವಧ್ಯಕ್ಷರು:ಯಾಕೂಬ್ ಸಖಾಫಿ
ಅಧ್ಯಕ್ಷರು:ಝಕರಿಯಾ ಕೊರಿಂಗಿಲ
ಉಪಾಧ್ಯಕ್ಷರು:ಶಾಹುಲ್ ಹಮೀದ್ ಮಣ್ಣಾಪು
ಕಾರ್ಯದರ್ಶಿ:ಬಶೀರ್ ಕನ್ಯಾನ
ಜೊತೆ ಕಾರ್ಯದರ್ಶಿ:ರಮೀಝ ಬೆಳ್ಳಾರೆ
ಕೋಶಾಧಿಕಾರಿ:ಸೈಯದ್ ವೈ.ಎಂ.ಕೆ
ಸಂಚಾಲಕರು:ತಾಜುದ್ದೀನ್ ಕೆಮ್ಮಾರ, ಮುಹಮ್ಮದ್ ಕುಳ, ಅಬ್ಬಾಸ್ ಅಲಿ ಕುಕ್ಕುವಳ್ಳಿ.
ಕೆ.ಸಿ.ಎಫ್ ಸೌದಿ ರಾಷ್ಟ್ರಿಯ ಸಮಿತಿ ಪ್ರದಾನ ಕಾರ್ಯದರ್ಶಿ ಸಾಲಿ ಬೆಳ್ಳಾರೆ ಹಾಗೂ ದಾರುಲ್ ಇರ್ಷಾದ್ ಬುರೈದ ಸಮಿತಿ ಅಧ್ಯಕ್ಷರಾದ ರಝಾಕ್ ನೆಕ್ಕಿಲ್ ಹಾಗೂ ಇನ್ನಿತ್ತರರು ಉಪಸ್ಥಿತರಿದ್ದರು
ಡಾII M S M ಅಬ್ದುಲ್ ರಶೀದ್ ಝೆನಿ ಉಸ್ತಾದರು ನೂತನ ಸಮಿತಿಗೆ ಶುಭ ಹಾರೈಸಿದರು.