janadhvani

Kannada Online News Paper

ಕೋವಿಡ್ ಹಲವಾರು ಪಾಠಗಳನ್ನು ಕಲಿಸಿಕೊಟ್ಟಿದೆ- ಕೆಸಿಎಫ್ ಕಾರ್ಯಕ್ರಮದಲ್ಲಿ ಡಾ|ಹಕೀಮ್ ಅಝ್’ಹರಿ

ಕರ್ನಾಟಕ ಕಲ್ಚರಲ್ ಫೌಂಡೇಶನ್ ಇದರ ಅಂತರ್ರಾಷ್ಟ್ರೀಯ ಸಮಿತಿ ಸೆಪ್ಟೆಂಬರ್ 04 ರಂದು ಆಯೋಜಿಸಿದ “ಕೋವಿಡ್-19 ಸಮಯದಲ್ಲಿ ಹಾಗೂ ನಂತರದ ಜೀವನ” ಎಂಬ ಆನೈನ್ ಕಾರ್ಯಕ್ರಮದಲ್ಲಿ ಡಾ| ಅಬ್ದುಲ್ ಹಕೀಮ್ ಅಲ್-ಅಝ್’ಹರಿ ಉಸ್ತಾದರು ಮುಖ್ಯ ಪ್ರಭಾಷಣ ಮಾಡಿದರು.

ಕೆಸಿಎಫ್ ಅಂತರ್ರಾಷ್ಟ್ರೀಯ ಸಾಂತ್ವನ ಇಲಾಖೆಯ ಅಧ್ಯಕ್ಷರಾದ ಅಲೀ ಮುಸ್ಲಿಯಾರ್ ಬಹರೈನ್ ರವರ ದುಆದೊಂದಿಗೆ ಆರಂಭಿಸಿದ ಕಾರ್ಯಕ್ರಮದಲ್ಲಿ ಅಡ್ಮಿನ್ ಇಲಾಖೆಯ ಕಾರ್ಯದರ್ಶಿ ಇಕ್ಬಾಲ್ ಬರ್ಕಾ ಒಮಾನ್ ರವರು ಸ್ವಾಗತವನ್ನು ಹೇಳಿದರು. ಹಾಫಿಲ್ ದರ್’ವೇಷ್ ಬಹರೈನ್ ರವರು ಕಿರಾಅತ್ ಪಾರಾಯಣ ನಡೆಸಿ, ಅಂತರ್ರಾಷ್ಟ್ರೀಯ ಸಮಿತಿಯ ಪ್ರಧಾನ ಕಾರ್ಯದರ್ಶಿ ಜನಾಬ್ ಖಮರುದ್ದೀನ್ ಗೂಡಿನಬಳಿ ಯವರು ಉದ್ಘಾಟನಾ ಭಾಷಣವನ್ನು ಮಾಡಿದರು.

ಅಂತರ್ರಾಷ್ಟ್ರೀಯ ಸಮಿತಿ ಅಧ್ಯಕ್ಷರಾದ ಡಾ| ಶೇಖ್ ಬಾವ ಮಂಗಳೂರು, ಫೈನಾನ್ಷಿಯಲ್‌ ಕಂಟ್ರೋಲರ್ ಅಬ್ದುಲ್ ಹಮೀದ್ ಸಅದಿ ಈಶ್ವರ ಮಂಗಳ ರವರು ಕಾರ್ಯಕ್ರಮಕ್ಕೆ ಶುಭ ಕೋರಿ ಮಾತನಾಡಿದರು.

ಮುಖ್ಯ ಪ್ರಭಾಷಣದಲ್ಲಿ ಮಾತನಾಡಿದ ಅಝ್’ಹರಿ ಉಸ್ತಾದರು ಕೋವಿಡ್ ಬಗ್ಗೆ ತಲೆಕೆಡಿಸಬೇಕಾದ ಆವಶ್ಯಕತೆ ಇಲ್ಲ. ಪವಿತ್ರ ಇಸ್ಲಾಮಿನಲ್ಲಿ ಶುಚಿತ್ವಕ್ಕೆ ಬಹಳ ಪ್ರಾಮುಖ್ಯತೆಯನ್ನು ನೀಡಿದೆ ಆದ್ದರಿಂದ ಎಲ್ಲಾ ಸಮಯದಲ್ಲೂ ಶುಚಿತ್ವ ವನ್ನು ಕಾಪಾಡಬೇಕು. ಆತ್ಮವಿಶ್ವಾಸ ಎಂದಿಗೂ ಕೈ ಬಿಡಬಾರದು ಎಂದರು.

ಕೋವಿಡ್-19 ಜನಸಾಮಾನ್ಯರಿಗೆ ಹಲವಾರು ಪಾಠಗಳನ್ನು ಕಲಿಸಿಕೊಟ್ಟಿದೆ. ಅದರಲ್ಲಿ ಪ್ರಮುಖವಾಗಿ ಸರಳವಾದ ಜೀವನ ಹೇಗೆ ನಡೆಸಬೇಕು ಎಂಬ ವಿಷಯವಾಗಿದೆ. ಒಂದು ಮದುವೆ ನಡೆಸಬೇಕಾದರೆ ಲಕ್ಷಗಟ್ಟಲೆ ಖರ್ಚು ಮಾಡುತ್ತಿದ್ದವರು ಈಗ ಕೇವಲ ಬೆರಳೆಣಿಕೆಯಷ್ಟು ಜನರನ್ನು ಮಾತ್ರ ಆಹ್ವಾನಿಸಿ ಬಹಳ ಸರಳವಾಗಿ ನಡೆಸುತ್ತಿದ್ದಾರೆ ಹೀಗೆ ಎಲ್ಲಾ ವಿಷಯದಲ್ಲೂ ಸರಳತೆ ಕಾಣಬಹುದಾಗಿದೆ. ಕೋವಿಡ್ ನಂತರವೂ ಇದೇ ರೀತಿ ಅನುಸರಿಸಿ ಇಸ್ಲಾಮ್ ಧರ್ಮ ಕಲಿಸಿಕೊಟ್ಟ ನೀತಿಗಳನ್ನು ಅನುಸರಿಸಬೇಕು ಎಂಬುದನ್ನೂ ನೆನಪಿಸಿದರು.

ವೈದ್ಯರು ಹಾಗೂ ಸರಕಾರ ಸೂಚಿಸುವ ಸಕಲ ಮುಂಜಾಗ್ರತಾ ಕ್ರಮಗಳನ್ನು ಕೈಗೊಂಡಲ್ಲಿ ಕೊರೋನ ಹರಡುವುದನ್ನು ತಡೆಗಟ್ಟಬಹುದು ಆದ್ದರಿಂದ ಇದಕ್ಕಾಗಿ ಹೆದರಬೇಕಾದ ಅವಶ್ಯಕತೆ ಇಲ್ಲ ಎಂಬ ಮಾತನ್ನು ಕಾರ್ಯಕ್ರಮದ ಅಧ್ಯಕ್ಷ ಸ್ಥಾನ ಅಲಂಕರಿಸಿದ ಡಾ| ಅಬ್ದುರ್ರಶೀರ್ ಝೈನಿ ಉಸ್ತಾದರು ಅಧ್ಯಕ್ಷ ಮಾತಿನಲ್ಲಿ ಹೇಳಿದರು.

SSF, SYS ಹಾಗೂ KCF ಸಂಘಟನೆಗಳು ಆತ್ಮೀಯ ಮಜ್’ಲಿಸ್ ಗಳನ್ನು ನಡೆಸುವುದರೊಂದಿಗೆ ಸಂದರ್ಭಕ್ಕೆ ಸರಿಯಾಗಿ ಅಚ್ಚುಕಟ್ಟಾದ ರೀತಿಯಲ್ಲಿ ಸಾಂತ್ವನ ಕಾರ್ಯಗಳನ್ನೂ ನಡೆಸಿ ಸಮೂಹಕ್ಕೆ ಒಂದು ಮಾದರಿಯಾಗುತ್ತಿದೆ ಎಂದೂ ಝೈನಿ ಉಸ್ತಾದರು ಹೇಳಿದರು.

ನಂತರ ಮಾತನಾಡಿದ ಅಂತರ್ರಾಷ್ಟ್ರೀಯ ಸಮಿತಿ ಸಂಘಟನಾ ಇಲಾಖೆಯ ಅಧ್ಯಕ್ಷರಾದ ಜನಾಬ್ ಅಬ್ದುಲ್ ಹಮೀದ್ ಈಶ್ವರ ಮಂಗಳ ರವರು ಕೋವಿಡ್ ವೈರಸ್ ಗಿಂತಲೂ ಮಾರಕವಾಗಿದ್ದ ಸ್ಪಾನಿಷ್ ಜ್ವರ, ಇದು ಮಾತ್ರವಲ್ಲದೇ ವಿಶ್ವ ಮಹಾಯುದ್ಧಗಳಿಂದ ಕೂಡ ವಿಶ್ವ ಹೊರಬಂದಿದೆ ಹೀಗಿರುವಾಗ ಖಂಡಿತವಾಗಿಯೂ ಕೊರೋನ ವೈರಸ್‌ ನಿಂದಲೂ ಹೊರ ಬರಲಿದ್ದೇವೆ ಎಂದು ಧೈರ್ಯವನ್ನು ತುಂಬಿದರು. ಕೋವಿಡ್ ಕಾಲದಲ್ಲಿ ಕೆಸಿಎಫ್ ಕಾರ್ಯಕರ್ತರು ನಡೆಸಿದ ಸಾಂತ್ವನ ಕಾರ್ಯಗಳನ್ನು ಮೆಚ್ಚಿದ ಅವರು ಯುದ್ದ ಭೂಮಿಯಲ್ಲಿ ಯೋಧರು ಎಷ್ಟು ಧೈರ್ಯದಿಂದ ಹೋರಾಟ ನಡೆಸುತ್ತಾರೋ ಅದೇ ರೀತಿ ಕೆಸಿಎಫ್ ಕಾರ್ಯಕರ್ತರು ಕೋವಿಡ್ ಸಮಯದಲ್ಲಿ ನಿರಾಶ್ರಿತರ ನೆರವಿಗೆ ಧಾವಿಸಿದ್ದಾರೆ ಎಂಬ ಸಂತೋಷವನ್ನು ಹಂಚಿಕೊಂಡರು.

ಇಖ್ಬಾಲ್ ಬರ್ಕಾ ಒಮಾನ್ ರವರು ನಿರೂಪಣೆ ಮಾಡಿದ ಕಾರ್ಯಕ್ರಮವನ್ನು ರಹೀಮ್ ಸಅದಿ ಖತ್ತರ್ ರವರು ಧನ್ಯವಾದ ಹೇಳಿ ಮುಕ್ತಾಯಗೊಳಿಸಿದರು.

error: Content is protected !! Not allowed copy content from janadhvani.com