ಅಬುಧಾಬಿ: ಯುಎಇ ಘೋಷಿಸಿದ ನಿವೃತ್ತಿ ವೀಸಾ ಯೋಜನೆಗೆ ಅತ್ಯುತ್ತಮ ಪ್ರತಿಕ್ರಿಯೆ. ಈ ಯೋಜನೆಯು ಭಾರತ ಸೇರಿದಂತೆ ಹಲವು ದೇಶಗಳ ಸಾವಿರಾರು ಜನರಿಗೆ ಪ್ರಯೋಜನಕಾರಿ ಎಂದು ಅಂದಾಜಿಸಲಾಗಿದೆ.
55 ವರ್ಷಕ್ಕಿಂತ ಮೇಲ್ಪಟ್ಟವರಿಗೆ ನಿವೃತ್ತಿ ವೀಸಾ ನೀಡುವ ಯೋಜನೆಯನ್ನು ಯುಎಇ ನಿನ್ನೆ ಘೋಷಿಸಿತ್ತು. ಪಾಲುದಾರರು ಮತ್ತು ಮಕ್ಕಳಿಗೆ ವೀಸಾ ಲಭ್ಯ. ಈ ನವೀನ ಯೋಜನೆಯನ್ನು ದುಬೈ ಪ್ರವಾಸೋದ್ಯಮ ಮತ್ತು ವಲಸೆ ಅಭಿವೃದ್ಧಿಪಡಿಸಿದೆ. ಈ ಯೋಜನೆಯು ಹೆಚ್ಚಿನ ಪ್ರವಾಸಿಗರನ್ನು ಮತ್ತು ಹೂಡಿಕೆದಾರರನ್ನು ದುಬೈಗೆ ಆಕರ್ಷಿಸಲು ಸಹಾಯ ಮಾಡುತ್ತದೆ ಎಂದು ನಂಬಲಾಗಿದೆ.
ವೀಸಾಗಳನ್ನು ಕಟ್ಟುನಿಟ್ಟಾದ ನಿಯಮಗಳು ಮತ್ತು ಷರತ್ತುಗಳ ಮೇಲೆ ನೀಡಲಾಗುತ್ತದೆ. ಅರ್ಜಿ ಸಲ್ಲಿಸುವ ಮೊದಲು, ಅರ್ಜಿದಾರರಿಗೆ ಆರೋಗ್ಯ ವಿಮೆ, ತಿಂಗಳಿಗೆ 20 ಸಾವಿರ ದಿರ್ಹಮ್ ಆದಾಯ, 10 ಲಕ್ಷ ದಿರ್ಹಮ್ ಹೂಡಿಕೆ, ದುಬೈನಲ್ಲಿ 20 ಲಕ್ಷ ದಿರ್ಹಮ್ ಮೌಲ್ಯದ ಆಸ್ತಿ, ಠೇವಣಿ ಮತ್ತು ಆಸ್ತಿಗಳು ಸೇರಿ 20 ಲಕ್ಷ ದಿರ್ಹಮ್ ಮೌಲ್ಯ ಮುಂತಾತವುಗಳಲ್ಲೊಂದು ಹೊಂದಿರಬೇಕು.
ನಿವಾಸಿ ವಿಸಾ ಹೊಂದಿರುವವರನ್ನು ಮೊದಲ ಬಾರಿಗೆ ಪರಿಗಣಿಸಲಾಗುವುದು ಎಂದು ದುಬೈ ವಲಸೆ ಇಲಾಖೆ ತಿಳಿಸಿದೆ.
ವಿಶ್ವದ ಅತ್ಯುತ್ತಮ ಪ್ರವಾಸಿ ತಾಣಗಳಲ್ಲಿ ಒಂದಾದ ದುಬೈನಲ್ಲಿ ಕುಟುಂಬದೊಂದಿಗೆ ಇರಲು ಅನೇಕ ಜನರು ಅಧಿಕಾರಿಗಳನ್ನು ಸಂಪರ್ಕಿಸುತ್ತಿದ್ದಾರೆ.















ಇನ್ನಷ್ಟು ಸುದ್ದಿಗಳು
ಸೌದಿಯಲ್ಲಿ ನಕಲಿ ದಾಖಲೆ ದೃಢೀಕರಣ ಜಾಲ: ಭಾರತೀಯ ರಾಯಭಾರ ಕಚೇರಿಯಿಂದ ಎಚ್ಚರಿಕೆ
ವಿಮಾನಯಾನ ರದ್ದತಿಯಿಂದ ಅತಂತ್ರರಾದ ಉಮ್ರಾ ಯಾತ್ರಾರ್ಥಿಗಳು- DKSCಯಿಂದ ಮಾನವೀಯ ನೆರವು
ವಲಸಿಗರಿಗೆ ಶುಭ ಸುದ್ದಿ: ಜಿದ್ದಾ–ಕೋಝಿಕ್ಕೋಡ್ ನಡುವೆ ಫ್ಲೈನಾಸ್ ನೇರ ವಿಮಾನ ಸೇವೆ ಆರಂಭ
ರಿಯಾದ್ ವಿಮಾನ ನಿಲ್ದಾಣ ಬಂದ್: ಪರ್ಯಾಯ ಪ್ರಯಾಣ ಮಾರ್ಗದಲ್ಲೂ ಟಿಕೆಟ್ ದರ ಏರಿಕೆ
ಸೌದಿ: ಸಿಲುಕಿರುವ ಯಾತ್ರಿಕರ ವಾಪಸಾತಿಗೆ ರಾಯಭಾರ ಕಚೇರಿ ತೀವ್ರ ಕಾರ್ಯಾಚರಣೆ
ಯುಎಇ : ನಾಲ್ಕು ಪಾಸ್ಪೋರ್ಟ್ ಸೇವಾ ಕೇಂದ್ರಗಳು ಇಂದಿನಿಂದ ಸ್ಥಗಿತ- ರಾಯಭಾರ ಕಚೇರಿ
ಉಮ್ರಾ ಯಾತ್ರಿಕರ ವಾಪಸಾತಿಗೆ ಪರ್ಯಾಯ ವಿಮಾನ ವ್ಯವಸ್ಥೆ ಕಲ್ಪಿಸಬೇಕು- ರಾಯಭಾರ ಕಚೇರಿ
ರಿಯಾದ್, ಜಿದ್ದಾ ವಿಮಾನ ಸೇವೆಗಳು ಅಕ್ಟೋಬರ್ 27ರವರೆಗೆ ಸ್ಥಗಿತ
ಧರ್ಮ ನಿಂದನೆ ದೂರು: ಯುವಕನ ಮರಣದಂಡನೆಯನ್ನು ರದ್ದುಗೊಳಿಸಿದ ಸೌದಿ ಸುಪ್ರೀಂ ಕೋರ್ಟ್
ಸೌದಿ ವಿಮಾನ ಸೇವೆ ಸ್ಥಗಿತ: ವೀಸಾ ಅವಧಿ ಮೀರಿದವರಿಗೆ ದಂಡವಿಲ್ಲದೆ ನಿರ್ಗಮನಕ್ಕೆ ಅವಕಾಶ- ಭಾರತೀಯ ರಾಯಭಾರ ಕಚೇರಿ