ಸೌದಿ ಅರೇಬಿಯಾ:(ಜುಬೈಲ್)
ದಿನಾಂಕ 21/08/2020 ಶುಕ್ರವಾರ ಸಂಜೆಕಾರ್ಕಳ ತಾಲೂಕಿನ ಬೆಳ್ವಾಯಿ ಮೂಲದ ಶಕೀಲ್ ಇಸ್ಹಾಕ್ ಎಂಬವರು ಹೃದಯಾಘಾತದಿಂದ ಜುಬೈಲಿನ ತಮ್ಮ ಸ್ವಗೃಹದಲ್ಲಿ ನಿಧನರಾಗಿದ್ದರು.
ಕೂಡಲೇ ಕಾರ್ಯಪ್ರವರ್ತರಾದ KCF ದಮ್ಮಾಮ್ ಝೋನ್ ರಿಲೀಫ್ ಕನ್ವೀನರ್ ಭಾಷಾ ಗಂಗಾವಳ್ಳಿ ಹಾಗೂ ಜುಬೈಲ್ ಶೋಲ ಸೆಕ್ಟರ್ ಸಾಂತ್ವನ ತಂಡದ ನಾಯಕರಾದ ಕಲಂದರ್ ಮುಕ್ಕ,ಹಮೀದ್ ಕೃಷ್ಣಾಪುರ ರವರು ಮರಣೋತ್ತರ ಕ್ರಿಯೆಗೆ ಬೇಕಾದ ಎಲ್ಲಾ ದಾಖಲೆ ಪತ್ರಗಳನ್ನು ಭಾರತದಿಂದ SSF ಉಡುಪಿ ಜಿಲ್ಲಾ ಕಾರ್ಯದರ್ಶಿ NC ರಹೀಮ್ ಮೂಡಬಿದಿರೆಯವರ ಸಹಕಾರದಿಂದ ಎಲ್ಲಾ ದಾಖಲೆಗಳನ್ನು ಸರಿಪಡಿಸಿ ಅಂತ್ಯಕ್ರಿಯೆಗೆ
ಸಿದ್ದತೆ ನಡೆಸಲಾಯಿತು.
ದಿನಾಂಕ 26/08/2020 ಬುಧವಾರಂದು ಜುಬೈಲಿನ ದಫನ ಸ್ಥಳದಲ್ಲಿ KCF ಶೋಲ ಸೆಕ್ಟರ್ ಸಾಂತ್ವನ ತಂಡ ಹಾಗೂ ಮೃತರ ಕುಟುಂಬದವರ ಸಹಕಾರದೊಂದಿಗೆ ಅಂತ್ಯಕ್ರಿಯೆ ನಡೆಸಲಾಯಿತು.
ಕೆ.ಸಿ.ಎಫ್.ಶೋಲ ಸೆಕ್ಟರ್ ಜುಬೈಲ್ ಇದರ ಅಧ್ಯಕ್ಷರಾದ MKM ಅಬೂಬಕರ್ ಮದನಿ ಉಸ್ತಾದ್ ತ್ವೈಬಾ, ಹಾಗೂ ಹಲವು ನಾಯಕರು ಅಂತ್ಯಕ್ರಿಯೆಯಲ್ಲಿ ಭಾಗಿಯಾಗಿ ಮೃತರಿಗಾಗಿ ದುವಾ ನೆರವೇರಿಸಲಾಯಿತು.
*ಸಾಂತ್ವನ ವಿಭಾಗ
KCF ಶೋಲ ಸೆಕ್ಟರ್ ಜುಬೈಲ್