janadhvani

Kannada Online News Paper

‘ತನಾಫುಸ್ 2020’ ರಾಜ್ಯ ಮಟ್ಟದ ಸ್ಪರ್ಧಾ ಕಾರ್ಯಕ್ರಮಕ್ಕೆ ವಿದ್ವತ್ ಸಮಾರೋಪ

ಬೆಂಗಳೂರು: ಕರ್ನಾಟಕ ರಾಜ್ಯ ಸುನ್ನೀ ಸ್ಟೂಡೆಂಟ್ ಫೆಡರೇಷನ್‌ ಆಗಸ್ಟ್ 28 ರಂದು ಪ್ರೌಢ ಚಾಲನೆ ನೀಡಲಾದ ರಾಜ್ಯ ಮಟ್ಟದ ತನಾಫುಸ್ 2020, ಸ್ಪರ್ಧಾ ಕಾರ್ಯಕ್ರಮಕ್ಕೆ ಇಂದು 30/08/2020 ವಿದ್ವತ್ ಸಮಾರೋಪ ಸಮಾರಂಭ ಆನ್ಲೈನಾಗಿ ಝೂಮ್ ಅಪ್ಲಿಕೇಶನ್‌ನಲ್ಲಿ ನಡೆಯಿತು. ಕಾರ್ಯಕ್ರಮ ಎಸ್ಸೆಸ್ಸೆಫ್ ಅಧಿಕೃತ ಯೂಟ್ಯೂಬ್ ಚಾನೆಲ್‌ನಲ್ಲಿ ನೇರವಾಗಿ ಪ್ರಸಾರ ಮಾಡಲಾಯಿತು.

ಆಗಸ್ಟ್ 28, 29, 30, ಮೂರು ದಿನಗಳ ಕಾಲ ನಡೆದ ಕಾರ್ಯಕ್ರಮದ ಸಮಾರೋಪ ಸಮಾರಂಭದ ಅಧ್ಯಕ್ಷತೆಯನ್ನು ಎಸ್ಸೆಸ್ಸೆಫ್ ಕರ್ನಾಟಕ ರಾಜ್ಯಾಧ್ಯಕ್ಷರಾದ ಅಸ್ಸಯ್ಯಿದ್ ಉಮರ್ ಅಸ್ಸಖಾಫ್ ಮದನಿ ವಹಿಸಿದರು ಮತ್ತು ದುಆಃ ನೆರವೇರಿಸುವುದರೊಂದಿಗೆ ಕಾರ್ಯಕ್ರಮಕ್ಕೆ ಚಾಲನೆ ನೀಡಿದರು. ಕೆಸಿಎಪ್ ಅಂತಾರಾಷ್ಟ್ರೀಯ ಸಮಿತಿ ಅಧ್ಯಕ್ಷರಾದ ಡಾ|| ಶೈಖ್ ಬಾವ ಹಾಜಿ ಅಬುಧಾಬಿ ಕಾರ್ಯಕ್ರಮವನ್ನು ಉದ್ಘಾಟಿಸಿದರು.

ಎಸ್ಸೆಸ್ಸೆಫ್ ಕರ್ನಾಟಕ ಇದರ ಪ್ರಥಮ ರಾಜ್ಯಾಧ್ಯಕ್ಷರಾದ ಯೂಸುಫ್ ಸ‌ಅದಿ ಅಯ್ಯಂಗೇರಿ ಸಂದೇಶ ಭಾಷಣವನ್ನು ಮಾಡಿದರು. ಕಾರ್ಯಕ್ರಮದಲ್ಲಿ ಮುಖ್ಯ ತೀರ್ಪುಗಾರರಾಗಿದ್ದ ರಾಜ್ಯ ಎಸ್.ವೈ.ಎಸ್ ಸಾಂತ್ವನ ವಿಭಾಗದ ಕಾರ್ಯದರ್ಶಿ ಜಿ.ಎಂ ಮುಹಮ್ಮದ್ ಕಾಮಿಲ್ ಸಖಾಫಿ ಕಾರ್ಯಕ್ರಮದ ಅವಲೋಕನ ಭಾಷಣ ಮಾಡಿದರು. ರಾಜ್ಯ ಎಸ್ಸೆಸ್ಸೆಫ್ ಇದರ ಮಾಜಿ ನಾಯರು ಮತ್ತು ಈಗ ವಿವಿಧ ಸುನ್ನೀ ಸಂಘಟನೆಗಳಿಗೆ ನಾಯಕತ್ವ ನೀಡುತ್ತಿರುವ ಅಬ್ದುರ್ರಹ್ಮಾನ್ ರಝ್ವಿ ಕಲ್ಕಟ್ಟ, ಕೆ.ಎಚ್ ಇಸ್ಮಾಯಿಲ್ ಸಅದಿ ಕಿನ್ಯ, ಇಸ್ಹಾಖ್ ಝುಹ್ರಿ ಸೂರಿಂಜೆ, ಇಸ್ಮಾಯಿಲ್ ಮಾಸ್ಟರ್ ಮಂಗಳಪದವು, ಹಸೈನಾರ್ ಆನೆಮಹಲ್, ಕೆಸಿಎಫ್ ದುಬೈ ನಾಯಕರಾದ ಇಕ್ಬಾಲ್ ಕಾಜೂರು ಮುಂತಾದ ಹಲವಾರು ಶುಭ ಹಾರೈಸಿ ಮಾತನಾಡಿದರು.

ರಾಜ್ಯ ಮಟ್ಟದ ತನಾಫುಸ್ ಸ್ಪರ್ಧೆಯಲ್ಲಿ ಕೊಡಗು ಜಿಲ್ಲೆ ಪ್ರಥಮ ಸ್ಥಾನದಲ್ಲಿದ್ದು, ದ.ಕ ವೆಸ್ಟ್ ದ್ವಿತೀಯ ಸ್ಥಾನ ಹಾಗೂ ಹಾಸನ, ತುಮಕೂರು ಮತ್ತು ಶಿವಮೊಗ್ಗ ಜಿಲ್ಲೆಗಳು ತೃತೀಯ ಸ್ಥಾನ ಪಡೆದಿದ್ದಾರೆ.

*ಕನ್ನಡ ಭಾಷಣ ಸ್ಪರ್ಧೆಯಲ್ಲಿ*
ಪ್ರಥಮ – ಆಸಿಫ್ ಹಾಸನ, ದ್ವಿತೀಯ – ಸಲಾಹುದ್ದೀನ್ – ದಕ ವೆಸ್ಟ್

*ಇಂಗ್ಲಿಷ್ ಭಾಷಣ ಸ್ಪರ್ಧೆಯಲ್ಲಿ*
ಪ್ರಥಮ – ಮುಹಮ್ಮದ್ ಶಫೀಕ್ ಕೊಡಗು, ದ್ವಿತೀಯ – ಮುಹಮ್ಮದ್ ಮು‌ಈನುದ್ದೀನ್ ದಕ ಈಸ್ಟ್

*ಉರ್ದು ಭಾಷಣ ಸ್ಪರ್ಧೆಯಲ್ಲಿ*
ಪ್ರಥಮ – ಅಬ್ದುಸ್ಸಮದ್ ತುಮಕೂರು, ದ್ವಿತೀಯ – ಸುಫಿಯಾನ್ ಕೊಡಗು

*ಡಿಬೇಟ್ ಸ್ಪರ್ಧೆಯಲ್ಲಿ*
ಪ್ರಥಮ – ಸಲಾಹುದ್ದೀನ್ ದಕ ವೆಸ್ಟ್, ದ್ವಿತೀಯ ಶರೀಫ್ ಎಂಪಿ ಕೊಡಗು

*ಮ್ಯಾಗಝೀನ್ ಸ್ಪರ್ಧೆಯಲ್ಲಿ*
ಪ್ರಥಮ – ಹಾಫಿಳ್ ಕಬೀರ್ ಶಿವಮೊಗ್ಗ, ದ್ವಿತೀಯ ಅಹ್ಮದ್ ಫಸೀಹ್ ದಕ ವೆಸ್ಟ್

*ಕ್ವಿಝ್ ಸ್ಪರ್ಧೆಯಲ್ಲಿ*
ಪ್ರಥಮ – ಮುಹಮ್ಮದ್ ಸಾಲಿಕ್ ಕೊಡಗು, ದ್ವಿತೀಯ ಮುಹಮ್ಮದ್ ಅಶ್ರಫ್ ದಕ ಈಸ್ಟ್ ಸ್ಥಾನಗಳನ್ನು ಪಡೆಯುವಲ್ಲಿ ಯಶಸ್ವಿಯಾಗಿದ್ದಾರೆ.

ಕಾರ್ಯಕ್ರಮದಲ್ಲಿ ರಾಜ್ಯ ಕೋಶಾಧಿಕಾರಿ ರವೂಫ್ ಖಾನ್ ಮೂಡ್ಗೋಪಾಡಿ, ರಾಜ್ಯ ಕಾರ್ಯದರ್ಶಿ ಹುಸೈನ್ ಸ‌ಅದಿ ಹೊಸ್ಮಾರ್, ರಾಜ್ಯ ಸಮಿತಿ ಸದಸ್ಯರಾದ ಮುನೀರ್ ಸಖಾಫಿ ಉಳ್ಳಾಲ, ಮುಬಶ್ಶಿರ್ ಅಹ್ಸನಿ ಕೊಂಡಂಗೇರಿ, ವಾಜಿದ್ ಹಾಸನ ಎನ್‌.ಸಿ ರಹೀಮ್ ಕಾರ್ಕಳ, ಹಕೀಮ್ ಬೆಂಗಳೂರು ಉಪಸ್ಥಿತರಿದ್ದರು.

ಮುಹಮ್ಮದ್ ಸಫ್ವಾನ್ ಚಿಕ್ಕಮಗಳೂರು ಕಾರ್ಯಕ್ರಮ ನಿರೂಪಿಸಿದರು, ರಾಜ್ಯ ದಅ್‌ವಾ ಕಾರ್ಯದರ್ಶಿ ಪಿಎಂಎ ಅಶ್ರಫ್ ರಝಾ ಅಂಜದಿ ಸ್ವಾಗತಿಸಿ, ರಾಜ್ಯ ಮೀಡಿಯಾ ಕಾರ್ಯದರ್ಶಿ ನವಾಝ್ ಭಟ್ಕಳ್ ವಂದಿಸಿದರು.

error: Content is protected !! Not allowed copy content from janadhvani.com