ರಿಯಾದ್: ನಾಳೆಯಿಂದ ಸೌದಿ ಅರೇಬಿಯಾ ಡಿಜಿಟಲ್ ಪಾವತಿಗಳಿಗೆ ಬದಲಾಗಲಿದೆ. ಎಲೆಕ್ಟ್ರಾನಿಕ್ ಪಾವತಿ ವ್ಯವಸ್ಥೆಯು ಎಲ್ಲಾ ಚಿಲ್ಲರೆ ಮಾರಾಟ ಮಳಿಗೆಗಳಲ್ಲಿ ನಾಳೆಯಿಂದಲೇ ಜಾರಿಗೆ ಬರಲಿದೆ. ಯೋಜನೆ ಅನುಷ್ಠಾನಕ್ಕೆ ವಿಫಲರಾದವರ ವಿರುದ್ಧ ಕ್ರಮ ಕೈಗೊಳ್ಳಲಾಗುವುದು ಎಂದು ಅಧಿಕಾರಿಗಳು ತಿಳಿಸಿದ್ದಾರೆ.
ದೇಶಾದ್ಯಂತ ಇ-ಪಾವತಿ ವ್ಯವಸ್ಥೆಗಳನ್ನು ಅನುಷ್ಠಾನ ಗೊಳಿಸುವ ಈ ಯೋಜನೆಯನ್ನು ಕಳೆದ ವರ್ಷ ಜುಲೈನಲ್ಲಿ ಪ್ರಾರಂಭಿಸಲಾಯಿತು. ನೇರ ಪಾವತಿಗಳನ್ನು ಕಡಿಮೆ ಗೊಳಿಸಲು ಮತ್ತು ಬೆನಾಮಿ ವಹಿವಾಟುಗಳನ್ನು ತೊಡೆದುಹಾಕಲು ಈ ಯೋಜನೆಯನ್ನು ಜಾರಿ ಮಾಡಲಾಗಿದೆ.
ಈ ತಿಂಗಳೊಳಗೆ ಎಲ್ಲಾ ವ್ಯವಹಾರಗಳ ಕೇಂದ್ರಗಳಲ್ಲಿ ಎಲೆಕ್ಟ್ರಾನಿಕ್ ಪಾವತಿ ವ್ಯವಸ್ಥೆಯನ್ನು ಕಡ್ಡಾಯಗೊಳಿಸುವಂತೆ ವಾಣಿಜ್ಯ ಸಚಿವಾಲಯ ಮತ್ತು ಭಯೋತ್ಪಾದನಾ-ವಿರೋಧಿ ಕಾರ್ಯಕ್ರಮವು ಘೋಷಿಸಿತ್ತು. ವಾಣಿಜ್ಯ ಮತ್ತು ಹೂಡಿಕೆ ಸಚಿವಾಲಯವು ಪುರಸಭೆಗಳು, ಗ್ರಾಮೀಣ ವ್ಯವಹಾರಗಳ ಸಚಿವಾಲಯ ಮತ್ತು ಸೌದಿ ಅರೇಬಿಯಾದ ಹಣಕಾಸು ಸಂಸ್ಥೆಯ ಸಹಯೋಗದೊಂದಿಗೆ 14 ತಿಂಗಳೊಳಗೆ ಪೂರ್ಣಗೊಳಿಸಿದ ಈ ಯೋಜನೆಯು ನಾಳೆಯಿಂದ ಜಾರಿಯಾಗಲಿದೆ.
ಇದರ ಭಾಗವಾಗಿ, ಸೌದಿ ಅರೇಬಿಯನ್ ಹಣಕಾಸು ಸಂಸ್ಥೆ ಕಳೆದ ತಿಂಗಳು ಗ್ರಾಹಕರಿಗೆ ಅನುಕೂಲವಾಗುವಂತಹ ಹಲವಾರು ನಿಯಮಗಳನ್ನು ಹೊರಡಿಸಿತ್ತು. ಎಟಿಎಂ ಕಾರ್ಡ್‌ನೊಂದಿಗೆ ಪಾವತಿಸಿದ ನಂತರ ಗ್ರಾಹಕರು ವಹಿವಾಟನ್ನು ರದ್ದುಗೊಳಿಸಿದರೆ, ಹಣವನ್ನು 24 ಗಂಟೆಗಳ ಒಳಗೆ ಖಾತೆಗೆ ಜಮಾ ಮಾಡಬೇಕು. ಕ್ರೆಡಿಟ್ ಕಾರ್ಡ್ ಮೂಲಕ ಪಾವತಿ ಮಾಡಿದರೆ, 14 ಕೆಲಸದ ದಿನಗಳಲ್ಲಿ ಮರುಪಾವತಿ ಮಾಡಬೇಕು.















ಇನ್ನಷ್ಟು ಸುದ್ದಿಗಳು
ಸಲೀಂ ಅಹ್ಮದ್ ರಿಯಾದಿನಲ್ಲಿ ನಿಧನ. ಅಂತ್ಯಕ್ರಿಯೆಗೆ ಸಹಕರಿಸಿದ ಕೆಸಿಎಫ್ ರಿಯಾದ್
ಸೌದಿ ಅರೇಬಿಯಾ ವಿರುದ್ಧ ಹೌತಿಗಳ ದಾಳಿ; 73 ನಾಗರಿಕರಿಗೆ ಗಾಯ
ಹಾರ್ಮುಜ್ ತೆರೆಯುವುದಕ್ಕೆ ಆದ್ಯತೆ; ಬಿಕ್ಕಟ್ಟು ಮುಂದುವರಿದರೆ ಕೈಗಾರಿಕಾ ದುರಂತ- ಕತಾರ್
ಸೌದಿಯ ವೈಮಾನಿಕ ದಾಳಿ ಇರಾಕಿ ಜನತೆ ಅಥವಾ ಸರ್ಕಾರದ ವಿರುದ್ಧವಲ್ಲ- ಸೌದಿ ಅರೇಬಿಯಾ
ಇಸ್ರೇಲಿ ಉತ್ಪನ್ನಗಳ ಆಮದು ನಿಷೇಧ: ಐರ್ಲೆಂಡ್ ಕ್ರಮವನ್ನು ಸ್ವಾಗತಿಸಿದ ಕತಾರ್
ಪ್ರಾದೇಶಿಕ ಮಟ್ಟದಲ್ಲಿ ಅನಿಶ್ಚಿತತೆ: ಮೂರು ಗಲ್ಫ್ ದೇಶಗಳಿಗೆ ವಿಮಾನ ಸೇವೆ ಸ್ಥಗಿತ
ಅನಿವಾಸಿ ಭಾರತೀಯರ ಪಾಸ್ಪೋರ್ಟ್ ಶುಲ್ಕ ಹೆಚ್ಚಳ: ಮೂರು ವಾರಗಳಲ್ಲಿ ನಿರ್ಧಾರ ತಿಳಿಸುವಂತೆ ಕೇಂದ್ರಕ್ಕೆ ಕೋರ್ಟ್ ನಿರ್ದೇಶನ
ಹೋರ್ಮುಜ್ ಮೂಲಕ ಸುರಕ್ಷಿತ ಸಾರಿಗೆ- ಪ್ರಮುಖ ಚರ್ಚೆಗಾಗಿ ಇರಾನ್ಗೆ ತಲುಪಿದ ಒಮಾನ್ ನಿಯೋಗ
ಉಮ್ರಾ ಯಾತ್ರಿಕರಿಗೆ ಸಿಹಿ ಸುದ್ದಿ: ಒಂದು ವರ್ಷ ಕಾಲಾವಧಿಯ ‘ಮಲ್ಟಿ ಎಂಟ್ರಿ’ ಉಮ್ರಾ ವೀಸಾ ಬಿಡುಗಡೆ
ಭಾರತದ ವಿಮಾನ ಪ್ರಯಾಣಿಕರಿಗೆ ಸಿಹಿ ಸುದ್ದಿ: ಟಿಕೆಟ್ ದರಕ್ಕೆ ಮಾಸಿಕ ಕಂತಿನ ಸೌಲಭ್ಯ