janadhvani

Kannada Online News Paper

ಶಿಕ್ಷಣ ತಜ್ಞ, ಸಮುದಾಯದ ಆಸ್ತಿ ಅಂತರಾಷ್ಟ್ರೀಯ ಮಟ್ಟದಲ್ಲಿ ಕೀರ್ತಿ ತಂದ ಬಿ ಅಹ್ಮದ್ ಹಾಜಿಯವರ ಮರಣ ತುಂಬಲಾರದ ನಷ್ಟ : ಅಲ್ ಮದೀನಾ ರಾಷ್ಟ್ರೀಯ ಸಮಿತಿ

ಕೇವಲ 12 ಮಕ್ಕಳಿಂದ ಆರಂಬಿಸಿದ ತುಂಬೆ ಕಾಲೇಜು ಇವತ್ತು 1500 ಮಿಕ್ಕ ವಿಧ್ಯಾರ್ಥಿಗಳು ಕಲಿಯುವ ಮೂಲಕ ಶಿಕ್ಷಣಕ್ಕೆ ಅವರು ನೀಡಿದ ಸೇವೆ ಮೂಲಕ ಪ್ರತಿಬಾನ್ವಿತ ವಿಧ್ಯಾರ್ಥಿಗಳಲ್ಲಿ ಶಿಸ್ತನ್ನು ಮೂಡಿಸಿ ರಾಜ್ಯದಲ್ಲಿಯೇ ಉತ್ತಮ ಫಲಿಂತಾಶ ನೀಡುವ ಮೂಲಕ ಸಂಸ್ಥೆಯ ಕೀರ್ತಿಯನ್ನು ಬ್ಯಾರಿ ಜನಾಂಗಕ್ಕೆ ಗೌರವ ತಂದು ಕೊಟ್ಟು ಅಗಲಿದ ತುಂಬೆ ಸುಲ್ತಾನ್ ಸಮಾಜದ ನಾಯಕರಿಗೆ ಮಾದರಿಯಾದರು ಬಂಟ್ವಾಳ ತಾಲ್ಲೂಕಿನ ಒಂದು ಸಣ್ಣ ಗ್ರಾಮವು ಇಂದು ಅಂತರ್ರಾಷ್ಟ್ರೀಯ ಮಟ್ಟದಲ್ಲಿ ಗುರುತಿಸಲ್ಪಡುವಂತಾಗಲು ಕಾರಣಕರ್ತರಾದರು ಬಿ ಅಹ್ಮದ್ ಮೊಯಿದಿನ್ ಹಾಜಿ ಮತ್ತು ಕೃತಿಯಲ್ಲಿ ತೋರಿಸಿ ಕೊಟ್ಟು ಸಮಾಜದಲ್ಲಿ ಶೈಕ್ಷಣಿಕ ಕ್ರಾಂತಿಗೆ ಮುನ್ನುಡಿ ಬರೆದರು..ಹಿಂದೂ ಮುಸ್ಲಿಮರ ಮದ್ಯೆ ಸೌಹಾರ್ಧತೆಯ ಹರಿಕಾರರಾದರು.

ಆದ ಕಾರಣದಿಂದಲೇ ಸಮಾಜದ ಎಲ್ಲಾ ಸ್ತರದಲ್ಲಿರುವವರೂ ಅವರನ್ನು ಗೌರವಿಸಿದರು.ಹಲವು ಪ್ರಶಸ್ತಿಗಳು ಅವರನ್ನು ಹುಡುಕಿ ಬಂದವು.ಚಿಕ್ಕ ಮಕ್ಕಳಿಂದ ಹಿಡಿದು ಹಿರಿಯ ವಿದ್ವಾಂಸರ ತನಕ ಎಲ್ಲರನ್ನೂ ಗೌರವಿಸಿದ ಕಾರಣ ಅಹ್ಮದ್ ಹಾಜಿಯವರನ್ನೂ ಎಲ್ಲರೂ ಇಂದು ಗೌರವದ ಕಣ್ಣಿಂದ ನೋಡುವಂತಾಯಿತು. ಪರಮ ಕಾರುಣ್ಯನಾದ ಅಲ್ಲಾಹನು ಪಾಪಗಳನ್ನು ಮನ್ನಿಸಿ ಅವರ ಪಾರತ್ರಿಕ ಜೀವನ ಸುಖಮಯ ಗೊಳಿಸಿ ಸ್ವರ್ಗದಲ್ಲಿ. ಒಟ್ಟು ಸೇರಿಸಲಿ ಎಂದು ಪ್ರಾರ್ಥಿಸುತ್ತಾ ಅವರ ಹೆಸರಿನಲ್ಲಿ ಮಯ್ಯಿತ್ ನಮಾಝ್ ಮತ್ತು ದುವಾ ನಿರ್ವಹಿಸಲು ಅಲ್ ಮದೀನಾ ಮಂಜನಾಡಿ ಸೌದಿ ರಾಷ್ಟ್ರೀಯ ಸಮಿತಿ ಅಧ್ಯಕ್ಷ ಹಾಜಿ NS ಅಬ್ದುಲ್ಲಾ ಪ್ರ ಕಾರ್ಯದರ್ಶಿ MG ಇಕ್ಬಾಲ್ ಮಲ್ಲೂರು, ಕೋಶಾಧಿಕಾರಿ ಇಕ್ಬಾಲ್ ಮದನಿ ತಾಯಿಫ್ ವಿನಂತಿಸಿದ್ದಾರೆ.

error: Content is protected !! Not allowed copy content from janadhvani.com