janadhvani

Kannada Online News Paper

ತುರ್ಕಳಿಕೆಯಲ್ಲಿ ಸ್ವಾತಂತ್ರ್ಯ ದಿನಾಚರಣೆ

ಬೆಳ್ತಂಗಡಿ: ಮಿಫ್ತಾಉಲ್ ಉಲೂಂ ಮದ್ರಸ ತುರ್ಕಳಿಕೆಯಲ್ಲಿ ಆ.15ರಂದು 74ನೇ ಸ್ವಾತಂತ್ರ್ಯ ದಿನಾಚರಣೆಯನ್ನು ಆಚರಿಸಲಾಯಿತು.

ಬದ್ರಿಯಾ ಜುಮಾ ಮಸೀದಿ ತುರ್ಕಳಿಕೆಯ ಖತೀಬರಾದ ಅಝೀಝ್ ಬಾಖವಿ ಧ್ವಜಾರೋಹಣ ನೆರವೇರಿಸಿ ಶುಭ ಹಾರೈಸಿದರು.ಎಸ್ಸೆಸ್ಸೆಫ್ ದ.ಕ ಜಿಲ್ಲಾ ಕೋಶಾಧಿಕಾರಿ ಮುಹಮ್ಮದ್ ಅಲಿ ಸಂದೇಶ ಭಾಷಣ ಮಾಡಿದರು.

ಕಾರ್ಯಕ್ರಮದಲ್ಲಿ ಸ್ಥಳೀಯ ಜಮಾಅತ್ ಮಾಜಿ ಅಧ್ಯಕ್ಷ ಅಬ್ಬಾಸ್, ಮಾಜಿ ಕಾರ್ಯದರ್ಶಿ ಅಬೂಬಕರ್, ಕೋಶಾಧಿಕಾರಿ ಮುಹಮ್ಮದ್ ಮದನಿ, ಎಸ್ಸೆಸ್ಸೆಫ್ ಉಪ್ಪಿನಂಗಡಿ ಕ್ಯಾಂಪಸ್ ಕಾರ್ಯದರ್ಶಿ ಜುನೈದ್.ಕೆ ಹಾಗೂ ಮತ್ತಿತರು ಉಪಸ್ಥಿತರಿದ್ದರು. ಫಿರೋಝ್ ಸಅದಿ ಕಾರ್ಯಕ್ರಮ ಸ್ವಾಗತಿಸಿ ವಂದಿಸಿದರು.