janadhvani

Kannada Online News Paper

ಬಾಬರೀ ಮಸ್ಜಿದ್ ಕೆಡವಲ್ಪಟ್ಟ ಸ್ಥಳದಲ್ಲಿ ಮಂದಿರ- ನರೇಂದ್ರ ಮೋದಿಯಿಂದ ಶಿಲಾನ್ಯಾಸ

ಅಯೋಧ್ಯೆ ,ಜು.5: ಐತಿಹಾಸಿಕ ಬಾಬರೀ ಮಸೀದಿಯನ್ನು ಕೆಡವಿದ ಅಯೋಧ್ಯೆಯಲ್ಲಿ ರಾಮ ಮಂದಿರ ನಿರ್ಮಾಣಕ್ಕೆ ಸುಪ್ರೀಂ ಕೋರ್ಟ್ ಹಸಿರು ನಿಶಾನೆ ತೋರಿ ತೀರ್ಪು ನೀಡಿದ ಹಿನ್ನೆಲೆಯಲ್ಲಿ, ನರೇಂದ್ರ ಮೋದಿ ಅವರು ಇಂದು ಅಯೋಧ್ಯೆಗೆ ತೆರಳಿ, ರಾಮ ಮಂದಿರ ನಿರ್ಮಾಣ ಮಾಡಲು ಶಿಲಾನ್ಯಸ ನೆರವೇರಿಸಿದ್ದಾರೆ. ಅನೇಕ ಸಾಧು-ಸಂತರು, ಗಣ್ಯರು ಈ ಕ್ಷಣಕ್ಕೆ ಸಾಕ್ಷಿಯಾದರು.

ಬೆಳಗ್ಗೆ 10:30ಕ್ಕೆ ಲಖನೌ ವಿಮಾನ ನಿಲ್ದಾಣಕ್ಕೆ ಮೋದಿ ಆಗಮಿಸಿದರು. ಮೋದಿಯನ್ನು ಸ್ವಾಗತಿಸಲು ಆಗಮಿಸಿದ್ದ ಹಿರಿಯ ನಾಯಕರು ಜೈ ಶ್ರೀರಾಮ್​ ಎನ್ನುವ ಘೋಷಣೆ ಕೂಗಿದರು. ನಂತರ ಹೆಲಿಕಾಪ್ಟರ್​ ಮೂಲಕ ಪ್ರಧಾನಿ ಮೋದಿ ಅಯೋಧ್ಯೆಯ ಸಾಕೇತ್​ ಕಾಲನಿಗೆ ತೆರಳಿದರು. ಅಯೋಧ್ಯೆಗೆ ಕಾಲಿಡುತ್ತಿದ್ದಂತೆ ಜೈ ಶ್ರೀರಾಮ್​ ಎನ್ನುವ ಘೋಷಣೆಗಳು ಮೊಳಗಿದವು.

ಮೊದಲಿಗೆ ಹನುಮಾನ್ ಗುಡಿಗೆ ಮೋದಿ ಭೇಟಿ ನೀಡಿದರು. ನಂತರ ಹನುಮಾನ್ ಗುಡಿಯಲ್ಲಿ ಪೂಜೆ ಸಲ್ಲಿಸಿದ ಬಳಿಕ ಶಿಲಾನ್ಯಾಸ ನಡೆಯುವ ಜಾಗದತ್ತ ಮೋದಿ ಪ್ರಯಾಣ ಬೆಳೆಸಿದರು. 12:30 ಭೂಮಿ ಪೂಜೆ ಕಾರ್ಯಕ್ರಮ ಆರಂಭಗೊಂಡಿತು. 12:40ಕ್ಕೆ ಮೋದಿ ಅಡಿಗಲ್ಲು ಹಾಕಿದರು.

ರಾಮ ಮಂದಿರ ನಿರ್ಮಾಣಕ್ಕಾಗಿ ಹೋರಾಡಿದವರಲ್ಲಿ ಪ್ರಮುಖರಾದ ಎಲ್​.ಕೆ ಅಡ್ವಾಣಿ,ಮುರಳಿ ಮನೋಹರ್ ಜೋಶಿ ಅವರಿಗೆ ಕಾರ್ಯಕ್ರಮಕ್ಕೆ ಆಗಮಿಸಲು ಕೊರೋನಾ ಅಡ್ಡಿಯಾಯ್ತು. ಆನ್​ಲೈನ್​ನಲ್ಲೇ ರಾಮಮಂದಿರದ ಅಡಿಗಲ್ಲು ಕಾರ್ಯಕ್ರಮ ಕಣ್ತುಂಬಿಕೊಂಡರು.

error: Content is protected !! Not allowed copy content from janadhvani.com