janadhvani

Kannada Online News Paper

ಪುತ್ತೂರು : SჄS, SSF ತುರ್ತು ಸೇವಾ ತಂಡವು ಪುತ್ತೂರಿನ ತಹಶೀಲ್ದಾರ್ ರಮೇಶ್ ಬಾಬು ಹಾಗೂ ಸರ್ಕಲ್ ಇನ್ಸ್ ಪೆಕ್ಟರ್ ತಿಮ್ಮಪ್ಪ ನಾಯ್ಕ್ ರವರನ್ನು ಭೇಟಿಯಾಗಿ ಲಾಕ್ ಡೌನ್ ಸಂದರ್ಭದಲ್ಲಿ ತುರ್ತು ಸೇವಾ ತಂಡ ನಡೆಸಿದ ಕಾರ್ಯಾಚರಣೆಯ ಕುರಿತು ತಿಳಿಸಿಕೊಡಲಾಯಿತು.

ತುರ್ತು ಸೇವಾ ತಂಡದ ಕಾರ್ಯಾಚರಣೆಯ ಕುರಿತು ಶ್ಲಾಘಿಸಿದ ಅವರು ಮುಂದಿನ ಕಾರ್ಯಾಚರಣೆಗೆ ಇಲಾಖೆ ವತಿಯಿಂದ ಆಗುವ ಸಹಕಾರಗಳನ್ನು ನೀಡುವ ಭರವಸೆ ನೀಡಿದರು.

ಈ ಸಂದರ್ಭದಲ್ಲಿ ಪುತ್ತೂರು SჄS ಸೆಂಟರ್ ಅಧ್ಯಕ್ಷ ಅಬ್ದುಲ್ ರಝಾಕ್ ಖಾಸಿಮಿ ಕೂರ್ನಡ್ಕ, ಪುತ್ತೂರು ಡಿವಿಶನ್ ಎಸ್ಸೆಸ್ಸಫ್ ಅಧ್ಯಕ್ಷ ಝುಬೈರ್ ಸಖಾಫಿ ಗಟ್ಟಮನೆ, SSF ರಾಜ್ಯ ಸಮಿತಿ ಸದಸ್ಯ ಅಡ್ವಕೇಟ್ ಶಾಕಿರ್ ಹಾಜಿ ಮಿತ್ತೂರು, SSF ಜಿಲ್ಲಾ ಸಮಿತಿ ಸದಸ್ಯ ಅಬ್ದುಲ್ ರಝಾಕ್ ಸ‌ಅದಿ, SჄS ಪ್ರಧಾನ ಕಾರ್ಯದರ್ಶಿ ಸ್ವಾಲಿಹ್ ಮುರ, SYS ಟೀಂ ಇಸಾಬ ಈಶ್ವರ ಮಂಗಳ ಅಮೀರ್ KH ಇಸ್ಮಾಯಿಲ್, SSF ಪುತ್ತೂರು ಡಿವಿಶನ್ ಉಪಾಧ್ಯಕ್ಷ ಹಮೀದ್ ಸಖಾಫಿ ಪಾಣಾಜೆ, ಪ್ರಧಾನ ಕಾರ್ಯದರ್ಶಿ ಇಮ್ರಾನ್ ರೆಂಜಲಾಡಿ, ಕ್ಯಾಂಪಸ್ ಕಾರ್ಯದರ್ಶಿ ಶಿಹಾಬ್ ರಹ್ಮಾನ್ ಹಸನ್ ನಗರ, ಬ್ಲಡ್ ಸೈಬೋ ಉಸ್ತುವಾರಿ ಹಾರಿಸ್ ಅಡ್ಕ,SYS ಪುತ್ತೂರು ಸೆಂಟರ್ ಸದಸ್ಯ ಅಝೀಝ್ ಕೆಮ್ಮಾಯಿ ಉಪಸ್ಥಿತರಿದ್ದರು.

error: Content is protected !!
%d bloggers like this: