janadhvani

Kannada Online News Paper

ಎಸ್ಸೆಸ್ಸೆಫ್ ಕರ್ನಾಟಕ ರಾಜ್ಯ ಸಮಿತಿಯು ಜಿಲ್ಲಾ ಹಾಗೂ ಝೋನ್ ಕಾರ್ಯಕಾರಿ ಸದಸ್ಯರಿಗೆ ನಡೆಸಿದ ಮೊದಲ ಹಂತದ ಡೀನ್ ತರಬೇತಿ ಕಾರ್ಯಾಗಾರದ ಸಮಾರೋಪ ಸಮಾರಂಭ ಎಸ್ಸೆಸ್ಸೆಫ್ ರಾಜ್ಯಾಧ್ಯಕ್ಷ ಸಯ್ಯಿದ್ ಉಮ್ಮರ್ ಅಸ್ಸಖಾಫ್ ತಂಙಳ್ ರವರ ಅಧ್ಯಕ್ಷತೆಯಲ್ಲಿ ಜುಲೈ 26 ಆದಿತ್ಯವಾರ ಬೆಳಿಗ್ಗೆ 11:00 ಗಂಟೆಗೆ ಆನ್ಲೈನ್ ನಲ್ಲಿ ನಡೆಯಲಿದೆ.

ಕರ್ನಾಟಕ ರಾಜ್ಯ ವಕ್ಫ್ ಸದಸ್ಯ ಶಾಫಿ ಸಅದಿ ಬೆಂಳೂರು ಕಾರ್ಯಾಗಾರವನ್ನು ಉದ್ಘಾಟಿಸಲಿದ್ದಾರೆ.

ಖ್ಯಾತ ತರಬೇತುದಾರ ಕೂಟಂಬಾರ ಅಬ್ದುರ್ರಹ್ಮಾನ್ ದಾರಿಮಿ ತರಬೇತಿಯನ್ನು ನೀಡಲಿದ್ದಾರೆ.

ಎಸ್ಸೆಸ್ಸೆಫ್ ಕರ್ನಾಟಕ ರಾಜ್ಯ ಮಾಜಿ ಪ್ರಧಾನ ಕಾರ್ಯದರ್ಶಿ ಹಮೀದ್ ಬಜ್ಪೆ ಹಾಗೂ ಎಸ್ಸೆಸ್ಸೆಫ್ ರಾಜ್ಯ ನಾಯಕರು ಭಾಗವಹಿಸಲಿದ್ದಾರೆ.

ಡೀನ್ ಎರಡನೇ ಹಂತದ ತರಬೇತಿ ಕಾರ್ಯಾಗಾರ ಆಗಸ್ಟ್ 4 ರಿಂದ 15 ರ ತನಕ ನಡೆಯಲಿದೆ ಎಂದು ಎಸ್ಸೆಸ್ಸೆಫ್ ರಾಜ್ಯ ಕಾರ್ಯದರ್ಶಿ ಕೆ.ಎಂ ಮುಸ್ತಫಾ ನಈಮಿ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

error: Content is protected !!
%d bloggers like this: