ಮಸ್ಕತ್: ಕರ್ನಾಟಕ ಕಲ್ಚರಲ್ ಫೌಂಡೇಷನ್ (KCF) ಒಮಾನ್ ಆಯೋಜಿದ ಚಾರ್ಟರ್ಡ್ ವಿಮಾನ ಇಂದು ಮಂಗಳೂರಿಗೆ ಪ್ರಯಾಣ ಹೊರಡಲಿದೆ.
ಇಂಡಿಯನ್ ಎಂಬಸ್ಸಿಯಲ್ಲಿ ರಿಜಿಸ್ಟ್ರೇಷನ್ ಮಾಡಿದ, ಸಂಕಷ್ಟ ಎದುರಿಸುತ್ತಿರುವಂತಹ ಗರ್ಭಿಣಿಯರು, ವಯಸ್ಕರು, ತುರ್ತು ಚಿಕಿತ್ಸೆ ಅಗತ್ಯವಿರುವವರು, ಕೆಲಸ ಕಳೆದುಕೊಂಡವರು, ವೀಸಾ ಕಾಲಾವಧಿ ಮುಗಿದವರು ಮುಂತಾದ ಅನಿವಾಸಿ ಕನ್ನಡಿಗರಾದ 180 ಪ್ರಯಾಣಿಕರನ್ನು ಹೊತ್ತು ಜುಲೈ 24 ರಂದು ಕೆಸಿಎಫ್ ಒಮಾನ್ ಪ್ರಾಯೋಜಕತ್ವದ ಚಾರ್ಟರ್ಡ್ ವಿಮಾನವು ಮಸ್ಕತ್ ಅಂತರಾಷ್ಟ್ರೀಯ ವಿಮಾನ ನಿಲ್ದಾನದಿಂದ ಹೊರಡಲಿದೆ.