janadhvani

Kannada Online News Paper

ಸಂದರ್ಶಕ ವಿಸಾ ಮುಕ್ತಾಯಗೊಂಡವರಿಗೆ ಆ. 11ರ ಬಳಿಕ 1 ತಿಂಗಳ ವಿನಾಯ್ತಿ

ಅಬುಧಾಬಿ: ಯುಎಇಯಲ್ಲಿ ಮಾರ್ಚ್ 1 ರ ನಂತರ ಅವಧಿ ಮುಗಿದಿರುವ ಸಂದರ್ಶಕ ವೀಸಾ ಮತ್ತು ಪ್ರವಾಸಿ ವೀಸಾ ಹೊಂದಿರುವವರು ಆಗಸ್ಟ್ 11 ರೊಳಗೆ ದೇಶ ಬಿಡುವ ಅಥವಾ ವಿಸಾ ನವೀಕರಿಸುವ ಬಗ್ಗೆ ಹೆಚ್ಚಿನ ಸಡಿಲಿಕೆ ನೀಡಲಾಗಿದೆ.

ಫೆಡರಲ್ ಅಥಾರಿಟಿ ಫಾರ್ ಐಡೆಂಟಿಟಿ ಅಂಡ್ ಸಿಟಿಜನ್ಶಿಪ್ (ಐಸಿಎ) ಆಗಸ್ಟ್ 11 ರಿಂದ ದೇಶದಲ್ಲಿ ಉಳಿಯಲು 30 ದಿನಗಳ ಗ್ರೇಸ್ ಅವಧಿಯನ್ನು ಒದಗಿಸುತ್ತದೆ. ಅಂತಹ ಗ್ರೇಸ್ ಅವಧಿಯನ್ನು ಒಮ್ಮೆ ಮಾತ್ರ ಅನುಮತಿಸುವುದಾಗಿ ಐಸಿಎ ಹೇಳಿದೆ.

ಈ ಅವಧಿಯಲ್ಲಿ ವೀಸಾವನ್ನು ನವೀಕರಿಸಲು ಅಥವಾ ನಿವಾಸ ವಿಸಾಕೆ ಬದಲಾಯಿಸಲು ವಿಫಲವಾದರೆ 30 ದಿನಗಳಲ್ಲಿ ದೇಶದಿಂದ ಹೊರಡಬೇಕು. ಇಲ್ಲದಿದ್ದರೆ ದಂಡ ವಿಧಿಸಲಾಗುತ್ತದೆ.

ವೀಸಾ ಮತ್ತು ಗುರುತಿನ ಚೀಟಿ ಸೇವೆಗಳನ್ನು ಪ್ರಾಧಿಕಾರವು ಈಗಾಗಲೇ ಪುನರಾರಂಭಗೊಳಿಸಿದೆ. ಮಾರ್ಚ್ 1 ರ ನಂತರ ನಿವಾಸ ವೀಸಾ ಅವಧಿ ಮುಗಿದವರಿಗೆ, ಜುಲೈ 12 ರಿಂದ ಮೂರು ತಿಂಗಳೊಳಗೆ ಅದನ್ನು ನವೀಕರಿಸಬೇಕಾಗುತ್ತದೆ.

ಈ ಮೊದಲು, ಕೋವಿಡ್ ಹಿನ್ನೆಲೆಯಲ್ಲಿ ನಿವಾಸ ವೀಸಾಗಳು ಮತ್ತು ಸಂದರ್ಶಕರ ವೀಸಾಗಳ ಗಡುವನ್ನು ಡಿಸೆಂಬರ್ 31 ಕ್ಕೆ ವಿಸ್ತರಿಸಲಾಗಿತ್ತು. ಆದಾಗ್ಯೂ, ದೇಶವು ಕೋವಿಡ್ ಸವಾಲನ್ನು ಯಶಸ್ವಿಯಾಗಿ ಜಯಿಸಿ ಜನ ಜೀವನ ಮತ್ತು ಅಧಿಕೃತ ಚಟುವಟಿಕೆಗಳು ಸಾಮಾನ್ಯ ಸ್ಥಿತಿಗೆ ಬಂದಿರುವುದರಿಂದ ಈ ಕ್ರಮವನ್ನು ರದ್ದುಗೊಳಿಸಲು ಕ್ಯಾಬಿನೆಟ್ ನಿರ್ಧರಿಸಿತು.

error: Content is protected !! Not allowed copy content from janadhvani.com