janadhvani

Kannada Online News Paper

ಸುಳ್ಯ ಜಾನುವಾರು ಸಾಗಾಟ ಪ್ರಕರಣ: ಗೂಂಡಾಗಿರಿ ವಿರುದ್ದ ಕೇಸ್ ದಾಖಲಿಸಲು ಆಗ್ರಹ

ಸುಳ್ಯ: ಕನಕಮಜಲಿನಿಂದ ಜಾನುವಾರುಗಳನ್ನು ಸಾಗಿಸಿಕೊಂಡು ಹೋಗುತ್ತಿದ್ದ ಪಿಕಪ್ ವಾಹನವನ್ನು ಕರ್ತವ್ಯದಲ್ಲಿದ್ದ ಪೋಲಿಸರು ಸುಳ್ಯದಲ್ಲಿ ನಿಲ್ಲಿಸಲು ಸೂಚಿಸಿದಾಗ ಕಾನೂನು ಬಾಹಿರ ವಾಗಿ ಕರ್ತವ್ಯಕ್ಕೆ ಅಡ್ಡಿಪಡಿಸಿ ಪರಾರಿಯಾದ ಸಂದರ್ಭದಲ್ಲಿ ಪೋಲಿಸರು ಕೈಗೊಳ್ಳಬೇಕಾದ ಕಾನೂನು ಕ್ರಮಕ್ಕೆ ವಿರುದ್ಧವಾಗಿ ಸಂಘಪರಿವಾರದ ಗೂಂಡಾಗಳು ವಾಹನವನ್ನು ಹಿಂಬಾಲಿಸಿ ತಡೆದು ನಿಲ್ಲಿಸಿ ವಾಹನವನ್ನು ಪುಡಿಗಟ್ಟಿ ಗೂಂಡಾಗಿರಿ ನಡೆಸಿದ ಕ್ರಮವನ್ನು ಒಪ್ಪಲು ಸಾಧ್ಯವಿಲ್ಲ. ಇದನ್ನು ಸೋಷಿಯಲ್ ಡೆಮಾಕ್ರಟಿಕ್ ಪಾರ್ಟಿ ಆಫ್ ಇಂಡಿಯಾ ತೀವ್ರ ವಾಗಿ ಖಂಡಿಸುತ್ತದೆ.

ಜಾನುವಾರು ಸಾಗಾಟ ಅಕ್ರಮವಾಗಿದ್ದರೆ ಕಾನೂನು ಕ್ರಮ ಕೈಗೊಳ್ಳುವುದು ಪೋಲಿಸ್ ಇಲಾಖೆಯ ಜವಾಬ್ದಾರಿ ಯಾಗಿರುತ್ತದೆ.ಈ ಕೆಲಸವನ್ನು ಪೋಲಿಸರ ಸಮ್ಮುಖದಲ್ಲೇ ಅತಿರೇಕವಾಗಿ ವರ್ತಿಸಿ ಗೂಂಡಾಗಿರಿ ನಡೆಸಿರುವುದು ಪೋಲಿಸ್ ಇಲಾಖೆಗೆ ಕಪ್ಪು ಚುಕ್ಕೆಯಾಗಿದೆ.

ಸಂಘಪರಿವಾರದ ಇಂತಹ ಗೂಂಡಾಗಿರಿ ಪ್ರಕರಣಗಳು ತಾಲ್ಲೂಕಿನಲ್ಲಿ ಮರುಕಳಿಸುತ್ತಿದೆ.
ಹಾಗಾಗಿ ಭಜರಂಗದಳದ ಕಾರ್ಯಕರ್ತರ ಮೇಲೆ ಕ್ರಿಮಿನಲ್ ಮೊಕದ್ದಮೆ ದಾಖಲಿಸಬೇಕು. ಇಲ್ಲದಿದ್ದರೆ ಮುಂದಿನ ದಿನಗಳಲ್ಲಿ ಇದು ಸಮಾಜದ ಸ್ವಾಸ್ಥ್ಯವನ್ನು ಕೆಡಿಸಲು ದಾರಿ ಮಾಡಿಕೊಟ್ಟಂತಾಗುತ್ತದೆ.

ಅದೇ ರೀತಿಯಲ್ಲಿ ವಾಹನವನ್ನು ನಿಲ್ಲಿಸಲು ಸೂಚಿಸಿದಾಗ ಪೋಲಿಸರ ಕರ್ತವ್ಯಕ್ಕೆ ಬೆಲೆ ನೀಡದೆ ಪರಾರಿಯಾಗಲು ಯತ್ನಿಸಿದವರ ಮೇಲೂ ಸೂಕ್ತ ಕಾನೂನು ಕ್ರಮ ಜರುಗಿಸಬೇಕೆಂದು ಸೋಷಿಯಲ್ ಡೆಮಾಕ್ರಟಿಕ್ ಆಫ್ ಇಂಡಿಯಾ ಸುಳ್ಯ ವಿಧಾನ ಸಭಾ ಕ್ಷೇತ್ರದ ಅಧ್ಯಕ್ಷ ಅಬ್ದುಲ್ ಕಲಾಂ ಸುಳ್ಯ ಪ್ರಕಟಣೆಯಲ್ಲಿ ಆಗ್ರಹಿಸಿದ್ದಾರೆ.