janadhvani

Kannada Online News Paper

ಪಿಯುಸಿ ಫಲಿತಾಂಶ: ವಿಶಿಷ್ಟ ಶ್ರೇಣಿಯಲ್ಲಿ ತೇರ್ಗಡೆಯಾದ ಸುಳ್ಯದ ತಸ್ರೀಫ

ಸುಳ್ಯ: ದ್ವಿತೀಯ ಪಿಯುಸಿ ಪರೀಕ್ಷೆಯಲ್ಲಿ 535 ಅಂಕಗಳೊಂದಿಗೆ ವಿಶಿಷ್ಟ ಶ್ರೇಣಿಯಲ್ಲಿ ತೇರ್ಗಡೆಯಾಗಿದ್ದಾರೆ ಸುಳ್ಯ ತಾಲೂಕು ಮುರುಳ್ಯ ಗ್ರಾಮದ ತಸ್ರೀಫ.

ಸವಣೂರು ವಿದ್ಯಾರಶ್ಮಿ ವಿದ್ಯಾಲಯ ಕಾಲೇಜ್ ನ ದ್ವಿತೀಯ ಪಿಯುಸಿ ವಿದ್ಯಾರ್ಥಿನಿ ತಸ್ರೀಫ 535 ಅಂಕಗಳೊಂದಿಗೆ ವಿಶಿಷ್ಟ ಶ್ರೇಣಿಯಲ್ಲಿ ತೇರ್ಗಡೆ ಯಾಗಿದ್ದು, ವ್ಯವಹಾರ ಅಧ್ಯಯನದಲ್ಲಿ 100,ಎಕೌಂಟೆನ್ಸ್ ನಲ್ಲಿ 97, ಎಕಾನಮಿಕ್ಸ್ ನಲ್ಲಿ 96,ಸ್ಟಾಟಿಸ್ಟಿಕ್ಸ್ ಲ್ಲಿ 92 ಅಂಕಗಳನ್ನು ಪಡೆದಿರುತ್ತಾರೆ.

ಇವರು ಮುರುಳ್ಯ ಗ್ರಾಮದ ರಾಗಿಪೇಟೆ ಉಮ್ಮರ್ ಮತ್ತು ಮೈಮುನಾ ದಂಪತಿಗಳ ಪುತ್ರಿ.