janadhvani

Kannada Online News Paper

ನಟೋರಿಯಸ್ ರೌಡಿ, ಗ್ಯಾಂಗ್ಸ್ಟರ್, ಭಯೋತ್ಪಾದಕ ವಿಕಾಸ್ ದುಬೆ ಪೊಲೀಸ್ ವಶಕ್ಕೆ

ಮಧ್ಯಪ್ರದೇಶ (ಜನಧ್ವನಿ ವಾರ್ತೆ): ನಟೋರಿಯಸ್ ಗ್ಯಾಂಗ್ಸ್ಟರ್ ಮತ್ತು ಭಯೋತ್ಪಾದಕ ವಿಕಾಸ್ ದುಬೆ ಕೊನೆಗೂ ಪೊಲೀಸರಿಗೆ ಸೆರೆ ಸಿಕ್ಕಿದ್ದು ಆತನನ್ನು ಮಧ್ಯಪ್ರದೇಶದ ಉಜ್ಜಯಿನಿ ಯಿಂದ ಪೊಲೀಸರು ಸೆರೆ ಹಿಡಿದಿದ್ದಾರೆ. ಈತ ಇತ್ತೀಚೆಗೆ 8 ಮಂದಿ ಪೊಲೀಸರನ್ನು ಶೂಟ್ ಮಾಡಿ ಕೊಲ್ಲುವ ಮೂಲಕ ರಾಕ್ಷಸೀಯ ಕೃತ್ಯಕ್ಕೆ ಕಾರಣನಾಗಿದ್ದ.

ಈತನನ್ನು ಬಂಧಿಸುವ ಸಲುವಾಗಿ ಹೋರಾಟ ಯು ಪಿ ಪೊಲೀಸರನ್ನು ಕೊಂದು ಹಾಕುವ ಮೂಲಕ ದೇಶದಾದ್ಯಂತ ಮಾಧ್ಯಮಗಳಲ್ಲಿ ಸುದ್ದಿಯಾಗಿದ್ದನು, ತನ್ಮಧ್ಯೆ ಈತನಿಗೆ ಪೊಲೀಸ್ ಇಲಾಖೆಯಿಂದಲೇ ಮಾಹಿತಿ ಸೋರಿಕೆಯಾಗಿದ್ದು ಈ ಸಂಭಂದ ಇಬ್ಬರು ಪೊಲೀಸರನ್ನು ವಜಾ ಗೊಳಿಸಲಾಗಿತ್ತು. ವಿಕಾಸ್ ದುಬೆಯನ್ನು ರಕ್ಷಿಸಲು ತೆರೆಮರೆಯಲ್ಲಿ ಹಲವು ಪ್ರಯತ್ನಗಳೂ ನಡೆದಿದ್ದವು.

error: Content is protected !! Not allowed copy content from janadhvani.com