janadhvani

Kannada Online News Paper

ಚಿಕಮಗಳೂರು: ಕರ್ನಾಟಕ ಮುಸ್ಲಿಂ ಜಮಾತ್ ಜಿಲ್ಲಾ ಸಮಿತಿಯ ಅಧ್ಯಕ್ಷರಾದ ಹಾಜಿ ಮುಹಮ್ಮದ್ ಶಾಹಿದ್ ರಝ್ವಿಯವರ ನೇತೃತ್ವದ ನಿಯೋಗವು, ನೂತನ ಎಸ್. ಪಿ. ಯಾಗಿ ಅಧಿಕಾರ ವಹಿಸಿಕೊಂಡು ನಗರಕ್ಕೆ ಆಗಮಿಸಿರುವ ಶ್ರೀ ಯುತ ಅಕ್ಷಯ್ ಮಾಚಿಂದರ ಅವರನ್ನು ಹೂ ಗುಚ್ಛ ನೀಡಿ ಜಿಲ್ಲೆಗೆ ಸ್ವಾಗತಿಸಿದರು.

ಈ ಸಂದರ್ಭದಲ್ಲಿ ಉಪಸ್ಥಿತರಿದ್ದ ಧಾರ್ಮಿಕ ಮುಖಂಡರಾದ ಎ.ಯೂಸುಫ್ ಹಾಜಿ, ಅರಿಫ್ ಅಲಿ ಖಾನ್ ರಝ್ವಿ, ಕೆ.ಪಿ.ಅಬೂಬಕರ್ ಮತ್ತು ಇನ್ನಿತರೆ ಸುನ್ನಿ ಮುಖಂಡರು ಮಾತನಾಡಿ, ನಾವು ಎಲ್ಲ ಸಂದರ್ಭದಲ್ಲೂ ಪೊಲೀಸ್ ಇಲಾಖೆಯೊಂದಿಗೆ ಸಹಕಾರ ನೀಡುತ್ತಾ ಬಂದಿದ್ದು ನೂತನವಾಗಿ ಅಧಿಕಾರ ವಹಿಸಿಕೊಂಡ ತಮಗೂ ಎಲ್ಲಾ ರೀತಿಯ ಸಹಕಾರವನ್ನು ನೀಡಲಿದ್ದೇವೆ ಎಂದು ಮಾತು ನೀಡಿದರು.

ದಿನಾಂಕ 06/07/2020 ರಿಂದ ಕರ್ನಾಟಕ ಮುಸ್ಲಿಂ ಜಮಾತ್ ಮತ್ತು ವಿವಿಧ ಸುನ್ನಿ ಸಂಸ್ಥೆಯ ವತಿಯಿಂದ ಕೊವಿಡ್ 19 ಕೊರೊನಾ ರೋಗದಿಂದ ಮುಕ್ತಿ ಹೊಂದಲು ಮತ್ತು ಕೊರೊನಾ ಮಹಾಮಾರಿಯಿಂದ ಸಾರ್ವಜನಿಕರನ್ನು ಮತ್ತು ಮನುಕುಲವನ್ನು ರಕ್ಷಿಸಲು ಅರಿವು ಮೂಡಿಸುವ ಸಲುವಾಗಿ ಮೊಟ್ಟಮೊದಲ ಬಾರಿಗೆ ಜಿಲ್ಲಾದ್ಯಂತ ವಾಹನ ಜಾಥಾವನ್ನು ಪ್ರಾರಂಬಿಸಲಾಗುವುದು. ಈ ಸಂದರ್ಭದಲ್ಲಿ ಸಾರ್ವಜನಿಕರಿಗೆ ಮಾಸ್ಕ್ ನ್ನು ವಿತರಿಸುವ ಕಾರ್ಯಕ್ರಮವನ್ನು ಹಮ್ಮಿಕೊಳ್ಳಲಾಗಿದೆ ಎಂದು ಪ್ರಧಾನ ಕಾರ್ಯದರ್ಶಿಯಾದ ಹಾಜಿ ಫೈರೊಜ್ ಅಹಮದ್ ರಝ್ವಿ ರವರು ಪತ್ರಿಕಾ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

error: Content is protected !! Not allowed copy content from janadhvani.com