janadhvani

Kannada Online News Paper

ಬೆಳ್ತಂಗಡಿ ಅಬ್ದುಲ್‌ ರಝಾಕ್ ಜಿಝಾನ್ ನಲ್ಲಿ ಮೃತ್ಯು: ಕೆಸಿಎಫ್ ನೇತೃತ್ವದಲ್ಲಿ ದಫನ

ರಿಯಾದ್: ಸೌದಿ ಅರೇಬಿಯಾದ ಜಿಝಾನ್ ಬೇಶ್ ನಲ್ಲಿ ಪೆಟ್ರೋಫಾಕ್ ಕಂಪೆನಿಯಲ್ಲಿ ಡ್ರೈವರ್ ಆಗಿ ಕೆಲಸ ಮಾಡುತ್ತಿದ್ದ ದಕ್ಷಿಣ ಕನ್ನಡ ಜಿಲ್ಲೆಯ ಬೆಳ್ತಂಗಡಿ ತಾಲೂಕಿನ ಕೇಳ್ತಾಜೆ ನಿವಾಸಿಯಾದ ಅಬ್ದುಲ್‌ ರಝಾಕ್ ಮುಹಮ್ಮದ್ (47 ) ಅವರು ಅಲ್ಪ ಕಾಲದ ಅಸೌಖ್ಯದಿಂದ ಜಿಝಾನ್ ಅಲ್ ಹಯಾತ್ ಆಸ್ಪತ್ರೆಯಲ್ಲಿ ಚಿಕಿತ್ಸೆ ಫಲಕಾರಿಯಾಗದೆ ಆದಿತ್ಯ ವಾರ ದಿನಾಂಕ 28/06/2020 ರಂದು ನಿಧನರಾದರು.

ಈ ದುಃಖ ವಾರ್ತೆಯನ್ನು ಅವರ ಮನೆಯವರಿಗೆ ತಿಳಿಸಿ ಸೌದಿ ಅರೇಬಿಯಾದಲ್ಲಿ ಕೆಲಸ ಮಾಡುತ್ತಿರುವ ಅವರ ಸೋದರ ಸಂಬಂಧಿ ಮೂಡಿಗೆರೆಯ ಅಝರುದ್ದೀನ್ ಅವರನ್ನು ಸಂಪರ್ಕಿಸಿದ ಪೆಟ್ರೋಫಾಕ್ ಅಡ್ಮಿನ್ ಅಬ್ದುಲ್ ರಶೀದ್ ನೆಲ್ಯಾಡಿ ಅವರು ಜಿಝಾನ್ ನಲ್ಲಿ ದಫನ ಮಾಡಲು ಅವರ ಮನೆಯವರ ಸಮ್ಮತಿಯನ್ನು ಪಡೆದರು.

ಇದಕ್ಕೆ ಬೇಕಾದ ಎಲ್ಲಾ ದಾಖಲೆಗಳನ್ನು ಕೆ.ಸಿ.ಎಫ್‌ ಮದೀನಾ ನೇತಾರರಾದ ಜ|| ಅಬ್ದುಲ್ ರಝಾಕ್ ಉಳ್ಳಾಲ ಅವರು ಸರಿಪಡಿಸಿ ಕೊಟ್ಟು ದಫನ ಕಾರ್ಯಕ್ಕೆ ಇದ್ದ ತೊಡಕುಗಳನ್ನು ನಿವಾರಿಸಿದರು. ದಿನಾಂಕ 01/07/2020 ಬುಧವಾರ ಪೂರ್ವಾಹ್ನ 11 ಘಂಟೆಗೆ ಜಿಝಾನ್ ಖಬರಸ್ಥಾನದಲ್ಲಿ ದಫನ ಮಾಡಲಾಯಿತು. ಮೃತರು ಪತ್ನಿ, ಪುತ್ರಿ ಮತ್ತು ಇಬ್ಬರು ಪುತ್ರರು ಸೇರಿದಂತೆ ಅನೇಕ ಬಂಧು ಮಿತ್ರ ರನ್ನು ಅಗಲಿದ್ದಾರೆ.
ಪೆಟ್ರೋಫಾಕ್ ಕಂಪೆನಿಯ ರಾಝಿಕ್ ನೆಲ್ಯಾಡಿ ಅಗತ್ಯ ಸಹಕಾರ ನೀಡಿದರು.
ಕೆ.ಸಿ.ಎಫ್ ಬೇಶ್ ನ ಕಾರ್ಯಕರ್ತರು, ಪೆಟ್ರೋಫಾಕ್ ಕಂಪೆನಿಯ ಉದ್ಯೋಗಿಗಳು ಹಾಗೂ ಮೃತರ ಸ್ನೇಹಿತರು ಸ್ಥಳದಲ್ಲಿ ಉಪಸ್ಥಿತರಿದ್ದರು.

error: Content is protected !! Not allowed copy content from janadhvani.com